ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಪಕ್ಷದ ನಾಯಕತ್ವ 44 ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ವೈದ್ಯೆ ಅತ್ಯಾಚಾರ ಪ್ರಕರಣ: ಆರೋಪಿ ಸಂಜಯ್ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಯು-ಟರ್ನ್! ‘ನಾನು ಅಲ್ಲಿಗೆ ಹೋಗುವ ವೇಳೆಗೆ..’
ಭಾನುವಾರ ರಾತ್ರಿ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿದೆ. ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಈ ಪಟ್ಟಿಯಲ್ಲಿ ಬಿಜೆಪಿ ನಾಯಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರಿಗೆ ಟಿಕೆಟ್ ಸಿಕ್ಕಿಲ್ಲ.
ಪ್ರಮುಖವಾಗಿ ರಾಜ್‌ಪೋರಾಗೆ ಅರ್ಷಿದ್ ಭಟ್, ಶೋಪಿಯಾನ್‌ಗೆ ಜಾವೇದ್ ಅಹ್ಮದ್ ಖಾದ್ರಿ, ಪಾಂಪೋರ್- ಸೈಯದ್ ಶೌಕತ್ ಗಯೂರ್ ಅಂದ್ರಾಬಿ, ಜಪೋರಾ- ಅರ್ಷಿದ್ ಭಟ್, ಅನಂತನಾಗ್- ರಫೀಕ್ ವಾಣಿ, ಅನಂತನಾಗ್- ಸೈಯದ್ ವಜಾಹತ್, ಶ್ರೀಗುಫ್ವಾರಾ- ಸೋಫಿ ಯೂಸುಫ್, ಶಂಗಸ್ ಅನಂತನಾಗ್ – ವೀರ್ ಸರಾಫ್, ಇಂದರ್ವಾಲ್- ತಾರಿಕ್ ಕೀನೆ, ಕಿಶ್ತ್ವಾರ್- ಶಗುನ್ , ಪಾದೆರ್ ನಾಗಸೇನಿ- ಸುನಿಲ್ ಶರ್ಮಾ, ಭದರ್ವಾ- ದಲಿಪ್ ಸಿಂಗ್ , ದೋಡಾ- ಗಜಯ್ ಸಿಂಗ್ ರಾಣಾ, ದೋಜಾ ಪಶ್ಚಿಮ- ಶಕ್ತಿ ರಾಜ್ , ರಾಕೇಶ್ ಠಾಕೂರ್, ಬನಿಹಾಳ್- ಸಲೀಂ ಭಟ್ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಪಟ್ಟಿಯಲ್ಲಿ ಬಿಜೆಪಿ ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರಿಗೆ ಟಿಕೆಟ್ ನೀಡಿರಲಿಲ್ಲ. ಕಣಿವೆಯಲ್ಲಿ ಬಿಜೆಪಿ ಇಬ್ಬರು ಕಾಶ್ಮೀರಿ ಪಂಡಿತರಿಗೆ ಟಿಕೆಟ್ ನೀಡಿದೆ. ಕಾಶ್ಮೀರಿ ಹಿಂದೂ ಅಶೋಕ್ ಭಟ್ ಶ್ರೀನಗರದ ಹಬ್ಬಕದಲ್ ನಿಂದ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರವು ಅತಿ ಹೆಚ್ಚು ಕಾಶ್ಮೀರಿ ಹಿಂದೂ ಮತದಾರರನ್ನು ಹೊಂದಿದೆ.
ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಸಮಿತಿಯ ಸದಸ್ಯರು ಭಾಗವಹಿಸಿದ್ದರು. 2024ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಕೇಂದ್ರ ಚುನಾವಣಾ ಆಯೋಗ ಅನುಮೋದಿಸಿದೆ.
ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳಿಗೆ 3 ಹಂತಗಳಲ್ಲಿ ಅಂದರೆ ಸೆ.18, ಸೆ.25 ಮತ್ತು ಅ.1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. 10 ವರ್ಷದ ನಂತರ ಮತ್ತೆ ಅಲ್ಲಿ ಚುನಾವಣೆ ನಡೆಯುತ್ತಿದೆ.
ಲಾಭದೊಂದಿಗೆ ಪ್ರಾರಂಭವಾದ ಷೇರು ಮಾರುಕಟ್ಟೆ..ಸೆನ್ಸೆಕ್ಸ್ 312.33 ಪಾಯಿಂಟ್ ಏರಿಕೆ