More

    ಅಭಿವೃದ್ಧಿಯ ಅಲೆ, ಸಾಧನೆಗಳ ಬಲವೇ ಶ್ರೀರಕ್ಷೆ

    ದಾವಣಗೆರೆ : ಅಭಿವೃದ್ಧಿಯ ಅಲೆ, ಸಾಧನೆಗಳ ಬಲ ಮತ್ತು ವೈಯಕ್ತಿಕ ವರ್ಚಸ್ಸು ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿಯುತ್ತವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
     ತಮಗೆ ಟಿಕೆಟ್ ಘೋಷಣೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
     ಈ ಹಿಂದಿನ ಚುನಾವಣೆಗಳಲ್ಲಿ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸಾಧನೆಗಳನ್ನು ಹೇಳಿ ಮತ ಯಾಚನೆ ಮಾಡುತ್ತಿದ್ದೆ. ಈಗ ನಾನೇ ಅಭ್ಯರ್ಥಿಯಾಗಿ ಜನರ ಬಳಿಗೆ ಹೋಗಬೇಕಿರುವುದರಿಂದ ಇದೊಂದು ದೊಡ್ಡ ಜವಾಬ್ದಾರಿಯಾಗಿದೆ. ಜತೆಗೆ ಎಸ್‌ಎಸ್ ಕೇರ್ ಟ್ರಸ್ಟ್‌ನ 5 ವರ್ಷಗಳ ಸೇವೆಯನ್ನು ಜನರು ನೋಡಿದ್ದಾರೆ ಎಂದು ತಿಳಿಸಿದರು.
     ಕುಟುಂಬ ರಾಜಕಾರಣದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಟಿಕೆಟ್ ಬೇಕು ಎಂದು ನಾವು ಕೇಳಿಲ್ಲ. ಕಾರ್ಯಕರ್ತರ ಬೆಂಬಲ, ಯಾರು ಸ್ಪರ್ಧಿಸಿದರೆ ಸೂಕ್ತ, ಗೆಲ್ಲುವ ವ್ಯಕ್ತಿ ಯಾರು, ಜನರ ನಿರೀಕ್ಷೆ ಎಲ್ಲವನ್ನೂ ತಿಳಿದು ವರಿಷ್ಠರು ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.
     ಪ್ರಶ್ನೆಯೊಂದಕ್ಕೆ ಉತ್ತರಿಸಿ, ಜಿ.ಬಿ. ವಿನಯ ಕುಮಾರ್ 6 ತಿಂಗಳಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಆದರೆ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರು 30-40 ವರ್ಷಗಳಿಂದಲೂ ಜನರ ನಡುವೆ ಇದ್ದು ಕೆಲಸ ಮಾಡಿದ್ದಾರೆ. ಅವರ ಚುನಾವಣೆಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಯಾರಿಗಾದರೂ ಭಿನ್ನಾಭಿಪ್ರಾಯಗಳಿದ್ದರೆ ಹಿರಿಯರು ಅವರನ್ನು ಕರೆದು ಬಗೆಹರಿಸುವ ಪ್ರಯತ್ನ ಮಾಡುತ್ತಾರೆ ಎಂದು ತಿಳಿಸಿದರು.
     ಪ್ರಧಾನಿ ಮೋದಿ ಅವರ 10 ವರ್ಷಗಳ ಆಡಳಿತವನ್ನು ಜನರು ನೋಡಿದ್ದಾರೆ, ಅವರ ಭರವಸೆಗಳು ಎಷ್ಟರಮಟ್ಟಿಗೆ ಈಡೇರಿವೆ ಎನ್ನುವ ನೈಜ ವಿಷಯವನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳುತ್ತಾರೆ. ಕ್ಷೇತ್ರದಲ್ಲಿ ಶಾಸಕರ ಬೆಂಬಲವಿದೆ. ಬೂತ್ ಮಟ್ಟದ ಕಾರ್ಯಕರ್ತರ ಪಡೆಯಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ. ಈ ಅಂಶಗಳು ಕೈ ಹಿಡಿಯಲಿವೆ ಎಂದರು.
     ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ಮುಖ್ಯವಾಗಿ ಕುಡಿಯುವ ನೀರು. ಜತೆಗೆ ಭದ್ರಾ ಅಚ್ಚುಕಟ್ಟಿನ ಕೊನೇ ಭಾಗಕ್ಕೆ ನೀರು ತಲುಪುತ್ತಿಲ್ಲ. ರಸ್ತೆಗಳ ಅಭಿವೃದ್ಧಿಯಾಗಬೇಕಿದೆ. ಆಸ್ಪತ್ರೆಗಳ ಮೂಲಸೌಲಭ್ಯ ಸುಧಾರಿಸಬೇಕು. ಭ್ರಷ್ಟಾಚಾರ ರಹಿತವಾದ ಪಾರದರ್ಶಕ ವ್ಯವಸ್ಥೆ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರು.
     ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಕಾಲೇಜುಗಳಿಗೆ ಪ್ರವೇಶ ಪಡೆಯುವ ಮೊದಲು ಅವರಿಗೆ ಕಾರ್ಯಾಗಾರ ಮಾಡಬೇಕು ಎನ್ನುವ ಆಲೋಚನೆ ಇದೆ. ಅವರಲ್ಲಿ ಕೌಶಲಗಳು ಬೆಳೆಯಬೇಕು. ಉದ್ಯೋಗ ಮೇಳಗಳು ನಡೆಯಬೇಕು. ಹಾಸ್ಟೆಲ್ ಸೌಲಭ್ಯ ಸಿಗಬೇಕು. ಮಹಿಳೆಯರ ಸಬಲೀಕರಣವಾಗಬೇಕಿದೆ ಎಂದು ಕ್ಷೇತ್ರದ ಬಗ್ಗೆ ತಮ್ಮ ಕನಸುಗಳನ್ನು ಹಂಚಿಕೊಂಡರು.
     …
     (((ಬಾಕ್ಸ್)))
     ಬಿಜೆಪಿ ಅಭ್ಯರ್ಥಿಗೆ ತಿರುಗೇಟು
     ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ಕೊಡಬೇಕು, ಸಂಬಂಧಗಳಿಗೆ ಮಹತ್ವವಿದೆ. ಆದರೆ ಈಗ ಚುನಾವಣೆಯ ಸಮಯ. ನಮ್ಮ ಪ್ರಣಾಳಿಕೆ, ಮಾಡಿದ ಸೇವೆಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗಬೇಕಿದೆ.
     ಇದು, ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಬಿಜೆಪಿ ಅಭ್ಯರ್ಥಿಗೆ ನೀಡಿದ ತಿರುಗೇಟು. ‘ನಮ್ಮದು ತಾಯಿ-ಮಗಳ ಸಂಬಂಧ’ ಎಂದು ಬಿಜೆಪಿ ಅಭ್ಯರ್ಥಿ ನೀಡಿದ ಹೇಳಿಕೆಗೆ ಅವರು ಶುಕ್ರವಾರ ತಿರುಗೇಟು ನೀಡಿದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts