More

    ಜಪಾನಿಯರ ಈ ಸಲಹೆಗಳನ್ನು ಅನುಸರಿಸಿದರೆ 100 ವರ್ಷಗಳ ಕಾಲ ಸುಂದರವಾಗಿ ಬದುಕಬಹುದು!

    ಬೆಂಗಳೂರು: ಪ್ರತಿಯೊಬ್ಬ ವ್ಯಕ್ತಿಯು ದೀರ್ಘಾಯುಷಿಯಾಗಿ ಬಾಳಲು ಬಯಸುತ್ತಾನೆ. ಆದರೆ ಎಲ್ಲರೂ ಹೀಗೆ ಬದುಕಲು ಸಾಧ್ಯವಾಗುತ್ತಿಲ್ಲ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರು ಮಾತ್ರ ದೀರ್ಘಾಯುಷ್ಯವನ್ನು ಹೊಂದುತ್ತಾರೆ. ಹೌದು, ನಿಮ್ಮ ಆಹಾರ ಕ್ರಮದ ಬಗ್ಗೆ ಗಮನಹರಿಸಿ, ಉತ್ತಮ ಆಹಾರ ಸೇವಿಸಿದಾಗ ಮಾತ್ರ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.

    ಜಪಾನ್ ದೇಶದಲ್ಲಿ 90 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 23 ಲಕ್ಷ ಜನರಿದ್ದಾರೆ. ಇವರಲ್ಲಿ 71,000 ಕ್ಕೂ ಹೆಚ್ಚು ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಿದ್ದಾರೆ. ಹಾಗಾದರೆ ಅವರ ದೀರ್ಘಾಯುಷ್ಯದ ರಹಸ್ಯವೇನು ಎಂದು ನೀವು ಆಶ್ಚರ್ಯಪಡುತ್ತಿರಬೇಕು ಅಲ್ಲವೇ, ಬನ್ನಿ ಈ ಬಗ್ಗೆ ತಿಳಿಯೋಣ…

    ಜಪಾನಿನ ಜನರ ಆಹಾರ
    ಜಪಾನಿನ ಆಹಾರವನ್ನು ವಿಶ್ವದ ಅತ್ಯಂತ ಸಮತೋಲಿತ ಆಹಾರವೆಂದು ಪರಿಗಣಿಸಲಾಗಿದೆ. ಬಹುಶಃ ಸಮುದ್ರದ ಆಹಾರ, ಚಹಾ, ಮೀನು, ಸೋಯಾಬೀನ್ ತರಹದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅವರ ಚರ್ಮವು ಸುಂದರವಾಗಿದೆ. ಜಪಾನಿನ ಜನರು ಕಡಿಮೆ ಮಾಂಸ, ಡೈರಿ ಉತ್ಪನ್ನಗಳು, ಸಕ್ಕರೆ, ಆಲೂಗಡ್ಡೆ ಮತ್ತು ಹಣ್ಣುಗಳನ್ನು ಸೇವಿಸುತ್ತಾರೆ.

    ನಿಧಾನವಾಗಿ ಸೇವಿಸುವುದು
    ಆಹಾರವನ್ನು 32 ಬಾರಿ ಜಗಿಯಬೇಕು ಎಂದು ಹೇಳಲಾಗುತ್ತದೆ. ಆದರೆ ಈ ದಿನಗಳಲ್ಲಿ ಯಾರು ಅಗಿಯುವಾಗ ಹೆಚ್ಚು ಗಮನಹರಿಸುತ್ತಾರೆ. ಜಪಾನಿಯರು ಮಾತ್ರ ತಮ್ಮ ಆಹಾರವನ್ನು ಚೆನ್ನಾಗಿ ಮತ್ತು ನಿಧಾನವಾಗಿ ಅಗಿಯುವ ಮೂಲಕ ತಿನ್ನುತ್ತಾರೆ. ಹೀಗೆ ಸೇವಿಸುವುದರಿಂದ ಆರೋಗ್ಯ ಮಾತ್ರವಲ್ಲದೆ, ಆತ ತನ್ನ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ಕೊಟ್ಟಂತಾಗುತ್ತದೆ. ವ್ಯಕ್ತಿಯು ಡೈನಿಂಗ್ ಟೇಬಲ್‌ನಲ್ಲಿ ಹೆಚ್ಚಿನ ಸಮಯ ತನ್ನ ಕುಟುಂಬದೊಟ್ಟಿಗೆ ಕಳೆಯುವುದರಿಂದ ಸಂಬಂಧದ ಜೊತೆಗೆ ಜೀರ್ಣಕ್ರಿಯೆಯ ಪ್ರಕ್ರಿಯೆಯು ಉತ್ತಮವಾಗಿರುತ್ತದೆ.

    ಜಪಾನಿಯರು ಮಚ್ಚಾ ಚಹಾ ಪ್ರಿಯರು
    ಜಪಾನ್ ಅನ್ನು ‘ಚಹಾ ಪ್ರಿಯ ದೇಶ’ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರು ಚಹಾ ಕುಡಿಯಲು ತುಂಬಾ ಇಷ್ಟಪಡುತ್ತಾರೆ. ಜಪಾನಿನ ಜನರು ತಮ್ಮ ಸಾಂಪ್ರದಾಯಿಕ ಮಚ್ಚಾ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಇದರಲ್ಲಿ ಅನೇಕ ಪೌಷ್ಟಿಕ ಗುಣಗಳು ಕಂಡುಬರುತ್ತವೆ. ಇದು ಅವರ ಚರ್ಮವನ್ನು ಸುಧಾರಿಸಿ, ಹೊಳೆಯುವಂತೆ ಮಾಡುತ್ತದೆ.

    ಉಪಹಾರ
    ಜಪಾನಿನ ಜನರು ತಮ್ಮ ಉಪಹಾರವನ್ನು ಎಂದಿಗೂ ಬಿಡುವುದಿಲ್ಲ, ಅವರು ಪ್ರತಿದಿನ ಉಪಹಾರವನ್ನು ಸೇವಿಸುತ್ತಾರೆ. ಬೆಳಗಿನ ಉಪಾಹಾರಕ್ಕಾಗಿ, ಈ ಜನರು ಬೇಯಿಸಿದ ಅನ್ನ, ಗಂಜಿ ಅಥವಾ ಬೇಯಿಸಿದ ಮೀನುಗಳನ್ನು ತಿನ್ನುತ್ತಾರೆ.

    ಸಿಹಿ ತಿಂಡಿಗಳನ್ನು ತಿನ್ನುವುದನ್ನು ತಪ್ಪಿಸಿ
    ಜಪಾನಿಯರು ಆಹಾರವನ್ನು ಕಟ್ಟುನಿಟ್ಟಾಗಿ ತಿನ್ನುತ್ತಾರೆ. ಉದಾಹರಣೆಗೆ ಊಟದ ನಂತರ ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಇಲ್ಲಿನ ಜನರು ಸಿಹಿಗಿಂತ ಉಪ್ಪಿಗೆ ಹೆಚ್ಚು ಗಮನ ನೀಡುತ್ತಾರೆ.

    ಅಡುಗೆ ವಿಧಾನ
    ಇಲ್ಲಿನ ಜನರ ತಮ್ಮ ಹೆಚ್ಚಿನ ಆಹಾರವನ್ನು ಹಬೆಯಲ್ಲಿ ಬೇಯಿಸಿ ತಿನ್ನುತ್ತಾರೆ. ಜತೆಗೆ ತುಂಬಾ ಕಡಿಮೆ ಎಣ್ಣೆ ಮತ್ತು ಮಸಾಲೆಗಳನ್ನು ಬಳಸುತ್ತಾರೆ.

    ಆನ್‌ಲೈನ್ ಜಾಹೀರಾತು ಮೂಲಕ ವಿಷವನ್ನು ಹೋಂ ಡೆಲಿವರಿ ಮಾಡಿದ ವ್ಯಕ್ತಿ 130 ಜನರ ಸಾವಿಗೆ ಕಾರಣನಾಗಿದ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts