ನೀಲಿಚಿತ್ರ ತಾರೆ ಜೆಸ್ಸಿ ಜೇನ್ ಸತ್ತಿದ್ದು ಮಿತಿ ಮೀರಿದ ಮಾದಕ ದ್ರವ್ಯ ಸೇವನೆಯಿಂದ; ಪರೀಕ್ಷೆಯಲ್ಲಿ ಬಹಿರಂಗ

porn star
Published on

ಬೆಂಗಳೂರು: ನೀಲಿಚಿತ್ರ ತಾರೆ ಜೆಸ್ಸಿ ಜೇನ್ 2024 ರ ಜನವರಿಯಲ್ಲಿ ತನ್ನ ಗೆಳೆಯನ ಮನೆಯಲ್ಲಿ ಸಾವನ್ನಪ್ಪಿದ್ದು ಮಾದಕ ವಸ್ತುಗಳ ಮಿತಿ ಮೀರಿ ಸೇವಿನೆಯಿಂದ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗವಾಗಿದೆ.ಆಕೆ ಸೇವಿಸಿದ್ದ ಕೊಕೇನ್ ವಿಷವಾಗಿತ್ತು ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಜೆಸ್ಸಿ ಜೇನ್​ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಿಂಡಿ ಟೇಲರ್ ಅಥವಾ ಸಿಂಥಿಯಾ ಆನ್ ಹೋವೆಲ್ ಎಂಬ ಹೆಸರಿನ 43 ವರ್ಷದ ನಟಿ, 2024ರ ಜನವರಿ 24 ರಂದು ಒಕ್ಲಹೋಮದಲ್ಲಿರುವ ತನ್ನ ಬಾಯ್​ಫ್ರೆಂಡ್ ಮನೆಯಲ್ಲಿ ಪತ್ತೆಯಾಗಿದ್ದರು. ಆಕೆಯ ಗೆಳೆಯ ಬ್ರೆಟ್ ಹಸೆನ್ ಮುಲ್ಲರ್ (33) ಕೂಡ ಘಟನಾ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದ.

ಒಕ್ಲಹೋಮ ವೈದ್ಯಕೀಯ ಪರೀಕ್ಷಕರ ಕಚೇರಿ ಶವಪರೀಕ್ಷೆಯನ್ನು ನಡೆಸಿದ್ದು, ತೀವ್ರವಾದ ಫೆಂಟಾನಿಲ್ ಮತ್ತು ಕೊಕೇನ್ ನಶೆ ಕಾರಣ ಎಂದು ಬಹಿರಂಗಪಡಿಸಿದೆ. ಭಾನುವಾರ ಬಿಡುಗಡೆಯಾದ ವರದಿಯಲ್ಲಿ, ಜೇನ್ ಅವರ ದೇಹವು ಕೊಳೆತ ಸ್ಥಿತಿಯಲ್ಲಿತ್ತು ಎಂದು ಹೇಳಿದೆ. ದೇಹ ಪತ್ತೆಯಾಗುವ ಮೊದಲು ಸಾಕಷ್ಟು ಸಮಯದವರೆಗೆ ಸತ್ತಿದ್ದಾರೆ ಎಂದು ಸೂಚಿಸುತ್ತದೆ.

ಗೆಳೆಯನ ಮನೆಯ ಮಾಲೀಕರು ಅನುಮಾನದ ಮೇರೆಗೆ ಮನೆಯನ್ನು ಪರಿಶೀಲನೆ ನಡೆಸಿದ್ದರು. ಇದರಿಂದಾಗಿ ಪೊಲೀಸರು ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿಗೆ ಕಾರಣ ಆ ಸಮಯದಲ್ಲಿ ಮಿತಿಮೀರಿದ ಸೇವನೆ ಎಂದು ಶಂಕಿಸಲಾಗಿದೆ.

ಜೆಸ್ಸಿ ಜೇನ್ ವಯಸ್ಕರ ಮನರಂಜನಾ ಉದ್ಯಮದಲ್ಲಿ ಹೆಸರು ಗಳಿಸಿದ್ದರು. 100ಕ್ಕೂ ಹೆಚ್ಚು ವಯಸ್ಕರ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅನೇಕ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ಗಳಿಸಿದರು. ಅವರು 2002 ರಲ್ಲಿ ತಮ್ಮ ಅಶ್ಲೀಲ ವೃತ್ತಿಜೀವನವನ್ನು ಪ್ರಾರಂಭಿಸಿದರು, ಡಿಜಿಟಲ್ ಪ್ಲೇಗ್ರೌಂಡ್ ಸ್ಟುಡಿಯೊದೊಂದಿಗೆ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದರು, ಅಲ್ಲಿ ಅವರು 2014 ರವರೆಗೆ ಇದ್ದರು. ನಂತರ ಅವರು ಜೂಲ್ಸ್ ಜೋರ್ಡಾನ್ ವಿಡಿಯೋದೊಂದಿಗೆ ಸಹಿ ಹಾಕಿದ್ದರು. 2017ರಲ್ಲಿ ಉದ್ಯಮದಿಂದ ನಿವೃತ್ತಿ ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net