

ಕೊಕ್ಕರ್ಣೆ: ನಾಲ್ಕೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಳೇ ವಿದ್ಯಾರ್ಥಿ ಸಂ ವಾಜಿ ಅಧ್ಯಕ್ಷ ಅಶೋಕ್ ಭಟ್ ಬಾಳೆಗುಂಡಿ ಕೊಡಮಾಡಿದ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕ ಕೃಷ್ಣ ನಾಯ್ಕ.ಕೆ. ಅಧ್ಯಕ್ಷತೆ ವಹಿಸಿದ್ದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಸಾದ್ ಹೆಗ್ಡೆ ವಾರಾಳಿ, ದಾನಿಗಳಾದ ಕಾಶೀನಾಥ್ ಶೆಣೈ ಕಜ್ಕೆ, ಶಶಿಧರ್ ಶೆಟ್ಟಿಗಾರ್, ಸಿ.ಎ.ಅವಿನಾಶ್ ರಾವ್, ನಿವೃತ್ತ ಮುಖ್ಯಶಿಕ್ಷಕ ಎನ್.ಕರುಣಾಕರ ಶೆಟ್ಟಿ ಕಜ್ಕೆ, ಕೋಟಿ ಹಾಂಡ, ಎಂ.ಕೆ.ನಾಯ್ಕ ಮಿಯಾರು, ರಾವೇಂದ್ರ ಕುಲಾಲ್, ಸಹಪರಿವಾರ ಜಂಗಮೇಶ್ವರ ದೇವಸ್ಥಾನದ ಅರ್ಚಕ ಶಶಾಂಕ್ ಭಟ್, ನಾಗೇಂದ್ರ ಆಚಾರ್ ವಾರಾಳಿ, ನಾಲ್ಕೂರು ಗ್ರಾಪಂ ಅಧ್ಯಕ್ಷೆ ಶೋಭಾ ಕೆ.ಪೂಜಾರಿ, ಸದಸ್ಯೆ ಜಯಲಕ್ಷ್ಮೀ ಶೆಟ್ಟಿ, ವಾಜಿ ಅಧ್ಯಕ್ಷೆ ಕಮಲಾ ಬಾಯಿ, ಪೋಷಕರು, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿ ಸಂದ ಪದಾಧಿಕಾರಿಗಳು, ಶಿಕ್ಷಕ ವೃಂದ, ಮತ್ತಿತರರು ಉಪಸ್ಥಿತರಿದ್ದರು.