

ಲೀಡ್ಸ್: ಭಾರತದ ಸ್ಟಾರ್ ಬ್ಯಾಟುಗಾರ್ತಿ ಜೆಮೀಮಾ ರೋಡ್ರಿಗಸ್ ‘ದ ಹಂಡ್ರೆಡ್’ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಜೆಮೀಮಾ ರೋಡ್ರಿಗಸ್ (92ರನ್, 43 ಎಸೆತ, 17 ಬೌಂಡರಿ, 1 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ ನಾಥರ್ನ್ ಸೂಪರ್‌ಚಾರ್ಜರ್ಸ್ ತಂಡ 6 ವಿಕೆಟ್‌ಗಳಿಂದ ವೆಲ್ಸ್ ಫೈರ್ ತಂಡವನ್ನು ಸೋಲಿಸಿತು. ಇದರೊಂದಿಗೆ 100 ಎಸೆತಗಳ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟುಗಾರ್ತಿ ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದರು.
ದ ಹಂಡ್ರೆಡ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ರೋಡ್ರಿಗಸ್ ಭರ್ಜರಿ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಒಂದು ಹಂತದಲ್ಲಿ ಸೂಪರ್‌ಚಾರ್ಜರ್ಸ್ ತಂಡ 18 ಎಸೆತಗಳಲ್ಲಿ 4 ವಿಕೆಟ್‌ಗೆ 19 ರನ್ ಪೇರಿಸಿತ್ತು. ಬಳಿಕ ಕ್ರೀಸ್‌ಗಿಳಿದ ರೋಡ್ರಿಗಸ್ ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ತವರಿನಲ್ಲಿ ನಡೆದ ದ.ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡದಿಂದ ರೋಡ್ರಿಗಸ್ ಅವರನ್ನು ಕೈಬಿಡಲಾಗಿತ್ತು. ಅಲ್ಲದೆ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.
ವೆಲ್ಸ್ ಫೈರ್: 100 ಎಸೆತಗಳಲ್ಲಿ 8 ವಿಕೆಟ್‌ಗೆ 131 (ಎಚ್.ಮ್ಯಾಥ್ಯೂಸ್ 30, ಲಿನ್ಸೆ ಸ್ಮಿತ್ 14ಕ್ಕೆ3), ನಾಥರ್ನ್ ಸೂಪರ್‌ಚಾರ್ಜರ್ಸ್: 85 ಎಸೆತಗಳಲ್ಲಿ 4 ವಿಕೆಟ್‌ಗೆ 131 (ಜೆಮೀಮಾ ರೋಡ್ರಿಗಸ್ 92).