More

    ಫೇರ್​ ಆ್ಯಂಡ್​ ಲವ್ಲೀ ಹೆಸರು ಬದಲಾಯಿಸಿದ ಹಿಂದುಸ್ತಾನ್​ ಯುನಿಲೀವರ್​

    ನವದೆಹಲಿ: ಹಿಂದುಸ್ಥಾನ್​ ಯುನಿಲೀವರ್​ ಲಿಮಿಟೆಡ್​ನ ಫ್ಲ್ಯಾಗ್​ಶಿಪ್​ ಬ್ರ್ಯಾಂಡ್​ ಆಗಿದ್ದ ಫೇರ್​ ಆ್ಯಂಡ್​ ಲವ್ಲೀ ಈಗ ಬದಲಾಗಿದೆ.

    ಹೌದು… ಫೇರ್​ನೆಸ್ ಕ್ರೀಮ್​ ಉತ್ಪನ್ನದ ಹೆಸರು ಬದಲಾಯಿಸುವುದಾಗಿ ಈ ಹಿಂದೆಯೇ ಕಂಪನಿ ತಿಳಿಸಿತ್ತು. ಅದರ ಬದಲಾದ ಹೆಸರನ್ನು ಸಂಬಂಧಿತ ಪ್ರಾಧಿಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿತ್ತು. ಇದೀಗ ಅದರ ಹೆಸರನ್ನು ಬಹಿರಂಗಪಡಿಸಿದೆ.

    ಇನ್ನು ಮುಂದೆ ಫೇರ್​ ಆ್ಯಂಡ್​ ಲವ್ಲೀ ಹೆಸರನ್ನು ಗ್ಲೋ ಆ್ಯಂಡ್​ ಲವ್ಲೀ ಎಂದು ಬದಲಾಯಿಸಲಾಗಿದೆ. ಪುರುಷರು ಬಳಸುವ ಸ್ಕಿನ್​ ಕೇರ್​ ಕ್ರೀಮ್ಅನ್ನು ಗ್ಲೋ ಆ್ಯಂಡ್​ ಹ್ಯಾಂಡ್​ಸಮ್​ ಎಂದು ಘೋಷಿಸಿದೆ.

    ಇದನ್ನೂ ಓದಿ: ‘ಫೇರ್​ ಆ್ಯಂಡ್​ ಲವ್ಲೀ’ಯಲ್ಲಿ ಇನ್ನು ಮುಂದೆ ಇರೋದಿಲ್ಲ ಫೇರ್​; ಏನು ಹೇಳುತ್ತೆ ಕಂಪನಿ?

    ಜತೆಗೆ ತನ್ನ ಉತ್ಪನ್ನ ಹಾಗೂ ಅವುಗಳ ಪ್ಯಾಂಕಿಂಗ್​ನಲ್ಲೆಲ್ಲೂ ಫೇರ್​, ಫೇರ್​ನೆಸ್​, ಲೈಟ್​, ಲೈಟ್​ನಿಂಗ್ ಎಂಬ ಪದಗಳನ್ನು ಬಳಸದಿರಲು ಕಂಪನಿ ನಿರ್ಧರಿಸಿದೆ.

    ಕಪ್ಪು ವರ್ಣದವರನ್ನು ಕೀಳಾಗಿ ನೋಡಲಾಗುತ್ತದೆ ಹಾಗೂ ಮನುಷ್ಯರ ಬಣ್ಣಗಳ ಆಧಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಟೀಕೆ ಬಲವಾದ ಕಾರಣ ಹಿಂದುಸ್ಥಾನ ಯುನಿಲೀವರ್​ ಹೆಸರನ್ನು ಬದಲಾಯಿಸಲು ನಿರ್ಧರಿಸಿತ್ತು.

    ಇದನ್ನೂ ಓದಿ: ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಇದಲ್ಲದೇ, ಅಮೆರಿಕದಲ್ಲಿ ಬ್ಲ್ಯಾಕ್​ ಲೈವ್ಸ್​ ಮ್ಯಾಟರ್ಸ್​ ಹೋರಾಟ ತೀವ್ರತೆ ಪಡೆದುಕೊಂಡಿದ್ದು ಕೂಡ ಕಂಪನಿಗೆ ಮುಳುವಾಗಿ ಪರಿಣಮಿಸಿತ್ತು.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts