

ವಿಟ್ಲ: ಯುವ ಪೀಳಿಗೆಗೆ ಶಿಕ್ಷಣ ಭವಿಷ್ಯದ ಭದ್ರ ಬುನಾದಿಯಾಗಿದ್ದು, ವಿದ್ಯಾರ್ಥಿಗಳ ನಡವಳಿಕೆ ಹಾಗೂ ವ್ಯಕ್ತಿತ್ವವನ್ನು ಶಿಕ್ಷಣ ಸಂಸ್ಥೆಗಳು ರೂಪಿಸುತ್ತವೆ. ಶಾಲೆಗಳು ಸದಾ ಕಲಿಯುವ ಉತ್ಸಾಹ ವಿದ್ಯಾರ್ಥಿಗಳಲ್ಲಿ ತುಂಬುತ್ತವೆ. ಪಾಲಕರು ಅಂಕಗಳಿಗೆ ಮಾತ್ರ ಮಹತ್ವ ನೀಡದೆ, ಜ್ಞಾನವೃದ್ಧಿಯ ಕಡೆಗೂ ಗಮನ ನೀಡಬೇಕು. ಗುರಿ ಇಟ್ಟುಕೊಂಡು ಮುನ್ನಡೆದಾಗ ಎಲ್ಲವನ್ನೂ ಪಡೆಯಬಹುದು ಎಂದು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೀಸರ್ಚ್ ಸ್ಕಾಲರ್ ಶ್ರೀನಿಧಿ ಕುಕ್ಕಿಲ ಹೇಳಿದರು.
ಜೆಸಿ ಪೆವಿಲಿಯನ್ನಲ್ಲಿ ವಿಠಲ ಜೆಸ್ಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಜೇಸಿ ಕಲರವ ೨೦೨೪ದಲ್ಲಿ ಮಾತನಾಡಿದರು.
ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿದ ಬಹುಮಾನಿತರನ್ನು ಗುರುತಿಸಲಾಯಿತು. ಶಾಲಾ ಚಟುವಟಿಕೆಯ ಮಾಹಿತಿಯನ್ನೊಳಗೊಂಡ ಪುಸ್ತಕ ವಿಜನ್ ೨೦೨೪-೨೫ ಬಿಡುಗq ಮಾಡಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಾಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ವಿಠಲ ಜೆಸ್ಸೀಸ್ ಆಂಗ್ಲ ಮಾಧ್ಯಮ ಶಾಲೆಯ ನಾಯಕ ಜ್ಞಾನೇಶ್ ಎನ್.ಡಿ.ವಹಿಸಿದ್ದರು. ಕಾರ್ಕಳ ಜೆಸ್ಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಲೋಕ್ ಸಿ. ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಮಹಿಮಾ ಆರ್.ಕೆ.ಸ್ವಾಗತಿಸಿದರು. ಪ್ರಾಂಶುಪಾಲ ಜಯರಾಮ ರೈ ಡಿ. ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಖತೀಜತ್ ಅಮಿಷಾ, ಜಿತಿನ್, ಅಭಿರಾಮ್, ಭವಿಷ್, ರಿಧಾ, ಅಶ್ವಿನ್ ಬಹುಮಾನಿತರ ಪಟ್ಟಿ ಓದಿದರು. ನಿಽಕ್ಷಾ ವಂದಿಸಿದರು. ಯಾಶಿಕಾ ಕಾರ್ಯಕ್ರಮ ನಿರೂಪಿಸಿದರು.