

ಟೋಕಿಯೋ: ಜಪಾನ್‌ನ ಯಮಗತ ರಾಜ್ಯ ಸರ್ಕಾರ ಜನರು ದಿನಕ್ಕೆ ಒಮ್ಮೆ ನಗಬೇಕು ಎಂಬ ಕಾನೂನನ್ನು ಜಾರಿಗೆ ತಂದಿದೆ.
ಜನರು ದೀರ್ಘ ಆರೋಗ್ಯವಂತರಾಗಿ ಬಾಳಲು ನಗುವಿಗಿಂತ ಉತ್ತಮ ಔಷಧವಿಲ್ಲ ಎಂದು ಬಲವಾಗಿ ನಂಬಿರುವ ಆ ರಾಜ್ಯ ಸರ್ಕಾರ ಈ ಹೊಸ ಕಾನೂನನ್ನು ಜಾರಿಗೆ ತಂದಿದೆ. ಇದೀಗ ಈ ನಿರ್ಧಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ .
ಯಮಗತ ಜನರು ನಗುವಿನ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಈ ಕಾನೂನು ಹೇಳುತ್ತದೆ. ದಿನಕ್ಕೆ ಒಮ್ಮೆಯಾದರೂ ನಗುವ ಮೂಲಕ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಇದು ಸೂಚಿಸುತ್ತದೆ. ಕೆಲಸದ ಸ್ಥಳಗಳಲ್ಲೂ ನಗುವಿನ ವಾತಾವರಣ ಮೂಡಿಸಲು ಈ ಕಾನೂನಿನಲ್ಲಿ ಹಲವು ಅಂಶಗಳನ್ನು ಸೇರಿಸಲಾಗಿದೆ.
ಸಂಸ್ಥೆಯಲ್ಲಿ ನಗುವಿನ ವಾತಾವರಣ ಮೂಡಿಸುವ ಜವಾಬ್ದಾರಿಯನ್ನು ಆಡಳಿತ ಮಂಡಳಿಗೆ ವಹಿಸಲಾಗಿದೆ. ರಾಜ್ಯಾದ್ಯಂತ ಪ್ರತಿ ತಿಂಗಳು 8ರಂದು ನಗು ದಿನವನ್ನೂ ಆಚರಿಸಬೇಕು. ಕನ್ಸರ್ವೇಟಿವ್ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಈ ಮಸೂದೆಯನ್ನು ಮಂಡಿಸಿ ಸದಸ್ಯರ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದೆ.