ಜೈಲಿನಿಂದ ಆಸ್ಪತ್ರೆಗೆ ನವಜೋತ್​ ಸಿಂಗ್​ ಸಿಧು ಶಿಫ್ಟ್​​: ವಿಶೇಷ ಆಹಾರದ ಬೇಡಿಕೆ

Sidhu
Published on

ಪಟಿಯಾಲ: ರಸ್ತೆ ಗಲಾಟೆ ಪ್ರಕರಣದ್ಲಲಿ ಸದ್ಯ ಒಂದು ವರ್ಷದ ಜೈಲು ಶಿಕ್ಷೆಯಲ್ಲಿರುವ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಸದ್ಯ ಜೈಲಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯಕೀಯ ಪರೀಕ್ಷೆಗಾಗಿ ಸೋಮವಾರ ಬೆಳಗ್ಗೆ ಭಾರೀ ಭದ್ರತೆಯಲ್ಲಿ ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ನವಜೋತ್​ ಸಿಂಗ್​ ಸಿಧು ಕೆಲ ಕಾಯಿಲೆಗಳಿಂದ ಬಳಲುತ್ತಿದ್ದು ವಿಶೇಷ ಆಹಾರಕ್ರಮವನ್ನು ಬಯಸಿದ್ದಾರೆ ಎಂದು ವಕೀಲ ಎಚ್​ಪಿಎಸ್​ ವರ್ಮಾ ತಿಳಿಸಿದ್ದಾರೆ.ವೈದ್ಯರ ತಂಡ ಪರೀಕ್ಷಿಸಲಿದ್ದು, ಅವರಿಗೆ ಯಾವ ಆಹಾರದ ಅಗತ್ಯವಿದೆ ಎಂಬುದನ್ನು ಹೇಳಲಿದೆ. ಅಂತೆಯೇ ಸ್ಥಳೀಯ ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ನವಜೋತ್​ ಸಿಂಗ್​ ಸಿಧು ಗೋಧಿ, ಸಕ್ಕರೆ, ಮೈದಾ ಮತ್ತು ಇತರ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವಂತಿಲ್ಲ. ಅವರು ಹಣ್ಣುಗಳು, ಪ್ಪಪಾಯಿ ಪೇರಲ, ಹಾಲು ಹಾಗೂ ಫೈಬರ್​ ಆಹಾರಗಳನ್ನು ಸೇವಿಸಬಹುದು ಎಂದು ಅವರ ಪರ ವಕೀಲ ತಿಳಿಸಿದ್ದಾರೆ.1988ರ ರೋಡ್​ ರೇಜ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ಸುಪ್ರೀಂಕೋರ್ಟ್​ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net