ಶಂಕಿತ ಉಗ್ರನ ಟಾರ್ಗೆಟ್​ನಿಂದ ಸಿಎಂ ಜಸ್ಟ್​ ಮಿಸ್​! ಶಾರೀಕ್​ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ!

shariq
Published on

ಬೆಂಗಳೂರು: ಮಂಗಳೂರಿನ ಆಟೋದಲ್ಲಿ ಕುಕ್ಕರ್​ಬಾಂಬ್​ ಸ್ಫೋಟ ಪ್ರಕರಣದ ಶಂಕಿತ ಉಗ್ರನ ಟಾರ್ಗೆಟ್​ ಸಿಎಂ ಬಸವರಾಜ ಬೊಮ್ಮಾಯಿ! ಎಂಬ ಆಘಾತಕಾರಿ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಶಿವಮೊಗ್ಗ ಮೂಲದ ಈತನಿಗೆ ಮೈಸೂರಿಗೂ ನಂಟಿದೆ. ಆರೋಪಿ ಶಾರೀಕ್​​ ತನ್ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ ಹಾಕಿಕೊಂಡಿರುವುದು ಮತ್ತಷ್ಟು ಕಳವಳ ಹುಟ್ಟಿಸಿದೆ.

ಸಿಎಂ ಜಸ್ಟ್​ ಮಿಸ್​: ಕೆಲವು ಭಯೋತ್ಪಾದನಾ ಸಂಘಟನೆಗಳ ಪ್ರೇರಣೆಯಿಂದ ಆರೋಪಿ ಶಾರೀಕ್​, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ. ನ.19ರಂದು ಮಂಗಳೂರಿನಲ್ಲಿ ಒಂದೇ ವೇದಿಕೆಯಲ್ಲಿ ಈ ನಾಯಕರನ್ನು ಹತ್ಯೆ ಮಾಡುವ ಯೋಜನೆಯನ್ನೂ ರೂಪಿಸಲಾಗಿತ್ತು ಎನ್ನುವುದು ಪೊಲೀಸರ ಮಾಹಿತಿ. ಆದರೆ ಮೈಸೂರಿನಿಂದ ಆರೋಪಿ ಹೊರಡುವ ಸಂದರ್ಭ ಬಸ್​ ಮಿಸ್ ಆಗಿತ್ತು. ಮಂಗಳೂರಿಗೆ ತಲುಪುವುದು ತಡವಾಗಿದ್ದರಿಂದ ಟಾರ್ಗೆಟ್​ ಸಿಎಂ ಯೋಜನೆ ವಿಫಲವಾಯಿತು. ಮಂಗಳೂರಿಗೆ ತಡವಾಗಿ ಆಗಮಿಸಿದ ಆರೋಪಿ ಜನವಸತಿ ಪ್ರದೇಶಕ್ಕಾಗಿ ಹುಡುಕುತ್ತಿದ್ದು, ಸಿಟಿ ಸೆಂಟರ್​ ಅಥವಾ ಕದ್ರಿ ಪಾರ್ಕ್​ಗೆ ತೆರಳಲು ಯೋಜನೆ ರೂಪಿಸಿದ್ದ. ಪಡೀಲ್​ ಬಳಿ ಬಸ್​ ಇಳಿದು ಪೂರ್ವ ಯೊಜನೆಯಂತೆ ಕುಕ್ಕರ್​ನಲ್ಲಿರಿಸಿದ ಸಾಧಾರಣ ತೀವ್ರತೆಯ ಬಾಂಬ್​ ಅನ್ನು ಆ್ಯಕ್ಟೀವ್​ಗೊಳಿಸಿ ರಿಕ್ಷಾ ಏರಿದ್ದ. ಪಡೀಲ್​ ಪಂಪ್​ವೆಲ್​ ರಸ್ತೆ ಕಾಮಗಾರಿಯಿಂದ ರಸ್ತೆ ಸಮರ್ಪಕವಿಲ್ಲದ ಕಾರಣ ಕುಕ್ಕರ್​ ಅದುರಿ ಸ್ಫೋಟಗೊಂಡಿದೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 2022ರ ಸೆಪ್ಟಂಬರ್​ 19ರಂದು ದಾಖಲಾದ ಕಾನೂನುಬಾಹಿರ ಚಟುವಟಿಕೆ ಪ್ರಕರಣದಲ್ಲಿ ಶಾರೀಕ್​ ಒಂದನೇ ಆರೋಪಿ. ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಶಾರೀಕ್​​ಗೆ ಮೈಸೂರಿನ ನಂಟು ಇರುವುದು ಬಹಿರಂಗಗೊಂಡ ಕಾರಣ ಪೊಲೀಸರು ಹೈ-ಅಲರ್ಟ್​​ ಆಗಿದ್ದು, ಮೈಸೂರು ನಗರಾದ್ಯಂತ ಬಿಗಿ ತಪಾಸಣೆ ನಡೆಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಕಣ್ಗಾವಲು ಹೆಚ್ಚಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ. ನಗರಾದ್ಯಂತ ಬೀಟ್​ ಹೆಚ್ಚಿಸಿದ್ದಾರೆ. ನಗರಾದ್ಯಂತ ಬಾಡಿಗೆ ಮನೆ ಹಾಗೂ ಬಾಡಿಗೆ ಕೊಠಡಿಗಳಲ್ಲಿ ವಾಸವಿರುವ ಬಾಡಿಗೆದಾರರ ದಾಖಲಾತಿಗಳನ್ನು ಮನೆಯ ಮಾಲೀಕರು ಕಟ್ಟುನಿಟ್ಟಿನಿಂದ ಪರಿಶೀಲಿಸಬೇಕು. ಅನುಮಾನ ಬಂದಲ್ಲಿ ಸ್ಥಳೀಯ ಪೊಲೀಸ್​ ಠಾಣೆಗಳಿಗೆ ದೂರು ನೀಡಬೇಕು ಎಂದು ನಗರ ಪೊಲೀಸ್​ ಆಯುಕ್ತರು ನಿರ್ದೇಶನ ನೀಡಿದ್ದಾರೆ.

ಶಂಕಿತ ಉಗ್ರ ಶಾರೀಕ್​​ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ ಇದ್ದು, ಅನುಮಾನಕ್ಕೆ ಕಾರಣವಾಗಿದೆ. ಇಶಾ ಫೌಂಡೇಶನ್ ಸುತ್ತ ಓಡಾಡಿದ್ನಾ ಶಾರೀಕ್​, ಅದರ ಮೇಲೂ ಟಾರ್ಗೆಟ್​ ಇಟ್ಟಿದ್ನಾ? ಎಂಬಿತ್ಯಾದಿ ಅನುಮಾನಗಳು ಹುಟ್ಟಿವೆ.

ೀಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net