Israeli Strikes | ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ 182 ಮಂದಿ ಸಾವು, 700 ಮಂದಿಗೆ ಗಾಯ

Israeli Airstrikes Lebanon
Published on

ಬೈರುತ್: ದಕ್ಷಿಣ ಲೆಬನಾನ್​ನಲ್ಲಿ ಸೋಮವಾರ ಇಸ್ರೇಲ್ ತನ್ನ ದಾಳಿಯನ್ನು ( Israeli Strikes )  ತೀವ್ರಗೊಳಿಸಿದ್ದು ಕನಿಷ್ಠ 182 ಮಂದಿ ಸಾವನ್ನಪ್ಪಿದ್ದಾರೆ, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್​ನ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಇಂದು ಬೆಳಿಗ್ಗೆಯಿಂದ ದಕ್ಷಿಣದ ಪಟ್ಟಣಗಳು ​​ಮತ್ತು ಹಳ್ಳಿಗಳ ಮೇಲೆ ಶತ್ರುಗಳ ದಾಳಿಗಳು ನಡೆದಿವೆ. ಈ ಘಟನೆಯಲ್ಲಿ ದಾಳಿಯಲ್ಲಿ 182 ಮಂದಿ ಸಾವನ್ನಪ್ಪಿದ್ದು, ಸುಮಾರು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಮಕ್ಕಳು, ಮಹಿಳೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲ್ ದಾಳಿಯಿಂದ 500ಕ್ಕೂ ಹೆಚ್ಚು ಮಂದಿ ಉಗ್ರರಿ ಸಾವು  Israeli Strikes

ಕಳೆದ ಏಳು ದಿನದಲ್ಲಿ 200 ಮಂದಿ ಇಸ್ರೇಲ್ ದಾಳಿಯಿಂದ ಮೃತಪಟ್ಟಿದ್ದಾರೆ. ಪೇಜರ್ ಸ್ಫೋಟ ದಾಳಿಗೂ ಮೊದಲು ಅಂದರೆ ಕಳೆದ ವರ್ಷ ಅಕ್ಟೋಬರ್‌ನಿಂದ 2024ರ ಸೆಪ್ಟೆಂಬರ್ 15ರ ವರೆಗೆ ಲೆಬೆನಾನ್‌ನಲ್ಲಿ ಇಸ್ರೇಲ್ ದಾಳಿಯಿಂದ 600 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 100 ಮಂದಿ ನಾಗರಿಕರಾಗಿದ್ದರೆ, ಸುಮಾರು 500ಕ್ಕೂ ಹೆಚ್ಚು ಮಂದಿ ಉಗ್ರರರಾಗಿದ್ದಾರೆ. ಹೆಜ್ಬೊಲ್ಲಾ ಉಗ್ರರ ಸಂಪೂರ್ಣ ಸರ್ವನಾಶಮಾಡಲು ಪಣತೊಟ್ಟಿರುವ ಇಸ್ರೇಲ್ ಸತತ ದಾಳಿ ನಡೆಸುತ್ತಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ನಮಗೆ ಸಂಕೀರ್ಣವಾದ ದಿನಗಳಿವೆ ಎಂದು ಹೇಳಿದ್ದಾರೆ. ಉತ್ತರದಲ್ಲಿ ಸಮತೋಲನವನ್ನು ಬದಲಾಯಿಸುವುದಾಗಿ ಭರವಸೆ ನೀಡಿದ್ದು ನಿಖರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net