ಸ್ವಾವಲಂಬಿ ಬದುಕಿಗೆ ಸಹಕಾರಿ ಸಂಘದ ಬುನಾದಿ

mallige
ಶಿರ್ವ ಸಹಕಾರಿ ಸಂಘದ ಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತಡಿದರು. ವೈ.ಭಾಸ್ಕರ ಶೆಟ್ಟಿ, ಬಿ.ಪುಂಡಲೀಕ ಮರಾಠೆ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಶಿರ್ವ

ಗ್ರಾಮೀಣ ಹಳ್ಳಿ ಪ್ರದೇಶದ ತೀರಾ ಹಿಂದುಳಿದ ನಾಗರಿಕರಿಗೆ ಜೀವನ ಪದ್ಧತಿ ಕಲಿಸಿಕೊಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಕ್ಷೇತ್ರ ಭದ್ರ ಬುನಾದಿ ಒದಗಿಸಿದೆ ಎಂದು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಶಿರ್ವ ಶಾಖೆಯ 13ನೇ ವರ್ಷದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ ಮಹಿಳಾ ಕೌಶಲಾಭಿವೃದ್ಧಿ ಯೋಜನೆಯಡಿ ವೈಜ್ಞಾನಿಕ ಪದ್ಧತಿಯಲ್ಲಿ ಮನೆಯಲ್ಲಿ ಮಲ್ಲಿಗೆ ಕೃಷಿ ಸಮಗ್ರ ಮಾಹಿತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಳ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ ಕಾರ್ಯಕ್ರಮ ಉದ್ಘಾಟಿಸಿದರು. ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ವೈ.ಭಾಸ್ಕರ ಶೆಟ್ಟಿ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ, ವಿಮಾ ಸಲಹೆಗಾರ ನಾರ್ಬರ್ಟ್ ಮಚಾದೊ ಶಿರ್ವ ಶುಭಹಾರೈಸಿದರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಮಾತನಾಡಿದರು. ಪೂರ್ಣಿಮಾ ಪಾಟ್ಕರ್ ಪ್ರಾರ್ಥಿಸಿದರು. ಸುಧಾ ಪ್ರಭು ಸ್ವಾಗತಿಸಿದರು. ಬಿಪಿನ್‌ಚಂದ್ರ ವಾಗ್ಲೆ ಪುತ್ತೂರು ನಿರೂಪಿಸಿದರು. ಭಾರತಿ ಬಿ.ಕಿಶನ್ ಕುಮಾರ್, ಕೌಶಿಕ್ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net