ಜುವೆಲ್ಸ್ ಆಫ್ ಇಂಡಿಯಾ ಆಭರಣ ಮೇಳಕ್ಕೆ ಚಾಲನೆ; ಅಕ್ಷಯ ತೃತೀಯ ಸರಣಿ, ತಾಜ್ ವೆಸ್ಟೆಂಡ್‌ನಲ್ಲಿ ಪ್ರದರ್ಶನ

jewels
Published on

ಬೆಂಗಳೂರು: ಕಳೆದ 26 ವರ್ಷಗಳಿಂದ ಗ್ರಾಹಕರ ಗಮನ ಸೆಳೆದಿರುವ ಜುವೆಲ್ಸ್ ಆ್ ಇಂಡಿಯಾ ಮೇಳದ ಅಕ್ಷಯ ತೃತೀಯಾ ಸರಣಿಗೆ ಶುಕ್ರವಾರ ಚಾಲನೆ ದೊರೆಯಿತು.

ರೇಸ್‌ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ನ ವೆಸ್ಟ್ ಎಂಡ್ ಕೋರ್ಟ್ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನಗಳು ನಡೆಯಲಿರುವ ಜುವೆಲ್ಸ್ ಆಫ್ ಇಂಡಿಯಾಕ್ಕೆ ರೂಪದರ್ಶಿ ಹಿತ ಚಂದ್ರಶೇಖರ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಆಭರಣ ಪ್ರದರ್ಶನ ಮಳಿಗೆಗಳನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಸಾಮಾನ್ಯವಾಗಿ ಅಕ್ಷಯ ತೃತೀಯಾ ಸಂದರ್ಭದಲ್ಲಿ ಬಂಗಾರ ಖರೀದಿಸುವವರ ಸಂಖ್ಯೆ ಹೆಚ್ಚು. ಆದರೆ ಈ ಸಂದರ್ಭದಲ್ಲಿ ಬೆಲೆ ಏರಿಕೆ ಒಂದು ಕಡೆಯಾದರೆ ಎಲ್ಲ ಅಂಗಡಿಗಳೂ ಬ್ಯುಸಿಯಾಗಿರುವುದು ಸಾಮಾನ್ಯ. ಆ ಕಾರಣಕ್ಕಾಗಿ ಜುವೆಲ್ಸ್ ಆಫ್ ಇಂಡಿಯಾ ಇದೇ ಮೊದಲ ಬಾರಿಗೆ ಅಕ್ಷಯ ತೃತೀಯಾ ಸರಣಿ ವಿಶೇಷ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ.

ಕಲ್ಕತ್ತಾ, ಬಾಂಬೆ, ಡೆಲ್ಲಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ಆಗಮಿಸಿರುವ ಸುಮಾರು 40ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿ ಪಾಲ್ಗೊಂಡಿವೆ. ಬಂಗಾರ, ಬೆಳ್ಳಿ ಮತ್ತು ವಜ್ರದ ಆಭರಣಗಳ ಅತ್ಯಾಕರ್ಷಕ ಕಲೆಕ್ಷನ್‌ಗಳಿದ್ದು, ಸಿಂಪಲ್ ಡಿಸೈನ್, ಅದ್ಧೂರಿಯಾದ ಕಲಾಕುಸರಿ ಡಿಸೈನ್ ಹಾಗೂ ಟ್ರೆಡಿಷನಲ್ ಆಭರಣಗಳು ಇಲ್ಲಿವೆ. ಗ್ರಾಹಕರಿಗೆ ಪ್ರವೇಶ ಉಚಿತವಾಗಿದೆ ಎಂದು ಡೆಪ್ಯೂಟಿ ಕನ್ವಿನರ್ ಹೇಮಂತ್ ಜೈನ್ ತಿಳಿಸಿದ್ದಾರೆ.

"ಮಹಿಳೆಯರಿಗೆ ಬಂಗಾರ ಅಂದರೆ ಬಹಳ ಪ್ರೀತಿ. ಕೆಲವರಿಗೆ ಸಿಂಪಲ್ ಡಿಸೈನ್ ಇಷ್ಟವಾಗುತ್ತೆ. ಇನ್ನೂ ಕೆಲವರಿಗೆ ಆಡಂಬರದ ಒಡವೆ ಇಷ್ಟವಾಗುತ್ತದೆ. ಜುವೆಲ್ಸ್ ಆಫ್ ಇಂಡಿಯಾ ಆಯೋಜಿಸಿರುವ ಮೇಳದಲ್ಲಿ ಎಲ್ಲ ಬಗೆಯ ಡಿಸೈನ್‌ಗಳು ಗಮನ ಸೆಳೆಯುತ್ತಿವೆ. ಬೆಂಗಳೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಡಬಹುದು." -ಹಿತ ಚಂದ್ರಶೇಖರ್, ರೂಪದರ್ಶಿ

"ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮದುವೆ, ಹಬ್ಬ ಇನ್ನಿತರೆ ಕಾರಣಗಳಿಗೆ ಆಭರಣ ಖರೀದಿಸುವವರು ತಡಮಾಡಬಾರದು. ಬಂಗಾರದ ಬೆಲೆ ಯಾರ ಹಿಡಿತದಲ್ಲೂ ಇಲ್ಲ. ಆದರೆ ಜುವೆಲ್ಸ್ ಆಪ್ ಇಂಡಿಯಾ ಮೇಳದಲ್ಲಿ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜ್ ಮೇಲೆ ರಿಯಾಯಿತಿ ನೀಡುತ್ತಿದ್ದೇವೆ." - ವಿಕ್ರಮ್ ಮೆಹ್ತಾ, ಮೇಳದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net