

ಬೆಳ್ತಂಗಡಿ: ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಮಣ ಶುಭದಿನವಾದ ಮಂಗಳವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ಶ್ರೀನಿವಾಸ ಹೊಳ್ಳ ಮತ್ತು ರಾಮಚಂದ್ರ ಹೊಳ್ಳರು ಚಾಲನೆ ನೀಡಿದರು.
ಶಮನ ಕ್ಲಿನಿಕ್‌ನ ಚಕ್ರಪಾಣಿ ಸರಳಾಯರ ಪ್ರಾಯೋಜಕತ್ವದಲ್ಲಿ ನಡೆಸಲ್ಪಡುವ ಉಡುಪಿಯ ಮಧ್ವೇಶ ಆಚಾರ್ಯ ಮಠದ ಅವರ ಭಾಗವತ ಪಾತ್ರ ಪ್ರಪಂಚ-ನೀತಿ ಕಥೆಗಳು ಪ್ರವಚನ ಸಪ್ತಾಹಕ್ಕೆ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದ ವತಿಯಿಂದ ಧಾರ್ಮಿಕ ಜ್ಞಾನ ಪ್ರಸಾರಕ್ಕೆ ವಿಶೇಷ ಆದ್ಯತೆ ನೀಡುತ್ತಾ ಬರುತ್ತಿದ್ದು, ಉತ್ಸವ ಕಾಲದಲ್ಲಿ ಪುರಾಣ ಪ್ರವಚನ ಸಪ್ತಾಹ ನಡೆಸಲು ಯೋಜಿಸಿದ್ದೇವೆ. ಭಕ್ತರು ಜ್ಞಾನ ಸತ್ರದಲ್ಲಿ ಭಾಗವಹಿಸಿ ಪುಣ್ಯಭಾಜನರಾಗಬೇಕು ಎಂದರು.
ಧರ್ಮಸ್ಥಳದ ಕಮಲಾಕ್ಷ ಗುಡಿಗಾರ್ ಸಾಹಿತ್ಯ ಮತ್ತು ಸಂಗೀತ ನೀಡಿ ಕೇಶವ ದೇವಾಂಗ ಬನಶಂಕರಿ ಅವರು ಹಾಡಿರುವ ಶ್ರೀ ಲಕ್ಷ್ಮಿ ಜನಾರ್ದನ ಕನ್ನಡ ಭಕ್ತಿ ಗೀತೆಗಳನ್ನು ಶರತ್ ಕೃಷ್ಣ ಪಡುವೆಟ್ನಾಯರು ಬಿಡುಗಡೆಗೊಳಿಸಿದರು. ಶಾರದಾ ಮತ್ತು ಚಕ್ರಪಾಣಿ ಸರಳಾಯ, ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.
ರಾತ್ರಿ ಧ್ವಜಾರೋಹಣ ಹಾಗೂ ಭಂಡಾರ ಏರುವುದರೊಂದಿಗೆ ವರ್ಷಾವಧಿ ಜಾತ್ರೆಗೆ ಸಂಭ್ರಮದ ಚಾಲನೆ ನೀಡಲಾಯಿತು.
ಉಚ್ಚಭೂತಿಯೆಂದರೆ ಹೇರಳ ಸಂಪತ್ತು ಇದ್ದ ಜಾಗ ಎಂದರ್ಥ. ಇಲ್ಲಿ ಘನ ವಿದ್ವಾಂಸರು ನೆಲೆಯಾಗಿದ್ದು ಮಧ್ವಾಚಾರ್ಯರ ಜ್ಞಾನವನ್ನು ಪರೀಕ್ಷಿಸಿ ಅವರಲ್ಲಿ ದೋಷ ಹುಡುಕುವ ಪ್ರಯತ್ನ ಮಾಡಿ ಸೋತರು. ಮಧ್ವಾಚಾರ್ಯರು ತನ್ನ 37 ಗ್ರಂಥಗಳ ಪೈಕಿ ಇಲ್ಲೇ ಕರ್ಮ ನಿರ್ಣಯಗ್ರಂಥ ರಚಿಸಿ ದೇವರಿಗೆ ಸಮರ್ಪಿಸಿದ ಜಾಗ ಉಜೇರ್ಯ ಮುಂದೆ ಉಜಿರೆ ಹೆಸರಿನಿಂದ ಪ್ರಸಿದ್ಧಿ ಪಡೆಯಿತು. ಉತ್ಸವ ಕಾಲದಲ್ಲಿ ದೇವರು ಸಂತುಷ್ಟನಾಗಿ ಭಕ್ತರನ್ನು ಅನುಗ್ರಹಿಸುವ ಪರ್ವ ಕಾಲ. 18 ಸಹಸ್ರ ಸ್ತೋತ್ರಗಳನ್ನೊಳಗೊಂಡ ಭಾಗವತ ಪುರಾಣದ ಪಾತ್ರಗಳನ್ನು ಸಾದರಪಡಿಸಲು ಪ್ರಯತ್ನಿಸಲಾಗುವುದು. ಜ.20ರವರೆಗೆ ಪ್ರತಿದಿನ ಬೆಳಗ್ಗೆ 9.30ರಿಂದ 12 ರವರೆಗೆ ಪ್ರವಚನ ನಡೆಯಲಿದೆ. ಶರತ್ ಕೃಷ್ಣ ಪಡುವೆಟ್ನಾಯ, ಆಡಳಿತ ಮೊಕ್ತೇಸರ ಜನಾರ್ದನ ದೇವಸ್ಥಾನ https://www.vijayavani.net/maruti-manikya-mahotsava-from-january-to-decembers https://www.vijayavani.net/mp-capt-chouta-statement-2