More

    ರೈಲುಗಳತ್ತ ತೂರಿಬರುವ ಕಲ್ಲುಗಳು

    ದಾವಣಗೆರೆ : ಪ್ರಯಾಣಿಕ ರೈಲುಗಳತ್ತ ದುಷ್ಕರ್ಮಿಗಳು ಕಲ್ಲು ತೂರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಅಧಿಕಾರಿಗಳಿಗೆ ತಲೆನೋವಾಗಿದೆ.
     ಇಂಥ ಕೃತ್ಯಗಳನ್ನು ಎಸಗುವವರಲ್ಲಿ ಬಹುತೇಕ ಬಾಲಕರೇ ಇದ್ದಾರೆ. ಹಳಿಗಳ ಸಮೀಪದಲ್ಲಿ ನಿಂತು, ಚಲಿಸುವ ರೈಲುಗಳತ್ತ ಕಲ್ಲು ತೂರುವುದರಿಂದ ಕಿಟಕಿ ಗಾಜುಗಳು ಒಡೆಯುತ್ತವೆ, ಒಳಗಿರುವ ಪ್ರಯಾಣಿಕರಿಗೆ ಗಾಯಗಳಾದ ಉದಾಹರಣೆಗಳಿವೆ ಎನ್ನುತ್ತಾರೆ ಆರ್‌ಪಿಎಫ್ ಅಧಿಕಾರಿಗಳು.
     ದಾವಣಗೆರೆ ಮಾರ್ಗವಾಗಿ ಪ್ರತಿ ನಿತ್ಯ 80 ರೈಲುಗಳು ಸಂಚರಿಸುತ್ತವೆ. ದಾವಣಗೆರೆ ವಿಭಾಗದ ವ್ಯಾಪ್ತಿಯಲ್ಲಿ ಕಳೆದ ವರ್ಷ ಈ ರೀತಿಯ 9 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಜನವರಿಯಿಂದ ಇಲ್ಲಿಯ ವರೆಗೆ 2 ಪ್ರಕರಣಗಳಾಗಿವೆ. ಮಾರ್ಚ್ 3 ರಂದು ಕವಲೆತ್ತು ಗ್ರಾಮದ ಬಳಿ ಘಟನೆ ನಡೆದಿತ್ತು.
     ಹತ್ತು ಪ್ರಕರಣಗಳಲ್ಲಿ ಆರೋಪಿಗಳನ್ನು ರಿಮ್ಯಾಂಡ್ ಹೋಮ್‌ಗೆ ಕಳಿಸಲಾಗಿದೆ (ಆರೋಪಿಗಳು ಬಾಲಕರು). ಕೆಲವರಿಗೆ 1 ರಿಂದ 2 ಸಾವಿರ ರೂ. ದಂಡ ವಿಧಿಸಲಾಗಿದೆ. ಆರೋಪಿಗಳನ್ನು 4 ದಿನ ರೈಲು ನಿಲ್ದಾಣಕ್ಕೆ ಕರೆತಂದು ಅವರಿಂದ ಇತರರಿಗೆ ಜಾಗೃತಿ ಮೂಡಿಸಲಾಗಿದೆ. ಕಲ್ಲು ತೂರಬಾರದು, ಅದರಿಂದ ಏನು ಸಮಸ್ಯೆಯಾಗುತ್ತದೆ ಎಂದು ತಿಳಿಸುವ ಪ್ರಯತ್ನವಾಗಿದೆ. ಕೆಲವು ಆರೋಪಿಗಳಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ.
     ಕಲ್ಲು ತೂರುವುದು ಕೆಲವರಿಗೆ ಆಟದಂತೆ ಅನಿಸಿರಬಹುದು, ಆದರೆ ಅದರಿಂದ ಅಮಾಯಕರು ಸಮಸ್ಯೆ ಎದುರಿಸಬೇಕಾಗುತ್ತದೆ. ೀ ಘಟನೆಗಳಲ್ಲಿ ಕೆಲವರ ಕಣ್ಣು, ಕಿವಿ, ಮೂಗಿಗೆ ಗಾಯವಾದ ಉದಾಹರಣೆಗಳಿವೆಯಂತೆ.
     …
     (((ಕೋಟ್)))
     ರೈಲುಗಳತ್ತ ಕಲ್ಲು ಹೊಡೆಯುವುದು ತಪ್ಪು. ತಪ್ಪಿತಸ್ಥರಿಗೆ 5 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇರುತ್ತದೆ. ಕಲ್ಲು ತೂರುವ ಉದ್ದೇಶವೇನು? ಅದರಿಂದ ಇತರರಿಗೆ ತೊಂದರೆಯಾಗುತ್ತದೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅವರು ರೈಲು ಹಳಿಯ ಬಳಿಗೆ ಬರುವ ಅಗತ್ಯವಾದರೂ ಏನಿದೆ?. ಇಂಥ ಘಟನೆಗಳನ್ನು ತಪ್ಪಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದ್ದೇವೆ.
      ಬಿ.ಎನ್. ಕುಬೇರಪ್ಪ, ಆರ್‌ಪಿಎಫ್ ಇನ್ಸ್‌ಪೆಕ್ಟರ್, ದಾವಣಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts