

ನವದೆಹಲಿ: ಸಂಸತ್ ಸದಸ್ಯತ್ವದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿರುವುದನ್ನು ಖಂಡಿಸಿ ಎಐಸಿಸಿ ಭಾನುವಾರ ನಡೆಸಿದ ಸಂಕಲ್ಪ ಸತ್ಯಾಗ್ರಹದಲ್ಲಿ ನಡೆಸಿತ್ತು. ಈ ವೇಳೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮಾತನಾಡುತ್ತ ಹಣದುಬ್ಬರವನ್ನು ಇವರು ಡಾರ್ಲಿಂಗ್ ಮಾಡಿಕೊಂಡು ಬೆಡ್ರೂಂನಲ್ಲಿ ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದರು. ಸ್ಮೃತಿ ಇರಾನಿ ಅವರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ಧಾರೆ ಎನ್ನುವ ಅವರ ಮಾತಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇನ್ನು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ಬಿ.ವಿ.ಶ್ರೀನಿವಾಸ್, 2014ಕ್ಕೂ ಮುಂಚೆ ಸಿಲಿಂಡರ್ ಬೆಲೆ 400 ರೂಪಾಯಿ ಇತ್ತು. ಆದರೆ, ಈಗ ಒಂದು ಸಿಲಿಂಡರ್ನ ಬೆಲೆ 1,100 ರೂಪಾಯಿ ಆಗಿದೆ. ಹಣದುಬ್ಬರವನ್ನ ಇವರು ಪ್ರಿಯತಮೆಯನ್ನಾಗಿಸಿಕೊಂಡಿದ್ದಾರೆ ಎಂದು ಹೇಳಿದ್ದೇನೆ, ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿ.ವಿ.ಶ್ರೀನಿವಾಸ್ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶಬ್ದಗಳು ರಾಹುಲ್ ಗಾಂಧಿ ಅವರದ್ದು, ಸಂಸ್ಕಾರ ಸೋನಿಯಾ ಗಾಂಧಿ ಅವರದ್ದು, ಬಾಯಿ ಮಾತ್ರ ಯುವ ಕಾಂಗ್ರೆಸ್ನವರದ್ದು ಎಂದು ಕಿಡಿಕಾರಿದ್ದಾರೆ.
ಯುವ ಕಾಂಗ್ರೆಸ್ನವರು ಈ ರೀತಿ ಹೇಳಿಕೆಯನ್ನು ನೀಡುತ್ತಿರುವುದು ಇದೇ ಮೊದಲಲ್ಲ ಎಲ್ಲಿಯವರೆಗೂ ಈ ಇಬ್ಬರು ನಾಯಕರು ಇರುತ್ತಾರೋ ಅಲ್ಲಿಯವರೆಗೂ ಈ ರೀತಿಯ ಅಸಭ್ಯ ಹೇಳಿಕೆಗಳನ್ನ ಇವರ ಮುಖಂಡರು ನೀಡುತ್ತಾರೆ ಎಂದು ರಾಗುಲ್ ಹಾಗೂ ಸೋನಿಯಾ ಗಾಂಧಿ ವಿರುದ್ದ ಹರಿಹಾಯ್ದಿದ್ದಾರೆ. ‘
ಇನ್ನು ಶ್ರೀನಿವಾಸ್ ಹೇಳಿಕೆಗೆ ಸ್ವಪಕ್ಷದ ಮುಖಂಡ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟೋನಿ ಹೇಳಿಕೆಯನ್ನ ಖಂಡಿಸಿದ್ದು ಮಹಿಳೆಯರ ಬಗ್ಗೆ ಈ ರೀತಿ ಮಾತನಅಡುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರತಿಕ್ರಿಯಿಸಿದ್ದಾರೆ.