

israel vs iran| ಇಂದು (23) ಟೆಹ್ರಾನ್‌ನಲ್ಲಿರುವ ಇರಾನ್‌ನ ಪ್ರಮುಖ ಎವಿನ್ ಜೈಲಿನ ದ್ವಾರದ ಮೇಲೆ ಇಸ್ರೇಲ್ ಪಡೆ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್‌ನ ದೂರದರ್ಶನ ಮಾಹಿತಿ ನೀಡಿದೆ.
ಇರಾನ್ ರಾಜಧಾನಿಯಲ್ಲಿರುವ ಕುಖ್ಯಾತ ಎವಿನ್ ಜೈಲು ಮತ್ತು ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ಗಳ ಭದ್ರತಾ ಪ್ರಧಾನ ಕಚೇರಿ ಸೇರಿದಂತೆ ಇನ್ನೂ ಕೆಲವೆಡೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.
ಟ್ರಂಪ್ ಆಡಳಿತವು ಇರಾನ್‌ನ ಪರಮಾಣು ತಾಣಗಳ ಮೇಲೆ ನಡೆಸಿದ ಬೃಹತ್ ದಾಳಿಯ ಬಳಿಕ, ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯ ನಂತರ ಇಸ್ರೇಲ್ ಇಂದು ಟೆಹ್ರಾನ್‌ನಲ್ಲಿರುವ ಇರಾನ್ ಸರ್ಕಾರಿ ಕಟ್ಟಡಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದೆ.
ಫೋರ್ಡೋ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಾಗಿ ಇರಾನ್‌ನ ಸುದ್ದಿಸಂಸ್ಥೆ ವರದಿ ಮಾಡಿದೆ. ಬಳಿಕ ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ದಾಳಿಯನ್ನು ಖಚಿತಪಡಿಸಿದ್ದಾರೆ. ನಮ್ಮ ರಕ್ಷಣಾಪಡೆಗಳು ಟೆಹ್ರಾನ್ ಮಧ್ಯಭಾಗದ ಗುರಿಗಳ ಮೇಲೆ ನಿಖರ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಇರಾನ್‌ನ ಫೋರ್ಡೋ ಪರಮಾಣು ಘಟಕವನ್ನ ಬೆಟ್ಟದ ಮೇಲೆ ಸ್ಥಾಪನೆ ಮಾಡಲಾಗಿದೆ. ಫೋರ್ಡೊ ಅತ್ಯಂತ ರಹಸ್ಯ ಮತ್ತು ಬಿಗಿ ಭದ್ರತೆಯ ಸೌಲಭ್ಯವಾಗಿದ್ದು 2009 ರಲ್ಲಿ ಈ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬಂದಿತ್ತು.
ಎವಿನ್ ರಾಜಕೀಯ ಕೈದಿಗಳು ಮತ್ತು ಪಾಶ್ಚಿಮಾತ್ಯಗಳ ಕಐದಿಗಳನ್ನು ಇಲ್ಲಿ ಇರಿಸಲಾಗಿದೆ. ಎವಿನ್ ಜೈಲನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಿರ್ವಹಿಸುತ್ತದೆ. ಇದು ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಗೆ ಅವರ ನಿಯಂತ್ರಣದಲ್ಲಿದೆ. ಈ ಸೌಲಭ್ಯವು ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪದ ಮೇಲೆ ಬಹಳ ಹಿಂದಿನಿಂದಲೂ ಟೀಕೆಗೆ ಒಳಗಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟದ ನಿರ್ಬಂಧಗಳ ಗುರಿಯಾಗಿದೆ.
ಎವಿನ್ ಜೈಲು ಅನೇಕ ಇರಾನಿಯನ್ನರ ಜೀವವನ್ನು ಬಲಿ ಪಡೆದಿದೆ, ಇನ್ನೂ ಅನೇಕರನ್ನು ಅಲ್ಲಿ ಬಂಧಿಸಲಾಗಿದೆ. ಈ ದಾಳಿಯು ಸಾಂಕೇತಿಕ ಮತ್ತು ಯುದ್ಧತಂತ್ರವಾಗಿದ್ದು, ಇರಾನ್ ಆಡಳಿತವನ್ನು ಅವಮಾನಿಸುವ ಗುರಿಯನ್ನು ಹೊಂದಿದೆ .
(ಏಜೆನ್ಸೀಸ್)