ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಸಮಗ್ರ ಪ್ರಶಸ್ತಿ

jci
ವಲಯ 15ರ ಮಧ್ಯಂತರ ಜೆಸಿಐ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ತಂಡ ಪ್ರಶಸ್ತಿ ಸ್ವೀಕರಿಸಿತು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಒಳಗೊಂಡ ವಲಯ 15ರ ಮಧ್ಯಂತರ ಜೆಸಿಐ ಸಮ್ಮೇಳನವು ವಿಟ್ಲದಲ್ಲಿ ಇತ್ತೀಚೆಗೆ ನಡೆದಿದ್ದು, ಜೆಸಿಐ ಬೆಳ್ತಂಗಡಿಗೆ ಹಲವು ಪ್ರಶಸ್ತಿಗಳು ಲಭಿಸಿತು.

ತನ್ನ ಸಮಾಜಮುಖಿ ಚಟುವಟಿಕೆಗೆ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ವಲಯದ ಹಿರಿಯ ಘಟಕಗಳಲ್ಲಿ ಒಂದಾದ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪಡೆದುಕೊಂಡಿತು. ಸ್ಪೆಷಲ್ ಪ್ರಾಜೆಕ್ಟ್ ರನ್ನರ್ ಪ್ರಶಸ್ತಿ, ಗೋಲ್ಡನ್ ಘಟಕ ಪ್ರಶಸ್ತಿ, ಜೆಸಿ ಮಿನುಗು ತಾರೆ ಪ್ರಶಸ್ತಿ, ವನ್ ಸ್ಟಾರ್ ಪ್ರೆಸಿಡೆಂಟ್ ಪ್ರಶಸ್ತಿ, ತರಬೇತಿ ವಿಭಾಗದಲ್ಲಿ ಮಾರ್ಚ್ ತಿಂಗಳ ಎಕ್ಸಲೆನ್ಸ್ ಪ್ರಶಸ್ತಿ ಲಭಿಸಿತು.

ಅಧ್ಯಕ್ಷ ರಂಜಿತ್ ಎಚ್.ಡಿ ಬಳಂಜ ಅವರಿಗೆ ಯುವರತ್ನ ಹಾಗೂ ಕನಕ ಸಿಂಚನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತಂಡಕ್ಕೆ ಕರುನಾಡ ವೈಭವದಲ್ಲಿ ಪ್ರಥಮ ಸ್ಥಾನ, ಬ್ಯಾನರ್ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಮತ್ತು ಫೋಟೋ ಪ್ರದರ್ಶನಗಳಲ್ಲಿ ಪ್ರಥಮ ಸ್ಥಾನ ದೊರೆಯಿತು. ಭಾಷಣದಲ್ಲಿ ಚಂದ್ರಹಾಸ್ ಬಳಂಜ ಹಾಗೂ ಅನನ್ಯ ಜೈನ್ ಪ್ರಥಮ ಹಾಗೂ ಜೆಜೆಸಿ ವಿಭಾಗದಲ್ಲಿ ನೇವಿಲ್ ಮೋರಸ್ ಅವರಿಗೆ ದ್ವಿತೀಯ ಸ್ಥಾನ ಲಭಿಸಿತು.

ವಲಯಾಧ್ಯಕ್ಷ ಅಡ್ವೋಕೇಟ್ ಗಿರೀಶ್ ಎಸ್.ಪಿ, ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ವಲಯ ಉಪಾಧ್ಯಕ್ಷ ಹಾಗೂ ನಿಕಟಪೂರ್ವಾಧ್ಯಕ್ಷ ಶಂಕರ್ ರಾವ್, ಕಾರ್ಯದರ್ಶಿ ಅನುದೀಪ್ ಜೈನ್, ಮಹಿಳಾ ಜೆಸಿ ಸಂಯೋಜಕಿ ಶೃತಿ ರಂಜಿತ್, ಮಧ್ಯಂತರ ಸಮ್ಮೇಳನ ಸಂಯೋಜಕರಾದ ಚಂದ್ರಹಾಸ್ ಬಳಂಜ ಹಾಗೂ ಆಶಾ ಪ್ರಶಾಂತ್, ಘಟಕದ ಪೂರ್ವಾಧ್ಯಕ್ಷರು, ಸದಸ್ಯರು, ಜೆಜೆಸಿ ವಿಭಾಗದ ಅಧ್ಯಕ್ಷ-ಪದಾಧಿಕಾರಿಗಳು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net