

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 11ನೇ ಆವೃತ್ತಿ (Bigg Boss 11th Season) ಆರಂಭವಾಗಿ ಏಳು ವಾರಗಳು ಕಳೆದಿದ್ದು, ವಿವಾದಾತ್ಮಕ ಅಂಶಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ರ್ಗ-ನರಕ ಥೀಮ್ನಲ್ಲಿ (Hell-heaven) ಆರಂಭವಾದ ಕಾರ್ಯಕ್ರಮವು ಹೆಚ್ಚು ಸೌಂಡ್ ಮಾಡಿದ್ದು ವಿವಾದಗಳಿಂದಲೇ (Controversy) ಎಂದರೆ ತಪ್ಪಾಗಲಾರದು. ಇದರಲ್ಲಿ ಹೆಚ್ಚು ಸುದ್ದಿಯಾಗಿದ್ದು, ಜಗದೀಶ್ (Jagadish). ಸದ್ಯ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಜಗದೀಶ್ ಬಿಗ್ಬಾಸ್ಗೆ ರೀ ಎಂಟ್ರಿ ಕೊಡುತ್ತಿರುವುದಾಗಿ ಹೇಳಿಕೊಂಡಿದ್ದು, ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಜಗದೀಶ್ ಅವರ ಕ್ರೇಜ್ ಹೆಚ್ಚಾಗಿದ್ದು, ರಿಯಾಲಿಟಿ ಶೋ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ಆಡಿರುವ ಮಾತಿನ ವಿಡಿಯೋವನ್ನು ಇಟ್ಟುಕೊಂಡು ಅನೇಕ ಕಂಟೆಂಟ್ಗಳನ್ನು ಕ್ರಿಯೇಟ್ ಮಾಡಲಾಗುತ್ತಿದ್ದು, ಸದ್ಯ ಜಗದೀಶ್ ಟ್ರೆಂಡಿಂಗ್ನಲ್ಲಿದ್ದಾರೆ. ಇದೀಗ ಜಗದೀಸ್ ಬಿಗ್ಬಾಸ್ ಮನೆಗೆ ರೀ ಎಂಟ್ರಿ ಕೊಡುವುದು ಪಕ್ಕಾ ಆಗಿದ್ದು, ಇಲ್ಲೊಂದು ಟ್ವಿಸ್ಟ್ ಇದೆ.
ಕೆಲ ದಿನಗಳ ಹಿಂದೆ ಫೇಸ್ಬುಕ್ ಲೈವ್ ಬಂದಿದ್ದ ಜಗದೀಶ್ಗೆ ನೀವು ಹಿಂದಿ ಬಿಗ್ಬಾಸ್ಗೆ ಹೋಗುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಜಗದೀಶ್ ಹಿಂದಿ ಬಿಗ್ಬಾಸ್ನಿಂದ ಬಿಗ್ ಆಫರ್ ಬಂದಿದ್ದು, ನಾನು ಇಷ್ಟರಲ್ಲೇ ಹಿಂದಿ ಬಿಗ್ಬಾಸ್ಗೆ ಹೋಗ್ತಾ ಇದ್ದೀನಿ ಎಂದು ಹೇಳಿದ್ದರು. ಜಗದೀಶ್ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಜಗದೀಶ್ ಅವರನ್ನು ಕೊಂಡಾಡುತ್ತಿದ್ದಾರೆ.
ಕರ್ನಾಟಕದ ಹಲವು ಗಣ್ಯರು ಬಾಲಿವುಡ್ಗೆ ಎಂಟ್ರಿಕೊಟ್ಟು ಮಿಂಚಿದ್ದಾರೆ. ಆ ಅದೃಷ್ಟ ಈಗ ನನ್ನನ್ನೂ ಹುಡುಕಿಕೊಂಡು ಬಂದಿದೆ. ಕರ್ನಾಟಕದಿಂದ ಪ್ರಕಾಶ್ ರಾಜ್, ಐಶ್ವರ್ಯಾರೈ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಈಗಾಗಲೇ ಹಲವರು ಬಾಲಿವುಡ್ನಲ್ಲಿ ಮಿಂಚಿದ್ದಾರೆ. ಇದೀಗ ನನಗೂ ಆ ಅವಕಾಶ ಸಿಕ್ಕಿದೆ. ನಾನೂ ಸಹ ಬಾಲಿವುಡ್ನಲ್ಲಿ ಮಿಂಚಲಿದ್ದೇನೆ. ಸೋಮವಾರ ಹಿಂದಿ ಬಿಗ್ಬಾಸ್ಗೆ ಸಂಬಂಧಿಸಿದ ಮಾತುಕತೆ ಅಂತಿಮವಾಗಲಿದ್ದು, ಆ ಬಳಿಕ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದ್ದೇನೆ.
ಒಂದು ಕಾಲದಲ್ಲಿ ನಾನು ಲಕ್ಷ ದುಡಿಯುವುದಕ್ಕೆ ಕಷ್ಟ ಪಡ್ತಿದ್ದೆ. ಆದರೆ, ಈಗ ಕೋಟಿ.. ಕೋಟಿ ಗಳಿಸುತ್ತಿದ್ದೇನೆ. ಇದೆಲ್ಲ ಕನ್ನಡಿಗರು ನನಗೆ ಕೊಟ್ಟಿರುವ ಆಶೀರ್ವಾದ. ಕರ್ನಾಟಕದಿಂದ ಈಗಾಗಲೇ ಸಾಕಷ್ಟು ಜನ ಹೋಗಿದ್ದಾರೆ. ನಾನೂ ಈಗ ಹೋಗ್ತಿದ್ದೇನೆ. ಈ ವಿಷಯ ನನಗೆ ತುಂಬಾನೇ ಸಂತೋಷವನ್ನುಂಟು ಮಾಡಿದೆ ಎಂದು ಜಗದೀಶ್ ಸಂತಸ ವ್ಯಕ್ತಪಡಿಸಿದ್ದಾರೆ.