ಗಾಜಾದ ಖಾನ್ ಯೂನಿಸ್‌ ನಗರವನ್ನು ಮಾನವೀಯ ಪ್ರದೇಶ ಎಂದು ಘೋಷಿಸಿದ ಇಸ್ರೇಲ್​ ಸೇನೆ| Khan Younis

Khan Younis
Published on

Khan Younis: ಇಸ್ರೇಲಿ ಸೈನ್ಯವು ಗಾಜಾದ ಅತಿದೊಡ್ಡ ನಗರ ಕೇಂದ್ರವನ್ನು ವಶಪಡಿಸಿಕೊಳ್ಳವ ಮುಂಚಿತವಾಗಿ ದಕ್ಷಿಣದಲ್ಲಿರುವ ಮಾನವೀಯ ವಲಯಕ್ಕೆ ತೆರಳುವಂತೆ ಗಾಜಾದ ನಿವಾಸಿಗಳನ್ನು ಶನಿವಾರ (ಸೆಪ್ಟೆಂಬರ್ 6, 2025) ಒತ್ತಾಯಿಸಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸೇನಾ ವಕ್ತಾರ ಅವಿಚೇ ಅಡ್ರೇ, ಅಲ್-ಮವಾಸಿದಲ್ಲಿರುವ ಮಾನವೀಯ ವಲಯಕ್ಕೆ ಬೇಗನೆ ತೆರಳಲು ಮತ್ತು ಈಗಾಗಲೇ ಅಲ್ಲಿಗೆ ಹೋಗಿರುವ ಸಾವಿರಾರು ಜನರೊಂದಿಗೆ ಜತೆಗೂಡಲು ಈ ಅವಕಾಶವನ್ನು ಬಳಸಿಕೊಳ್ಳಿ ಎಂದು ನಗರದ ನಿವಾಸಿಗಳಿಗೆ ಸಂದೇಶದಲ್ಲಿ ತಿಳಿಸಿದ್ದಾರೆ.

ಆದರೆ, ಹೊಸ ಆಕ್ರಮಣ ಯಾವಾಗ ಪ್ರಾರಂಭವಾಗುತ್ತದೆ ಎಂದು ಅಡ್ರೇ ನಿರ್ದಿಷ್ಟವಾಗಿ ಸ್ಪಷ್ಟಪಡಿಸಿಲ್ಲ. ಅಲ್ಲದೆ, ಯಾವುದೇ ದಾಳಿಯ ಬಗ್ಗೆ ಮುಂಚಿತವಾಗಿ ಘೋಷಿಸಲಾಗುವುದಿಲ್ಲ ಎಂದು ಅಡ್ರೇ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ, ಗಾಜಾ ನಗರ ಮತ್ತು ಸುತ್ತಮುತ್ತ ಸುಮಾರು ಹತ್ತು ಲಕ್ಷ ಜನರಿದ್ದಾರೆ. ಇಸ್ರೇಲಿ ಸೇನೆಯು ನಗರವನ್ನು ವಶಪಡಿಸಿಕೊಳ್ಳುವ ತನ್ನ ಯೋಜನೆಗಳೊಂದಿಗೆ ಮುಂದುವರಿದರೆ ವಿಪತ್ತು ಎದುರಾಗಲಿದೆ ಎಂದು ಎಚ್ಚರಿಸಿದೆ ನೀಡಿದೆ.

ಈ ದಾಳಿಯನ್ನು ನಿಲ್ಲಿಸುವಂತೆ ಇಸ್ರೇಲ್ ಮೇಲೆ ವಿದೇಶಗಳ ಒತ್ತಡ ಹೆಚ್ಚುತ್ತಿದೆ. ಅದರೆ ಶತ್ರು ಹಮಾಸ್ ಕಳೆದ ತಿಂಗಳು ತಾತ್ಕಾಲಿಕ ಕದನ ವಿರಾಮ ಮತ್ತು ಗಾಜಾದಲ್ಲಿ ಬಂಧಿಸಲ್ಪಟ್ಟ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದನ್ನು ಒಳಗೊಂಡ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡಿತು. ಆದರೆ, ಇಸ್ರೇಲ್, ಪ್ಯಾಲೆಸ್ಟೀನಿಯನ್ ಹಮಾಸ್​ನ್ನು ಎಲ್ಲಾ ಒತ್ತೆಯಾಳುಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿ, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಗಾಜಾದ ನಿಯಂತ್ರಣವನ್ನು ಬಿಟ್ಟುಕೊಡುವಂತೆ ಒತ್ತಾಯಿಸಿದೆ.

ಈ ಬಗ್ಗೆ ಇಸ್ರೇಲ್​ ತನ್ನ ಪ್ರತ್ಯೇಕ ಹೇಳಿಕೆಯಲ್ಲಿ, ದಕ್ಷಿಣದಲ್ಲಿರುವ ಮಾನವೀಯ ವಲಯವು ಆಹಾರ, ಟೆಂಟ್‌ಗಳು, ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ನಿರಂತರ ಪೂರೈಕೆಯ ಜೊತೆಗೆ ಕ್ಷೇತ್ರ ಆಸ್ಪತ್ರೆಗಳು, ನೀರಿನ ಪೈಪ್‌ಲೈನ್‌ಗಳು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದೆ ಎಂದು ಸೇನೆ ಹೇಳಿದೆ.

2023ರ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯಿಂದ ಯುದ್ಧ ಆರಂಭದಲ್ಲಿ ಇಸ್ರೇಲ್ ಮೊದಲು ಅಲ್-ಮವಾಸಿಯನ್ನು ಸುರಕ್ಷಿತ ವಲಯವೆಂದು ಘೋಷಿಸಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net