More

    ಡೆಡ್ಲಿ ಕರೊನಾ ವಿರುದ್ಧ ಒಂದು ತಿಂಗಳು ಹೋರಾಡಿ ಗೆದ್ದಿದ್ದ ಮಹಿಳೆಗೆ ಸಾವು ಬಂದೊದಗಿದ್ದು ಇನ್ನೊಂದು ರೂಪದಲ್ಲಿ…; ಭಾರತದಲ್ಲಿ ಇಟಾಲಿಯನ್​ ವೃದ್ಧೆಯ ಮರಣ

    ಗುರ್​ಗಾಂವ್: ಮಾರಣಾಂತಿಕ ಕರೊನಾವನ್ನು ಮಣಿಸಿದ ಈ ಮಹಿಳೆಗೆ ಸಾವು ಇನ್ನೊಂದು ರೂಪದಲ್ಲಿ ಬಂದೊದಗಿತು.
    ಇವರು ಇಟಾಲಿಯನ್ ಮಹಿಳೆ. ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಅವರಿಗೆ ಡೆಡ್ಲಿ ಕರೊನಾ ವಕ್ಕರಿಸಿತ್ತು. ಆದರೆ ಅದರಿಂದ ಚೇತರಿಸಿಕೊಂಡಿದ್ದರೂ ಕೆಲವೇ ದಿನದಲ್ಲಿ ಮತ್ತೊಂದು ಕಾಯಿಲೆಯಿಂದ ಮೃತಪಟ್ಟಿದ್ದಾರೆ.

    78 ವರ್ಷದ ಈ ಮಹಿಳೆ ಸೇರಿ ಒಟ್ಟು 13 ಇಟಾಲಿಯನ್​ ಪ್ರವಾಸಿಗರಿಗೆ ಮಾರ್ಚ್​ನಲ್ಲಿ ಕರೊನಾ ವೈರಸ್ ತಗುಲಿತ್ತು. ಅವರೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಹಿಳೆ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದು ಕರೊನಾದಿಂದ ಚೇತರಿಸಿಕೊಂಡಿದ್ದರು. ಆದರೆ ಶುಕ್ರವಾರ ಹೃದಯಾಘಾತದಿಂದ ಹರಿಯಾಣಾದ ಗುರ್​ಗಾಂವ್​ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಈಕೆ ಸಾಯುವ ವೇಳೆ ಕರೊನಾ ವೈರಸ್​ ಅಂಶ ಇರಲಿಲ್ಲ. ಸಂಪೂರ್ಣ ನೆಗೆಟಿವ್​ ಆಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹಾಗೇ ಕರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಈ ಮಹಿಳೆಯೊಂದಿಗೆ ಇದ್ದ ಉಳಿದ 13 ಮಂದಿ ಕೂಡ ಗುಣಮುಖರಾಗಿ, ಡಿಸ್​ಚಾರ್ಜ್​ ಆಗಿದ್ದಾರೆ ಎಂದ ಮುಖ್ಯ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts