More

    ರಾಜಕೀಯದ ಜೂಮ್​ ಮೀಟಿಂಗ್​ನಲ್ಲಿ ಪ್ಲೇ ಆಯ್ತು ಪೋರ್ನ್​ ವಿಡಿಯೋ! ಹ್ಯಾಕರ್​ ಬಲೆಗೆ ಬಿದ್ದ ಮೀಟಿಂಗ್​!

    ಬ್ಯೂನಸ್ ಐರಿಸ್: ಕರೊನಾ ಹಾವಳಿ ಆರಂಭವಾದಾಗಿನಿಂದ ಜೂಮ್​ ಮೀಟಿಂಗ್​ಗಳು ಹೆಚ್ಚಾಗಿವೆ. ಆದರೆ ಅದನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಸೈಬರ್​ ಕದೀಮರು, ರಾಜಕಾರಣಿಯೊಬ್ಬರ ಮೀಟಿಂಗ್​ನಲ್ಲಿ ಪೋರ್ನ್​ ವಿಡಿಯೋ ಹಾಕಿಬಿಟ್ಟಿದ್ದಾರೆ.

    ಹೌದು. ಇಂತದ್ದೊಂದು ಘಟನೆ ಅರ್ಜೆಂಟಿನಾದಲ್ಲಿ ನಡೆದಿದೆ. ಆಡಳಿತ ಪಕ್ಷದ ಗುಸ್ಟಾವೊ ಬೊರ್ಡೆಟ್ ಹೆಸರಿನ ರಾಜಕೀಯ ವ್ಯಕ್ತಿ ಯುವಕರೊಂದಿಗೆ ಜೂಮ್​ ಮೀಟಿಂಗ್​ ಇಟ್ಟುಕೊಂಡಿದ್ದರು. ಕರೊನಾದ ಈ ಸಂಕಷ್ಟದಲ್ಲಿ ರಾಜಕೀಯ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಮೀಟಿಂಗ್​ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಪೋರ್ನ್​ ವಿಡಿಯೋ ಒಂದು ಸ್ಕ್ರೀನ್​ ಮೇಲೆ ಪ್ಲೇ ಆಗಿದೆ. ಮೀಟಿಂಗ್​ನಲ್ಲಿ ಭಾಗವಹಿಸಿದ್ದ ಸದಸ್ಯರು ಅಸಹ್ಯ ಪಟ್ಟುಕೊಂಡು ಮೀಟಿಂಗ್​ನಿಂದ ಹೊರಬಂದಿದ್ದಾರೆ. ಮೀಟಿಂಗ್​ ಆಯೋಜಿಸಿದವರೂ ತಕ್ಷಣ ಎಚ್ಚೆತ್ತುಕೊಂಡಿದ್ದು, ಮೀಟಿಂಗ್​ ಅನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

    ಆದರೆ ಅಷ್ಟರಲ್ಲಾಗಲೇ ಇನ್ನೊಂದು ಸಮಸ್ಯೆಯೂ ಎದುರಾಗಿದೆ. ಹಿಂದೆ ಪೋರ್ನ್​ ವಿಡಿಯೋ ಕಾಣಿಸುತ್ತಿದ್ದು, ಮುಂದೆ ಗುಸ್ಟಾವೊ ಬೊರ್ಡೆಟ್ ಮೀಟಿಂಗ್​ ನಡೆಸುತ್ತಿರುವ ಫೋಟೋವನ್ನು ಹ್ಯಾಕರ್​ಗಳು ಎಡಿಟ್​ ಮಾಡಿ ಅದಾಗಲೇ ಸಾಮಾಜಿಕ ಜಾಲತಾಣಗಳಿಗೆ ಬಿಟ್ಟುಬಿಟ್ಟಿದ್ದಾರೆ. ಅದು ವೈರಲ್​ ಆಗಿದೆ ಕೂಡ. ಈ ವಿಚಾರದಲ್ಲಿ ಪ್ರಕರಣ ದಾಖಲೆಯಾಗಿದೆಯಾದರೂ ಇನ್ನೂ ಯಾವುದೇ ಆರೋಪಿಗಳನ್ನು ವಶಕ್ಕೆ ಪಡೆದಿಲ್ಲ. (ಏಜೆನ್ಸೀಸ್)

    ಒಂದೇ ಕಾಲಿನ ತೂಕ 45 ಕೆಜಿ! ನಾನೆಂದರೆ ಒಂದು ಶಕ್ತಿ ಎಂದು ಧೈರ್ಯದಿಂದ ಹೇಳಿಕೊಳ್ಳುವ ಮಾಡೆಲ್​

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts