blank

RCB ಮಾರಾಟಕ್ಕಿದೆ ಎನ್ನುವುದು ಶುದ್ಧ ಸುಳ್ಳು: ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ಯುನೈಟೆಡ್​​ ಸ್ಪಿರಿಟ್​!

blank

ರಾಯಲ್​​ ಚಾಲೆಂಜರ್ಸ್​​ ಬೆಂಗಳೂರು(RCB) ಐಪಿಎಲ್​ ಪ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತಿದೆ ಎಂದು ವರದಿ ಹಾಗೂ ವದಂತಿಗಳನ್ನು ಯುನೈಟೆಡ್​​ ಸ್ಪಿರಿಟ್​​ ಲಿಮಿಟೆಡ್​ ಕಂಪನಿ ತಳ್ಳಿ ಹಾಕಿದೆ.

ಇದನ್ನೂ ಓದಿ:ಕೇರಳ ಸಮುದ್ರದಲ್ಲಿ ಕಂಟೇನರ್ ಹಡಗಿಗೆ ಬೆಂಕಿ ಗಾಯಾಳುಗಳಿಗೆ ಮಂಗಳೂರಿನಲ್ಲಿ ಚಿಕಿತ್ಸೆ

ಹೌದು, ಆರ್​ಸಿಬಿ ಪ್ರಾಂಚೈಸಿಯನ್ನು ಮಾರಾಟ ಮಾಡಲಾಗುತ್ತದೆ ಎಂಬುದು ಶುದ್ಧ ಸುಳ್ಳು ಇದು ಕೇವಲ ಊಹಪೋಹ ಎಂದಿರುವ ಕಂಪನಿ ಆರ್​ಸಿಬಿಯನ್ನು ಮಾರಾಟ ಮಾಡುತ್ತಿಲ್ಲ ಎಂದು ಪ್ರಕಟಣೆಯ ಮೂಲಕ ಸ್ಪಷ್ಟನೆ ಕೊಟ್ಟಿದೆ.

ಕೇಂದ್ರ ಸರ್ಕಾರವು ಕ್ರೀಡಾಕೂಟಗಳಲ್ಲಿ ತಂಬಾಕು ಮತ್ತು ಮದ್ಯ ಉತ್ಪನ್ನಗಳ ಪ್ರಚಾರ ಮತ್ತು ಜಾಹೀರಾತು ನಡೆಯದಂತೆ ನಿರ್ಬಂಧಿಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಆರ್​​ಸಿಬಿಯನ್ನು ಮಾರುವ ಪರಿಶೀಲನೆಯಲ್ಲಿ ಡಿಯಾಜಿಯೋ ಇದೆ ಎನ್ನುವಂತಹ ಸುದ್ದಿಯನ್ನು ಇಂದು ಮುಂಜಾನೆಯಿಂದ ವರದಿಗಳು ಹರಿದಾಡುತ್ತಿದ್ದವು.

ಇದನ್ನೂ ಓದಿ:ಸಂಭಾವ್ಯ ಮಳೆ ಅನಾಹುತ ಪ್ರದೇಶ ಗುರುತಿಸಿ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆ

ಈ ಹಿನ್ನೆಲೆ ಆರ್​​ಸಿಬಿ ತಂಡವನ್ನು ಪೂರ್ಣವಾಗಿಯಾಗಲೀ, ಭಾಗಶಃ ಆಗಿಯಾಗಲೀ ಮಾರಾಟ ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ.

ಭಾರತದಲ್ಲಿ ಡಿಯಾಜಿಯೊ ಪಿಎಲ್‌ಸಿ ಮೂಲಕ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್‌ಸಿಬಿಯನ್ನು ಮುನ್ನಡೆಸುತ್ತಿದೆ. ಇದು ಈಗಾಗಲೇ ಸಂಭಾವ್ಯ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಫ್ರಾಂಚೈಸಿಯ ಮೌಲ್ಯಮಾಪನದ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸದ್ಯ ಫ್ರಾಂಚೈಸಿಯನ್ನು ಸಂಪೂರ್ಣವಾಗಿ ಮಾರಲು ಮಾಲೀಕರು 2 ಬಿಲಿಯನ್ ಯುಎಸ್ ಡಾಲರ್ (ಸುಮಾರು 16,834 ಕೋಟಿ ರೂ.) ವರೆಗೆ ಬೇಡಿಕೆ ಇಡುವ ಸಾಧ್ಯತೆಗಳಿವೆ ಎಂದು ಬ್ಲೂಮ್‌ಬರ್ಗ್ ವರದಿ ಪ್ರಕಟಿಸಿತ್ತು.(ಏಜೆನ್ಸೀಸ್​)

ಧೋನಿಗೆ ಐಸಿಸಿ ‘ಹಾಲ್​ ಆಫ್ ಫೇಮ್’ ಗೌರವ; ಈ ಪಟ್ಟಿಯಲ್ಲಿದೆ 11 ದಿಗ್ಗಜ ಕ್ರಿಕೆಟಿಗರ ಹೆಸರು! ಯಾರೆಲ್ಲ ಗೊತ್ತಾ? | MS Dhoni

T20 ವಿಶ್ವಕಪ್​ಗೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪೂರನ್​ ವಿದಾಯ! 29ನೇ ವಯಸ್ಸಿಗೆ ಈ ನಿರ್ಧಾರ | Nicholas Pooran

Share This Article

ಶ್ರಾವಣ ಮಾಸದಲ್ಲಿ ಕ್ಷೌರ ಮಾಡಿಸಬಾರದು.. ಇದರ ಹಿಂದಿದೆ ವೈಜ್ಞಾನಿಕ ಕಾರಣ..! Shravan

Shravan: ಭಾರತೀಯ ಸಂಸ್ಕೃತಿಯಲ್ಲಿ, ಸಾವನ್ ಮಾಸವನ್ನು ಶಿವನ ಪವಿತ್ರ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿ, ಜನರು…

ಮಳೆಗಾದಲ್ಲಿ ಮೊಸರು ತಿನ್ನಬೇಕೇ? ಬೇಡವೇ? ಇಲ್ಲಿದೆ ಆರೋಗ್ಯಕರ ಮಾಹಿತಿ… curd

ಬೆಂಗಳೂರು: ( curd )  ಮೊಸರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಮಳೆಗಾಲದಲ್ಲಿ…