

ಕಾಸರಗೋಡು: ತಾಯಿಗೆ ಜೀವನಾಂಶ ನೀಡದ ಪ್ರಕರಣಕ್ಕೆ ಸಂಬಂಧಿಸಿ ಕಾಞಂಗಾಡಿನ ಅಂಬಲತ್ತರ ಗ್ರಾಮದ ಕಾಞಿರಪೊಯಿಲ್ ಚೊಮ್ಮಂಗೋಡ್ ನಿವಾಸಿ ಏಲಿಯಾಮ್ಮ ಜೋಸೆಫ್ ಎಂಬುವರ ಪುತ್ರ ಪ್ರತೀಶ್ ಎಂಬಾತನಿಗೆ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ಹಾಗೂ ಜೀವನಾಂಶವಾಗಿ ನೀಡಬೇಕಾಗಿರುವ 12 ಸಾವಿರ ರೂ. ನೀಡುವವರೆಗೆ ಜೈಲು ಶಿಕ್ಷೆ ವಿಸ್ತರಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ಕಾಞಂಗಾಡಿನ ಅಂಬಲತ್ತರ ಗ್ರಾಮದ ಕಾಞಿರಪೊಯಿಲ್ ಚೊಮ್ಮಂಗೋಡ್ ನಿವಾಸಿ ಏಲಿಯಮ್ಮ ಜೋಸೆಫ್ ಎಂಬುವರು ಸಲ್ಲಿಸಿದ ಅರ್ಜಿ ಪರಿಗಣಿಸಿ ಈ ತೀರ್ಪು ನೀಡಲಾಗಿದೆ. ತಾಯಿ, ತಂದೆಯರ ಮತ್ತು ಹಿರಿಯ ನಾಗರಿಕರ ಸಂರಕ್ಷಣೆ ಮತ್ತು ಕಲ್ಯಾಣ 2007ರ ಕಾಯ್ದೆ 5(8), ಬಿಎನ್‌ಎಸ್ 144 ಕಾನೂನಿನನ್ವಯ ಈ ಶಿಕ್ಷೆ ನೀಡಲಾಗಿದೆ. 2025 ವಾರ್ಚ್ ತಿಂಗಳಿನಿಂದ ತಾಯಿಗೆ, ವಾಸಿಕ 2 ಸಾವಿರ ರೂ.ನಂತೆ ಜೀವನಾಂಶ ನೀಡಲು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯ ಆದೇಶ ಉಲ್ಲಂಸಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.