

ಮಂಗಳೂರು : ಸಂತ ಅಲೋಶಿಯಸ್ ಐಟಿಐ ಹಳೇ ವಿದ್ಯಾರ್ಥಿ ಸಂಘ ಮತ್ತು ರಿಯಲ್ ಎಸ್ಟೇಟ್ ಗ್ರೂಪ್ಸ್ ಬಿಜೈ ಸಹಯೋಗದಲ್ಲಿ
ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಅಂತರ್ ಐಟಿಐ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟ ಸಂತ ಅಲೋಶಿಯಸ್ ಪರಿಗಣಿತ ವಿ.ವಿ. ಕ್ರೀಡಾಂಗಣದಲ್ಲಿ ಜರಗಿತು.
ವಾಲಿಬಾಲ್ ಪಂದ್ಯಾಟದಲ್ಲಿ ಎಸ್‌ಡಿಎಂ ಐಟಿಐ ಮಂಗಳಜ್ಯೋತಿ ವಾಮಂಜೂರು ಪ್ರಥಮ ಮತ್ತು ಸರ್ಕಾರಿ ಐಟಿಐ ಕಾರ್ಕಳ
ದ್ವಿತೀಯ ಸ್ಥಾನ ಪಡೆದವು. ಎಸ್‌ಡಿಎಂ ಐಟಿಐ ತಂಡದ ಸುದೀಪ್ ಬೆಸ್ಟ್ ಸೆಟ್ಟರ್ , ದಕ್ಷಿತ್ ಬೆಸ್ಟ್ ಸ್ಟೈಕರ್ ಹಾಗೂ ಸರ್ಕಾರಿ ಐಟಿಐ ಕಾರ್ಕಳ ತಂಡದ ಶೈಲೇಶ್ ಬೆಸ್ಟ್ ಆಲ್‌ರೌಂಡರ್ ವೈಯಕ್ತಿಕ ಪ್ರಶಸ್ತಿ ಪಡೆದರು.
ತ್ರೋಬಾಲ್ ಪಂದ್ಯಾಟದಲ್ಲಿ ಎಸ್‌ಡಿಎಂ ಮಹಿಳಾ ಐಟಿಐ ಉಜಿರೆ ತಂಡ ಪ್ರಥಮ ಮತ್ತು ಎಸ್‌ಡಿಎಂ ಐಟಿಐ ಮಂಗಳಜ್ಯೋತಿ ವಾಮಂಜೂರು ತಂಡ ದ್ವಿತೀಯ ಸ್ಥಾನ ಪಡೆದವು. ಎಸ್‌ಡಿಎಂ ಮಹಿಳಾ ಐಟಿಐ ಉಜಿರೆ ತಂಡದ ಲಾವಣ್ಯ ಬೆಸ್ಟ್ ಥ್ರೋವರ್, ಮಂಜುಳಾ ಬೆಸ್ಟ್ ಆಲ್‌ರೌಂಡರ್ ಹಾಗೂ ಎಸ್‌ಡಿಎಂ ಐಟಿಐ ಮಂಗಳಜ್ಯೋತಿ ತಂಡದ ನಿಶ್ಮಿತಾ ಬೆಸ್ಟ್ ರಿಸೀವರ್ ವೈಯಕ್ತಿಕ ಪ್ರಶಸ್ತಿ ಪಡೆದರು.
ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಪಂದ್ಯಾಟ ಉದ್ಘಾಟಿಸಿದರು.
ಸಂತ ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಫಾ,ಜೋನ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂ.ಆರ್. ಪೂಂಜಾ ಐಟಿಐಯ ಪ್ರಾಂಶುಪಾಲ ಹರಿ.ಎಚ್., ಒಎನ್‌ಜಿಸಿಯ ಅಧಿಕಾರಿ ಸುನಿಲ್ ಜೋಸೆಫ್ ಕೊರೆಯಾ , ವಿನ್ಸೆಂಟ್ ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯ ಪ್ರಾಂಶುಪಾಲ ರೋಶನ್ ಡಿಸೋಜ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ರಸ್ಕಿನ್ಹ, ಸಂಯೋಜಕ ರೋಮಿಯಸ್ ಡಿಸೋಜ, ಕಾರ್ಯದರ್ಶಿ ರಜಿತ್ ಕುಮಾರ್, ಖಜಾಂಚಿಯಾದ ಕಿರಣ್ ಡಿಸೋಜಾ, ಮಾರುತಿ ಎಂ.ಎಂ.ಪುಟ್ಟಪ್ಪ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ರೋಬಿನ್ ವಾಸ್ ಕಾರ್ಯಕ್ರಮ ನಿರೂಪಿಸಿದರು.