ಜೆಡಿಎಸ್ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ

01
Published on

ಹಳೆಯಂಗಡಿ: ಕಿನ್ನಿಗೋಳಿ ಕಟೀಲು ಪರಿಸರದ ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಟೀಲು ವಲಯದ ಕಾಂಗ್ರೆಸ್ ನಾಯಕ ನವೀನ್ ಕುಮಾರ್ ಮಲ್ಲಿಗೆಯಂಗಡಿ ಶಿಫಾರಸಿನ ಮೇರೆಗೆ ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಸಂಜೀವ ಮಡಿವಾಳ ಹಾಗೂ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ನಿರ್ದೇಶಕ ಸುಶಿತ್ ಸಾಲ್ಯಾನ್ ಕಟೀಲು, ಸ್ಥಳೀಯ ಜೆಡಿಎಸ್ ನಾಯಕ ಕೆ.ಬಿ.ಸುರೇಶ್ ಮೂರುಕಾವೇರಿ ಮತ್ತಿತರರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ರಾಜ್ಯ ಯುವ ನಾಯಕರಾದ ಮಿಥುನ್ ರೈ ಜೆಡಿಎಸ್ ನಾಯಕರನ್ನು ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

ಕೆಪಿಸಿಸಿ ಕೋ-ಆರ್ಡಿನೇಟರ್ ವಸಂತ ಬರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್ ಕೋಟ್ಯಾನ್, ಬ್ಲಾಕ್ ಕಾರ್ಯದರ್ಶಿ ಮಂಜುನಾಥ ಕಂಬಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net