More

    ವಿಧಾನಸಭೆಯಲ್ಲಿ ‘ಇಸ್ರೇಲ್ ಕೃಷಿ’ ಕೋಲಾಹಲ: 150 ಕೋಟಿ ರೂ. ಬಗ್ಗೆ ಸಚಿವರಿಗೂ ಅನುಮಾನ!

    ಬೆಂಗಳೂರು: ಈ ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಇಸ್ರೇಲ್ ಕೃಷಿ ಯೋಜನೆಗೆ ಈಗಿನ ಸರ್ಕಾರ ಆಸಕ್ತಿ ತೋರಿಸದೆ ಇರುತ್ತಿಲ್ಲ ಎಂದು ಸಿಟ್ಟಿಗೆದ್ದ ಜೆಡಿಎಸ್ ಶಾಸಕರು ಬುಧವಾರ ವಿಧಾನಸಭೆಯಲ್ಲಿ ಧರಣಿ ನಡೆಸಿದರು.

    ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ನಾಗನಗೌಡ ಕಂದಕೂರ್, ಇಸ್ರೇಲ್ ಮಾದರಿ ಕೃಷಿ ಜಾರಿಗೊಳಿಸಲು ಪ್ರಸಕ್ತ ಸಾಲಿನಲ್ಲಿ ಮೀಸಲಿಟ್ಟ ಅನುದಾನವೆಷ್ಟು ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಇಸ್ರೇಲ್ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿ ಅನುಷ್ಠಾನ ಕಾರ್ಯಕ್ರಮಕ್ಕೆ ಅನುದಾನ ಮೀಸಲಿರಿಸಿಲ್ಲ ಎಂದರು. ಈ ಉತ್ತರ ಜೆಡಿಎಸ್ ಶಾಸಕರಿಗೆ ಮತ್ತಷ್ಟು ಸಿಟ್ಟು ತರಿಸಿತು. 2018-19ನೇ ಸಾಲಿನ ಆಯವ್ಯಯದಲ್ಲಿ ಯಾದಗಿರಿ ಜಿಲ್ಲೆಗೆ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲು 150 ಕೋಟಿ ಘೋಷಣೆ ಮಾಡಲಾಗಿತ್ತು, ಈ ಹಣವಾದರೂ ಎಲ್ಲಿ ಹೋಯಿತು? ಎಂದು ಪ್ರಶ್ನಿಸಿದರು. ಈ ಹಣ ಎಲ್ಲಿ ಹೋಗಿದೆಯೆಂದು ನನಗೂ ಅನುಮಾನವಿದೆ, ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಿ ಮಾಹಿತಿ ಕೊಡಿಸುತ್ತೇನೆಂದು ಸಚಿವರು ಉತ್ತರಿಸಿದರು. ಇದನ್ನೂ ಓದಿರಿ ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

    ಈ ವೇಳೆ ಜೆಡಿಎಸ್ ಶಾಸಕ ಗದ್ದಲ ಜೋರಾಗಿತ್ತು. 150 ಕೋಟಿ ಪಟ್ಟಾಯಿಸಿಬಿಟ್ಟಿದ್ದಾರೆ ಎಂದು ಶಿವಲಿಂಗೇಗೌಡ ಟೀಕಿಸಿದರೆ, ಬಜೆಟ್‌ನಲ್ಲಿ ಘೋಷಣೆ ಮಾಡಿದ ಯೋಜನೆಯನ್ನೇ ಅನುಷ್ಠಾನ ಮಾಡದಿದ್ದರೆ ಬಜೆಟ್‌ಗೇನು ಬಂತು ಮಹತ್ವ. ಬದ್ಧತೆ ಎಲ್ಲಿದೆ ಎಂದು ಶಾಸಕ ಅನ್ನದಾನಿ, ಬಾಲಕೃಷ್ಣ, ನಾಡಗೌಡ ಮತ್ತಿತರರು ಪ್ರಶ್ನಿಸಿದರು. ಇಸ್ರೇಲ್ ಕೃಷಿ ಬಗ್ಗೆ ಸರ್ಕಾರದ ನಿಲುವೇನು? ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರಕ್ಕೆ ಆಸಕ್ತಿ ಇದೆಯೋ ಇಲ್ಲವೋ ಎಂದು ಸ್ಪಷ್ಟಪಡಿಸಿ ಎಂದು ಪಟ್ಟುಹಿಡಿದರು.

    ಕೊನೆಗೆ ಸ್ಪೀಕರ್ ಪೀಠದ ಮುಂದೆ ಆಗಮಿಸಿ ಧರಣಿಯನ್ನೂ ನಡೆಸಿದರು. ಈ ವೇಳೆ ಕೋಲಾಹಲ ಉಂಟಾಯಿತು. ಜೆಡಿಎಸ್‌ನವರಿಗೆ ಹೇಳುವವರು-ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಸದನದಲ್ಲಿ ಶಿಸ್ತು ಕಾಪಾಡುವುದನ್ನು ಹೇಗೆ ಹೇಳಿಕೊಡಬೇಕು ಎಂದು ಸ್ಪೀಕರ್ ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.

    ಸಿಡಿ ಕೇಸ್​: ಹೆಗಲು ಮುಟ್ಟಿ ನೋಡಿಕೊಂಡದ್ದಕ್ಕೂ ಈ ಫೋಟೋಗೂ ಸಂಬಂಧವಿದೆಯಾ?

    ವಿಧಾನಸಭೆಯಲ್ಲಿ ಹಾಸನದ ಕೋಳಿಜಗಳ!

    ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts