

ನವದೆಹಲಿ: ಈಗಾಗಲೇ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಹೊರಬಿದ್ದಿರುವ ಸ್ಟಾರ್ ಆಟಗಾರರೇ ಫ್ರಾಂಚೈಸಿಗಳ ಟಾರ್ಗೆಟ್ ಆಗಿದ್ದಾರೆ. ಇದೇ ನವೆಂಬರ್ 24-25ರಂದು ನಡೆಯಲಿರುವ ಐಪಿಎಲ್ ಹರಾಜಿನತ್ತ 10 ತಂಡಗಳು ಎದುರುನೋಡುತ್ತಿದ್ದು, ಯಾವ ಸ್ಟಾರ್ ಆಟಗಾರರನ್ನು ತಮ್ಮ ಟೀಮ್ಗೆ ಎಳೆದುಕೊಳ್ಳುವುದು ಎಂಬ ಲೆಕ್ಕಾಚಾರಗಳಲ್ಲಿ ತೊಡಗಿದೆ. ಒಂದೆಡೆ ಲೆಕ್ಕಾಚಾರಗಳೆನೋ ಜೋರಾಗಿದ್ದರೂ, ಕಣ್ಣಿಟ್ಟ ಆಟಗಾರರನ್ನು ಖರೀದಿ ( IPL Auction) ಮಾಡೋದು ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ರಿಟೆನ್ಶನ್ ಪ್ರಕ್ರಿಯೆಯಲ್ಲಿ ಹೊರಬಿದ್ದ ಐಪಿಎಲ್ನ ಸ್ಟಾರ್ ಆಟಗಾರರಾದ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಶಿಖರ್ ಧವನ್, ಕೆ.ಎಲ್. ರಾಹುಲ್ ಸೇರಿದಂತೆ ಮುಂತಾದವರು ಹರಾಜಿನ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರೆಲ್ಲರ ಮೇಲೂ ಕಣ್ಣಿಟ್ಟಿರುವ ಫ್ರಾಂಚೈಸಿಗಳಿಗೆ ಈಗ ಇಂಗ್ಲೆಂಡ್ನ ದಿಗ್ಗಜ ಆಟಗಾರ, ಸ್ಟಾರ್ ಬೌಲರ್ ಜೇಮ್ಸ್ ಆಂಡರ್ಸನ್ ಹೆಸರು ಕೇಳಿ ಸಖತ್ ಖುಷಿಯಾಗಿದೆ. ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿಗಳ ವಿಕೆಟ್ ಕಿತ್ತುಬಿಸಾಡುವ ಸಾಮರ್ಥ್ಯವಿರುವ ಜೇಮ್ಸ್, ತಮ್ಮ ತಂಡಕ್ಕೆ ಬಂದರೆ, ಸತತ ಗೆಲುವು ಸಾಧಿಸಲು ಸುಲಭವಾಗಬಹುದು ಎಂಬುದು ಆಯಾ ತಂಡಗಳ ಲೆಕ್ಕಾಚಾರ.
42 ವರ್ಷದ ಜೇಮ್ಸ್ ಆಂಡರ್ಸನ್ ಐಪಿಎಲ್ ಮೆಗಾ ಹರಾಜಿನಲ್ಲಿ ತಾವು ಭಾಗವಹಿಸುವುದಾಗಿ ಹೇಳಿದ ಹಿನ್ನಲೆ ಇದೀಗ ಆಕ್ಷನ್ನಲ್ಲಿರುವ ಆಟಗಾರರ ಪಟ್ಟಿಯಲ್ಲಿ ಅವರ ಹೆಸರನ್ನು ಕೂಡ ಸೇರಿಸಲಾಗಿದೆ. ಸದ್ಯ ಹರಾಜಿನಲ್ಲಿ ಇಂಗ್ಲೆಂಡ್ ವೇಗಿ ಇದ್ದಾರೆ ಎಂಬುದನ್ನು ಅರಿತ ಫ್ರಾಂಚೈಸಿಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಿಗಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಹಾಗೂ ಉತ್ತಮ ಪ್ರದರ್ಶನ ಕೊಡುವ ಮೂರು ಬಲಿಷ್ಠ ತಂಡಗಳೇ ಈ ರೇಸ್ನಲ್ಲಿವೆ.
1, ರಾಯಲ್ ಚಾಲೆಂಜರ್ಸ್ ಬೆಂಗಳೂರು
2. ಚೆನ್ನೈ ಸೂಪರ್ ಕಿಂಗ್ಸ್
3. ರಾಜಸ್ಥಾನ ರಾಯಲ್ಸ್