More

    264 ದಿನಗಳ ಜೂಮ್​ ಮೀಟಿಂಗ್​ಗೆ ಒಂದೇ ಶರ್ಟ್ ಧರಿಸಿದ್ದ ಮಹಿಳೆ! ಆಫೀಸಿಗೆ ಹೋದ ಮೇಲೆ ಆಗಿದ್ದೇನು?

    ವಾಷಿಂಗ್ಟನ್: ನೀವು ಕೆಲಸ ಮಾಡುವ ಕಂಪನಿಗಳಲ್ಲಿ ಕೆಲವು ಕ್ರೇಜಿ ಎನಿಸುವ ವ್ಯಕ್ತಿಗಳನ್ನು ನೋಡಿರುತ್ತೀರಿ. ಆದರೆ ಈ ಮಹಿಳೆಯ ಬಗ್ಗೆ ತಿಳಿದನಂತರ, ನಿಮ್ಮಲ್ಲಿನ ಕ್ರೇಜಿ ವ್ಯಕ್ತಿ ಸ್ವಲ್ಪ ಸಪ್ಪೆ ಎನಿಸುವುದು ಗ್ಯಾರಂಟಿ.

    ಕರೊನಾದಿಂದಾಗಿ ಎಲ್ಲರಿಗೂ ವರ್ಕ್​ ಫ್ರಂ ಹೋಂ ಆಪ್ಶನ್ ಸಿಕ್ಕುಬಿಟ್ಟಿದೆ. ಮನೆಯಲ್ಲೇ ಕೆಲಸ ಮಾಡಿಕೊಂಡು, ಜೂಮ್​ ಮೀಟಿಂಗ್​ಗಳನ್ನು ಅಟೆಂಡ್ ಮಾಡಿಕೊಂಡೇ ಜೀವನ ನಡೆಯುತ್ತಿದೆ. ಇದರಲ್ಲೂ ಹಾಸ್ಯ ಇರಬೇಕೆಂದು ಬಯಸಿದ ಅಮೆರಿಕದ ಮಹಿಳೆಯೊಬ್ಬಳು, ತನ್ನ ಆಫೀಸಿನ ಜೂಮ್ ಮೀಟಿಂಗ್​ನಲ್ಲಿ ಒಂದು ವಿಶೇಷ ಕೆಲಸ ಮಾಡಿದ್ದಾಳೆ. ಪ್ರತಿ ದಿನ ನಡೆಯುತ್ತಿದ್ದ ಮೀಟಿಂಗ್​ಗೆ ಒಂದೇ ಶರ್ಟ್ ಹಾಕಿಕೊಂಡು ಅಟೆಂಡ್​ ಆಗಿದ್ದಾಳೆ. ಬರೋಬ್ಬರಿ 264 ದಿನಗಳ ಕಾಲ ಆಕೆ ಅದೊಂದೇ ಶರ್ಟ್​ನಲ್ಲಿ ಜೂಮ್​ ಮೀಟಿಂಗ್​ನಲ್ಲಿ ಭಾಗವಹಿಸಿದ್ದಾಳೆ.

    ಇತ್ತೀಚೆಗೆ ಆಕೆಯ ಆಫೀಸ್ ಮತ್ತೆ ತೆರದಿದ್ದು, ವರ್ಕ್​ ಫ್ರಂ ಹೋಂ ಮಾಡುತ್ತಿರುವವರು ಆಫೀಸಿಗೆ ಬನ್ನಿ ಎಂದಿದ್ದರಂತೆ. ಆ ಹಿನ್ನೆಲೆಯಲ್ಲಿ ಆಕೆ ಆಫೀಸಿಗೆ ಹೋಗಿದ್ದಾಳೆ. ಹೋಗುವಾಗ ಮತ್ತೆ ಅದೇ ಶರ್ಟ್​ ಅನ್ನು ಧರಿಸಿ ಹೋಗಿದ್ದಾಳೆ. ಆದರೆ ವಿಚಿತ್ರವೆಂದರೆ ಅಷ್ಟೊಂದು ದಿನ ಅದೇ ಶರ್ಟ್​ ಹಾಕಿದ್ದರು ಯಾವೊಬ್ಬ ಸಹೋದ್ಯೋಗಿಯೂ ಅದನ್ನು ಗಮನಿಸಿರಲಿಲ್ಲವಂತೆ. ಆಫೀಸಿಗೆ ಹೋದಾಗಲೂ ಯಾರೂ ಗಮನಿಸದಿದ್ದುದ್ದನ್ನು ಕಂಡು ಆಕೆಯೇ ತನ್ನ ಸಹೋದ್ಯೋಗಿಗಳಿಗೆ ವಿಚಾರ ಹೇಳಿದ್ದಾಳೆ. ಅದಾದ ಮೇಲೆ ಆಕೆಯ ಕ್ರೇಜಿನೆಸ್ ಬಗ್ಗೆ ಎಲ್ಲರೂ ನಗಲಾರಂಭಿಸಿದ್ದಾರೆ.

    ಸದ್ಯ ಆ ಮಹಿಳೆ ತನ್ನ ಹಳೆಯ ಸಂಸ್ಥೆಯನ್ನು ಬಿಟ್ಟು ಬೇರೊಂದು ಕಡೆ ಕೆಲಸಕ್ಕೆ ಸೇರಿದ್ದಾಳಂತೆ. ಈ ಎಲ್ಲ ಕಥೆಯನ್ನು ಆಕೆ ತನ್ನ ಟಿಕ್​ಟಾಕ್​ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ. (ಏಜೆನ್ಸೀಸ್)

    ಎರಡು ವರ್ಷದಿಂದ ಸಂಬಳವಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಶಿಕ್ಷಕ! ಡೆತ್​ನೋಟ್​ನಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು!

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts