'ಶಂಭೋ ಶಿವ ಶಂಕರ'ರ ಜತೆಗೆ ರಾಜಸ್ತಾನಿ ಬೆಡಗಿ ಸ್ಟೆಪ್​

Shambo Shiva Shankara - Final
Published on

ಬೆಂಗಳೂರು: ಸೋನಲ್​ ಮಾಂತೆರೋ ಅಭಿನಯಿಸುತ್ತಿರುವ ಹೊಸಬರ ಚಿತ್ರ 'ಶಂಭೋ ಶಿವ ಶಂಕರ' ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಹೊರತಾಗಿ ಮಿಕ್ಕಂತೆ ಚಿತ್ರೀಕರಣ ಮುಕ್ತಾಯವಾಗಿದೆ.

ಇತ್ತೀಚೆಗೆ, ಈ ಚಿತ್ರಕ್ಕಾಗಿ 'ನಾಟಿಕೋಳಿ ನಲ್ಲಿಮೂಳೆ ಸರಕನೇ ಎಳಿತ್ತಾಳೆ' ಎಂಬ ಐಟಂ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಮೋಹನ್​ ಬಿ ಕೆರೆ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಈ ಸೆಟ್​ನಲ್ಲಿ ರಾಜಸ್ತಾನದ ಬೆಡಗಿ ಕಿರಣ್​ ಅವರೊಂದಿಗೆ ಚಿತ್ರದ ನಾಯಕರಾದ ಅಭಯ್‌ ಪುನೀತ್, ರೋಹಿತ್ ಹಾಗೂ ರಕ್ಷಕ್ ಹೆಜ್ಜೆ ಹಾಕಿದ್ದಾರೆ.

ಇದು ನಾಯಕರನ್ನು ಪರಿಚಯಿಸುವ ಹಾಡಂತೆ. ಈ ಹಾಡನ್ನು ಗೌಸ್​ಪೀರ್​ ರಚಿಸಿದ್ದು, ನೃತ್ಯ ನಿರ್ದೇಶಕ ಕಲೈ ಅವರು ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.

ಅಘನ್ಯ ಪಿಕ್ಚರ್ಸ್ ಬ್ಯಾನರ್​ನಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ ಈ ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬರೀ ನಿರ್ದೇಶನವಷ್ಟೇ ಅಲ್ಲ, ಚಿತ್ರಕ್ಕೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಗಳನ್ನೂ ಅವರೇ ರಚಿಸಿದ್ದಾರೆ. ಹಿತನ್ ಹಾಸನ್ ಅವರೆ ಸಂಗೀತ ಮತ್ತು ನಟರಾಜ್ ಮುದ್ದಾಲ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಚಿತ್ರದಲ್ಲಿ ನಾಯಕರ ಹೆಸರು ಶಂಭು, ಶಿವ ಮತ್ತು ಶಂಕರ ಎಂದಾಗಿದ್ದು, ಈ ಪಾತ್ರಗಳನ್ನು ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ನಿರ್ವಹಿಸಿದ್ದಾರೆ. ಮಿಕ್ಕಂತೆ ಶಶಿಕುಮಾರ್, ಸೋನಾಲ್ ಮಾಂಟೆರೊ, ಪ್ರದೀಪ್ ತಿಪಟೂರು, ಆಶಾ ಸುಜಯ್ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net