ಮುಂಬೈ ಇಂಡಿಯನ್ಸ್ ಟೀಮ್​ನಲ್ಲಿ ಜಾಸ್ಮಿನ್​ ವಾಲಿಯಾ ಪ್ರತ್ಯಕ್ಷ! ಹಾರ್ದಿಕ್ ಜತೆಗೆ ಡೇಟಿಂಗ್​ ವದಂತಿ ಈಗಲೂ ಸುಳ್ಳೇ!? | Jasmin

blank

Jasmin Walia: ಕಳೆದ ತಿಂಗಳು ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಸ್ಟೇಡಿಯಂನಲ್ಲಿ ಕ್ಯಾಮರಾ ಕಣ್ಣಿಗೆ ಸಿಕ್ಕಿಬಿದ್ದ ಹಾರ್ದಿಕ್​ ಅವರ ಪ್ರೇಯಸಿ ಎನ್ನಲಾದ ಬ್ರಿಟಿಷ್​ ಸುಂದರಿ ಜಾಸ್ಮಿನ್ ವಾಲಿಯಾ, ಟೀಮ್ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ಹಲವು ದಿನಗಳಿಂದ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದುಬೈನಲ್ಲಿ ಪ್ರತ್ಯಕ್ಷವಾದ ಜಾಸ್ಮಿನ್​ರನ್ನು ಅತ್ತಿಗೆ ಎಂದು ಕರೆದ ಪಾಂಡ್ಯ ಅಭಿಮಾನಿಗಳು, ನಂತರದಲ್ಲಿ ಇದೊಂದು ವದಂತಿ ಎಂದೇ ಭಾವಿಸಿದ್ದರು. ಆದರೀಗ, ಮತ್ತೇ ಹಾರ್ದಿಕ್ ಜತೆಗೆ ಕಾಣಿಸಿಕೊಂಡಿರುವ ವಾಲಿಯಾ, ನಿನ್ನೆ (ಮಾ.31) ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್​ ನಡುವಿನ ಪಂದ್ಯದ ನಂತರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

blank

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದೇ ಶಿಕ್ಷಣ ಅಲ್ಲ:  ಚಿಂತಕ ಪ್ರೊ.ರಹಮತ್ ತರೀಕೆರೆ

ಕೆಕೆಆರ್​ ವಿರುದ್ಧದ ಪಂದ್ಯ ವೀಕ್ಷಿಸಲು ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸಿದ್ದ ಜಾಸ್ಮಿನ್​, ಸ್ಟ್ಯಾಂಡ್ಸ್​ನಲ್ಲಿ ನಿಂತು ಎಂಐ ಹಾಗೂ ತಮ್ಮ ಪ್ರಿಯಕರ ಎನ್ನಲಾದ ಹಾರ್ದಿಕ್​ ಪಾಂಡ್ಯರನ್ನು ಹುರಿದುಂಬಿಸಿದರು. ಮುಂಬೈ ಪಂದ್ಯ ಗೆದ್ದ ಬಳಿಕ ಪಾಂಡ್ಯ ಮತ್ತು ಅವರ ತಂಡದ ಸದಸ್ಯರೊಂದಿಗೆ ಬಸ್​ ಹತ್ತಿದ ಚೆಲುವೆ, ಮತ್ತೇ ಕ್ರಿಕೆಟ್​ ಅಭಿಮಾನಿಗಳ ಗೊಂದಲ, ಕುತೂಹಲವನ್ನು ಹೆಚ್ಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿವೆ.

 

 

View this post on Instagram

 

A post shared by Viral Bhayani (@viralbhayani)

ಯಾರು ಈ ಬ್ರಿಟಿಷ್​ ಸುಂದರಿ?

ಭಾರತೀಯ ಮೂಲದ ಬ್ರಿಟಿಷ್ ಗಾಯಕಿ ಮತ್ತು ಟೆಲಿವಿಷನ್​ ಇಂಡಸ್ಟ್ರಿಗೆ ಸೇರಿರುವ ಜಾಸ್ಮಿನ್ ವಾಲಿಯಾ, ತಮ್ಮ ಹಾಡುಗಳಿಂದಲೇ ಜನಪ್ರಿಯತೆ ಗಳಿಸಿದ್ದಾರೆ. ಅವರ ‘ಬಾಮ್​ ಡಿಗ್ಗಿ’ ಎಂಬ ಹಾಡು ಭಾರತದಲ್ಲಿಯೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಇದರೊಟ್ಟಿಗೆ ನಟ ಕಾರ್ತಿಕ್ ಆರ್ಯನ್ ಅಭಿನಯದ ಬಾಲಿವುಡ್ ಸಿನಿಮಾ ‘ಸೋನು ಕೆ ಟಿಟು ಕಿ ಸ್ವೀಟಿ’ ನಲ್ಲಿಯೂ ಈಕೆ ಕಾಣಿಸಿಕೊಂಡಿದ್ದಾರೆ. ಸದ್ಯ ಹಾರ್ದಿಕ್​ ಪಾಂಡ್ಯ ಜತೆಗೆ ಪ್ರೀತಿಯ ಸಂಬಂಧದಲ್ಲಿ ಬಿದ್ದಿರುವ ಜಾಸ್ಮಿನ್​, ತಮ್ಮ ಪ್ರೀತಿಯ ಬಗ್ಗೆ ಇನ್ನೂ ಏಕೆ ಮೌನ ಮುರಿದಿಲ್ಲ ಎಂಬ ಪ್ರಶ್ನೆಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).

ಎಷ್ಟು ದಿನ ಈ ಯಶಸ್ಸು? ಅಗ್ರಸ್ಥಾನಕ್ಕೇರಿದ ಫೋಟೋ ಕ್ಲಿಕ್ಕಿಸಿ ಇಟ್ಕೊಳ್ಳಿ ಬೇಕಾಗುತ್ತೆ! RCB ವಿರುದ್ಧ ವೀರೂ ವ್ಯಂಗ್ಯ

Share This Article
blank

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

blank