

Benjamin Netanyahu: ಇಸ್ರೇಲ್ ಮೇಲೆ ದಾಳಿ ಮಾಡಲು ಯೋಜಿಸುತ್ತಿರುವ ಯಾರ ಮೇಲೂ ಇಸ್ರೇಲ್ ಪ್ರತೀಕಾರದ ದಾಳಿಗಳನ್ನು ಮುಂದುವರಿಸಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
ಈ ಬಗ್ಗೆ ಟೆಲ್ ಅವೀವ್‌ನಲ್ಲಿರುವ ಇಸ್ರೇಲಿ ವಾಯುಪಡೆಯ ಕಮಾಂಡ್ ಸೆಂಟರ್‌ನಿಂದ ಮಾತನಾಡಿದ ನೆತನ್ಯಾಹು, ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲ್ ಅನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡಿರುವ ಯೆಮೆನ್‌ನಲ್ಲಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರಿಂದ ಬೆದರಿಕೆಗಳನ್ನು ತಡೆಯುವ ಭಾಗವಾಗಿ ಈ ದಾಳಿಗಳು ನಡೆದಿವೆ ಎಂದು ಸ್ಪಷ್ಟಪಡಿಸಿದರು.
ಇಸ್ರೇಲ್ ಮೇಲೆ ದಾಳಿ ಮಾಡುವ ಯಾರೇ ಆಗಿರಲಿ, ನಾವು ಅವರ ಮೇಲೆ ದಾಳಿ ಮಾಡುತ್ತೇವೆ. ನಮ್ಮ ಮೇಲೆ ದಾಳಿ ಮಾಡಲು ಯಾರೇ ಯೋಜಿಸಿದರೂ, ನಾವು ಅವರ ಮೇಲೆ ದಾಳಿ ಮಾಡುತ್ತೇವೆ ಎಂದು ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ಶಕ್ತಿ ಮತ್ತು ದೃಢಸಂಕಲ್ಪವನ್ನು ಕಲಿಯುತ್ತಿದೆ. ಹೌತಿ ಭಯೋತ್ಪಾದಕ ಆಡಳಿತವು ಇಸ್ರೇಲ್ ವಿರುದ್ಧದ ಆಕ್ರಮಣ ಮಾಡಿದರೇ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯೆಮೆನ್ ರಾಜಧಾನಿ ಸನಾದಲ್ಲಿ ಅಧ್ಯಕ್ಷೀಯ ಭವನದ ಬಳಿ ಇರುವ ಮಿಲಿಟರಿ ಕಾಂಪೌಂಡ್, ಇಂಧನ ಡಿಪೋ ಮತ್ತು ಎರಡು ವಿದ್ಯುತ್ ಕೇಂದ್ರಗಳು ಸೇರಿದಂತೆ ಇಸ್ರೇಲಿ ವಾಯುಪಡೆ ದಾಳಿ ಮಾಡಿದೆ.ಅಲ್ಲದೆ, ಹೌತಿ ನಿಯಂತ್ರಿತ ಅರಮನೆಯ ಮೇಲೆ ನೇರ ದಾಳಿಯನ್ನು ಇಸ್ರೇಲಿ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅದನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಾಟ್ಜ್, ಐಡಿಎಫ್ ಈಗ ಯೆಮನ್‌ನಲ್ಲಿರುವ ಹೌತಿ ಅಧ್ಯಕ್ಷೀಯ ಅರಮನೆಯನ್ನು ನಾಶಪಡಿಸಿದೆ. ಅಲ್ಲದೆ, ಇಂಧನ ಡಿಪೋಗಳು ಮತ್ತು ವಿದ್ಯುತ್ ಕೇಂದ್ರಗಳ ಮೇಲೆ ದಾಳಿ ಮಾಡಿದೆ. ನಾವು ವಾಯು ಮತ್ತು ನೌಕಾ ದಿಗ್ಬಂಧನವನ್ನು ಹೇರುವುದನ್ನು ಮುಂದುವರೆಸಿದ್ದೇವೆ. ಹೌತಿ ಭಯೋತ್ಪಾದನೆಯನ್ನು ಉತ್ತೇಜಿಸಲು ಬಳಸುವ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದ್ದೇವೆ ಎಂದು ಕ್ಯಾಟ್ಜ್ ತಿಳಿಸಿದ್ದಾರೆ.
ಯೆಮೆನ್ ಮೇಲೆ ಇಸ್ರೇಲಿ ವಾಯುಪಡೆ ನಡೆಸಿದ ದಾಳಿಯಲ್ಲಿ 6 ಜನರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿಗಾಯಗೊಂಡರು ಎಂದು ಹೌತಿ ನಿಯಂತ್ರಿತ ಮೂಲಗಳು ತಿಳಿಸಿವೆ.(ಏಜೆನ್ಸೀಸ್)