ಬಾಲಿವುಡ್​ನಲ್ಲಿ ಮುಂದುವರಿದಿದೆ ಸೋಲಿನ ಸರಣಿ: ರಣವೀರ್​​ ನಟನೆಯ ಜಯೇಶ್​​ಭಾಯಿ ಜೋರ್ದಾರ್​ ಗಳಿಸಿದ್ದು ಇಷ್ಟೇ?

Ranveer
Published on

ಮುಂಬೈ: ದಕ್ಷಿಣ ಭಾರತದ ಸಿನಿಮಾಗಳಿಂದ ಕಂಗೆಟ್ಟಿರುವ ಬಾಲಿವುಡ್​​ ಮತ್ತೆ ಸೋಲಿನ ಸರಣಿ ಮುಂದುವರಿದಿದೆ. ಇತ್ತೀಚೆಗೆ ಯಾವೊಂದೂ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುತ್ತಿಲ್ಲ. ಅಲ್ಲದೇ ಸ್ಟಾರ್​ ನಟರ ಚಿತ್ರಗಳು ಮಕಾಡೆ ಮಲಗಿವೆ. ಇದಕ್ಕೆ ಉತ್ತಮ ಉದಾಹರಣೆ ರಣವೀರ್​ ಕಪೂರ್​ ನಟನೆಯ ಜಯೇಶ್​​ಭಾಯಿ ಜೋರ್ದಾರ್​ .

ಭಾರೀ ಕಳಪೆ ಗಳಿಕೆ ಕಂಡಿರುವ ರಣವೀರ್​​ ನಟನೆಯ ಈ ಚಿತ್ರ ತೀರಾ ಕಳಪೆ ಸಾಧನೆ ಮಾಡಿದೆ. ಇನ್ನು ಚಿತ್ರಕ್ಕೆ ಹಾಕಿರುವ ದುಡ್ಡು ವಾಪಸ್​​ ಬರುತ್ತಾ ಎಂಬ ಲೆಕ್ಕಾಚಾರ ಶುರುವಾಗಿದೆ.

ಬಾಲಿವುಡ್​ ಚಿತ್ರಗಳು ಬಿಡುಗಡೆಯಾದ ದಿನವೇ 20 ಕೋಟಿ ರೂ. ಗಳಿಕೆ ಕಾಣುತ್ತಿದ್ದವು. ಆದರೆ ಈಗ ಈ ರೀತಿ ಇಲ್ಲ. ರಣವೀರ್​ ನಟನೆಯ ಚಿತ್ರ ಬಿಡುಗಡೆಯಾಗಿ 2ದಿನಕ್ಕೆ ಕೇವಲ 7 ಕೋಟಿ ರೂ ಮಾತ್ರ ಗಳಿಕೆ ಕಂಡಿದೆ. ಇದು ಬಾಲಿವುಡ್​ಗೆ ಮುಖಭಂಗವೆಂದೇ ಹೇಳಬಹುದು.

ಮೊದಲ ದಿನ 4 ಕೋಟಿ ರೂ. ಹಾಗೂ 2ನೇ ದಿನದಲ್ಲಿ 3 ಕೋಟಿ ರೂ. ಮಾತ್ರ ಗಳಿಸಿದೆ. ಇದು ವಾರಾಂತ್ಯದ ಲೆಕ್ಕವಾದರೆ ಇನ್ನು ವಾರದ ದಿನಗಳಲ್ಲಿ ಇದಕ್ಕೂ ಹೆಚ್ಚು ಕಡಿಮೆ ಗಳಿಕೆಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಒಟ್ಟಾರೆ ದಕ್ಷಿಣ ಸಿನಿಮಾಗಳಿಂದ ಬಾಲಿವುಡ್​ ಸಿನಿಮಾಗಳು ಸೋಲಿನ ರುಚಿಯನ್ನು ಕಾಣುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net