ರಿ-ರಿಲೀಸ್ ಆಗಲಿದೆ​ ಮೆಗಾ ಸ್ಟಾರ್​​ ನಟನೆಯ ಬ್ಲಾಕ್​​ಬಸ್ಟರ್​​ ಚಿತ್ರ!; ಯಾವಾಗ? ಇಲ್ಲಿದೆ ಮಾಹಿತಿ

Untitled design (71)
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ನಟನೆಯ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರ 1990 ರಲ್ಲಿ ಬಿಡುಗಡೆಗೊಂಡಿತ್ತು. ಈ ಸಿನಿಮಾ ಬ್ಲಾಕ್​​ಬಸ್ಟರ್​​ ಹಿಟ್​​ ಆಗಿ, ದಾಖಲೆಯನ್ನು ನಿರ್ಮಿಸಿತ್ತು. ಇದೀಗ ಈ ಚಿತ್ರವನ್ನು ಮೆಗಾ ಸ್ಟಾರ್ ಅವರ ಅಭಿಮಾನಿಗಳಿಗಾಗಿ ಮತ್ತೊಮ್ಮೆ ತೆರೆಯ ಮೇಲೆ ತರಲು ಚಿತ್ರತಂಡ ಸಜ್ಜಾಗಿದೆ.

'ಜಗದೇಕ ವೀರುಡು ಅತಿಲೋಕ ಸುಂದರಿ' ಒಂದು ಕ್ಲಾಸಿಕಲ್ ಬ್ಲಾಕ್‌ಬಸ್ಟರ್ ಹಿಟ್​​ ಚಿತ್ರವಾಗಿದ್ದು, ಈ ಸಿನಿಮಾ ಮರು ಬಿಡುಗಡೆಗೊಳ್ಳುತ್ತಿರುವ ಸುದ್ದಿ ಇದೀಗ ಚಿರಂಜೀವಿ ಅವರ ಅಭಿಮಾನಿಗಳಿಗೆ ಸಾಕಷ್ಟು ಸಂತಸ ಮೂಡಿಸಿದೆ. ಸಿನಿಮಾ 1990 ರಲ್ಲಿ ರಿಲೀಸ್​​ ಆದ್ದ ಕಾರಣ, 4K ರೀಮಾಸ್ಟರಿಂಗ್ ಕೆಲಸಗಳು ಈಗ ನಡೆಯುತ್ತಿದ್ದು, ಶೀಘ್ರದಲ್ಲೇ ಚಿತ್ರವನ್ನು ಅದ್ಧೂರಿಯಾಗಿ ರಿ-ರಿಲೀಸ್​​ ಮಾಡಲು ನಿರ್ಮಾಪಕರು ಮತ್ತು ವೈಜಯಂತಿ ಮೂವೀಸ್ ತಂಡ ಶ್ರಮಿಸುತ್ತಿದೆ.

ಸದ್ಯ ಸಿನಿಮಾದ ಮರು ಬಿಡುಗಡೆ ಖಚಿತವಾದರೂ, ಯಾವ ದಿನಾಂಕದಂದು ರಿಲೀಸ್​ ಆಗಲಿದೆ ಎಂಬುದರ ಕುರಿತು ಇಲ್ಲಿಯವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಶೀಘ್ರದಲ್ಲೇ ಜಾಲತಾಣಗಳಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಚಿತ್ರತಂಡ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ಮೆಗಾಸ್ಟಾರ್​​ ಚಿರಂಜೀವಿ ತಮ್ಮ ಹುಟ್ಟುಹಬ್ಬವನ್ನು ಆಗಸ್ಟ್ 22 ರಂದು ಆಚರಿಸಿಕೊಳ್ಳಲಿದ್ದಾರೆ ಎಂಬುದು ಫ್ಯಾನ್ಸ್​​ಗೆ ತಿಳಿದಿರುವ ಸಂಗತಿ. ಹಾಗಾಗಿ 'ಜಗದೇಕ ವೀರುಡು ಅತಿಲೋಕ ಸುಂದರಿ' ಚಿತ್ರವನ್ನು ಅವರ ಜನ್ಮದಿನದಂದೇ ಬಿಡುಗಡೆಗೊಳಿಸಲಿದ್ದಾರೆ ಎಂದು ಊಹಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net