More

  ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮಂದಿರದಲ್ಲಿ ಐಸಿರಿ ಮಹಿಳಾ ಸಮ್ಮೇಳನ

  ವಿಜಯವಾಣಿ ಸುದ್ದಿಜಾಲ ಕೋಟ

  ಸಮುದಾಯದ ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಚಿತ್ತ ಹರಿಸಬೇಕು. ಆ ಮೂಲಕ ಮನೆಮನಗಳಲ್ಲಿ ಐಸಿರಿ ತುಂಬುವಂತ್ತಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷೆ ರೂಪಾ ಶಾಸ್ತ್ರಿ ಹೇಳಿದರು.

  ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಬಯಲು ರಂಗಮಂದಿರದಲ್ಲಿ ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ನೇತೃತ್ವದಲ್ಲಿ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಮತ್ತು ಅಂಗಸಂಸ್ಥೆ ಸಹಯೋಗದೊಂದಿಗೆ ಐಸಿರಿ ಮಹಿಳಾ ಸಮ್ಮೇಳನ 2024 ಉದ್ಘಾಟಿಸಿ ಮಾತನಾಡಿದರು.

  ಮಹಿಳೆಯರು ಸಾಂಸ್ಕೃತಿಕ, ಸಾಮಾಜಿಕ, ಸಂಘಟಿತ, ರಾಜಕೀಯ, ಸ್ವಾವಲಂಬಿಯಾಗಿ ಮುನ್ನೆಲೆಗೆ ಬರುವ ಮೂಲಕ ಸಮುದಾಯದ ಏಳಿಗೆಯ ಕೇಂದ್ರವಾಗಬೇಕು. ಮಹಿಳಾ ಸಮಾವೇಶ ಆಯೋಜಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಂಘಟಿತ ಶಕ್ತಿಯಾಗಿ ಹೊರಹೊಮ್ಮಬೇಕು ಎಂದರು.
  ಬೆಂಗಳೂರಿನ ಶೇಖರ್ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ.ಪುಷ್ಪಲತಾ ವಿ.ಐತಾಳ್, ಗಮಕ ವಿದುಷಿ ಯಾಮಿನಿ ಭಟ್, ಪಿಎಚ್.ಡಿ ಪಡೆದ ಡಾ.ಸಹನಾ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.

  ಸಮ್ಮೇಳನಾಧ್ಯಕ್ಷೆ, ಹಿರಿಯ ಸಂಶೋಧಕಿ ಡಾ.ಗಾಯತ್ರಿ ನಾವಡ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲ ಅಧ್ಯಕ್ಷ ಡಾ.ಕೆ.ಎಸ್.ಕಾರಂತ್, ಪತ್ರಕರ್ತೆ ಡಾ.ಯು.ಬಿ.ರಾಜಲಕ್ಷ್ಮೀ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಅಧ್ಯಕ್ಷ ಎಚ್.ಸತೀಶ್ ಹಂದೆ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಡುಪಿ ಜಿಲ್ಲಾ ಸಂಚಾಲಕಿ ಶಾಂತಾ ಗಣೇಶ್ ಇದ್ದರು.

  ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಧ್ಯಕ್ಷೆ ಯಶೋದಾ ಸಿ.ಹೊಳ್ಳ ಸ್ವಾಗತಿಸಿದರು. ಭಾರತಿ ವಿ.ಮಯ್ಯ, ವನಿತಾ ಉಪಾಧ್ಯ ಗಣ್ಯರನ್ನು ಪರಿಚಯಿಸಿದರು. ಸುಜಾತಾ ಬಾಯರಿ, ನಾಗರತ್ನ ಹೇರ್ಳೆ ನಿರೂಪಿಸಿ, ವಂದಿಸಿದರು.

  ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ವಿಷ್ಣು ಸಹಸ್ರನಾಮ ಪಠಿಸಿ, ನಂತರ ಮೆರಣಿಗೆ ಮೂಲಕ ಆಂಜನೇಯ ದೇಗುಲ ಸಂದರ್ಶಿಸಲಾಯಿತು. ಭರತನಾಟ್ಯ, ಕೋಲಾಟ, ತಾಳದೊಂದಿಗೆ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಐಸಿರಿ ಸಭೆಯನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು.

  See also  ಕೋಟ ದೇಗುಲಕ್ಕೆ ಸಚಿವ ರಾಮಲಿಂಗ ರೆಡ್ಡಿ ಭೇಟಿ: ಅಭಿವೃದ್ಧಿಗೆ ಅನುದಾನ ನೀಡಲು ಮನವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts