

ಬೆಂಗಳೂರು: ಬಿಡುಗಡೆಯಾದ ಮೊದಲ ದಿನವೇ ದಾಖಲೆ ಬರೆದಿದ್ದ ಪುನೀತ್ ರಾಜಕುಮಾರ್ ನಟನೆಯ ‘ಜೇಮ್್ಸ’ ಸಿನಿಮಾ, ಎರಡನೇ ದಿನಕ್ಕೂ ಅದನ್ನು ವಿಸ್ತರಿಸಿಕೊಂಡಿದೆ. ಗುರುವಾರ 25 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದ್ದ ಈ ಚಿತ್ರ, ಶುಕ್ರವಾರದ ಅಂತ್ಯಕ್ಕೆ 20 ಕೋಟಿ ರೂ. ಕಮಾಯಿ ಮಾಡಿದೆ ಎಂದು ಅಂದಾಜಿಸಲಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ.
ಇದೇ ರೀತಿ ಪ್ರದರ್ಶನ ಮುಂದುವರಿದರೆ, ಈ ವಾರಾಂತ್ಯಕ್ಕೆ ‘ಜೇಮ್್ಸ’ ಸಿನಿಮಾ ನೂರು ಕೋಟಿ ಗಳಿಸುವ ಸಾಧ್ಯತೆಯಿದೆ. ಗುರುವಾರಕ್ಕೆ ಹೋಲಿಕೆ ಮಾಡಿದರೆ, ಶುಕ್ರವಾರ ಆ ಸಂಭ್ರಮ ಕೊಂಚ ಕಡಿಮೆಯಾದರೂ, ಟಿಕೆಟ್ ಬುಕಿಂಗ್ನಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಭಾನುವಾರದ ವರೆಗೂ ಸಂಜೆ ಮತ್ತು ರಾತ್ರಿ ಶೋಗಳು ತುಂಬಿದ ಗೃಹಗಳಲ್ಲಿಯೇ ಪ್ರದರ್ಶನ ಕಾಣಲಿವೆ.
ನಗರದಲ್ಲಿ ಕೆಲವೆಡೆ ನೇತ್ರದಾನ, ದೇಹದಾನ ವಾಗ್ದಾನ, ರಕ್ತದಾನ, ಅನ್ನದಾನ ಅಲ್ಲಲ್ಲಿ ಮುಂದುವರಿದಿತ್ತು. ಕೆಲವು ಚಿತ್ರಮಂದಿರಗಳಲ್ಲಿ ಪುನೀತ್ ಅವರ ಜಪ ಮುಂದುವರಿದರೆ, ಇತ್ತ ಕಂಠೀರವ ಸ್ಟುಡಿಯೋದಲ್ಲಿನ ಅಪು್ಪ ಪುಣ್ಯಭೂಮಿ ಬಳಿ ಶುಕ್ರವಾರವೂ ಜನಸಾಗರ ನೆರದಿತ್ತು.