ನಿಶಾ ಅಂಬಾನಿ-ಆನಂದ್ ಪಿರಾಮಲ್ ದಂಪತಿಗೆ ಅವಳಿ ಮಕ್ಕಳು

Isha Ambani Anand Piramal
Published on

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರ ಆಗಮನವಾಗಿದ್ದು, ಕುಟುಂಬ ಸಂಭ್ರಮದಲ್ಲಿದೆ. ಇವರ ಪುತ್ರಿ ಇಶಾ ಅಂಬಾನಿ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ.

'ನ.19ರಂದು ಇಶಾ ಮತ್ತು ಆನಂದ್​ ಅವರಿಗೆ ಅವಳಿ ಮಕ್ಕಳು ಜನಿಸಿವೆ. ಹೆಣ್ಣು ಮಗು ಆದಿಯಾ, ಗಂಡು ಮಗು ಕೃಷ್ಣ ನೋಡಲು ಮುದ್ದಾಗಿದ್ದಾರೆ. ದೇವರು ಮಕ್ಕಳಿಗೆ ಆಶೀರ್ವದಿಸಲಿ. ಇಶಾಗೆ ಬದುಕಿನ ಅತ್ಯಂತ ಸಂಭ್ರಮದ ದಿನ ಇದು' ಎಂದು ಅಂಬಾನಿ ಕುಟುಂಬ ತಿಳಿಸಿದೆ.

2018ರಲ್ಲಿ ಪಿರಾಮಲ್ ಸಂಸ್ಥೆಯ ಸಂಸ್ಥಾಪಕರಾದ ಸ್ವಾತಿ ಮತ್ತು ಅಜಯ್​ ಪಿರಾಮಲ್​ ದಂಪತಿಯ ಪುತ್ರ ಆನಂದ್​ ಜತೆ ಇಶಾ ಅವರ ಮದುವೆ 2018ರ ಡಿಸೆಂಬರ್ 12ರಂದು ಮುಂಬೈನಲ್ಲಿ ಅದ್ದೂರಿಯಾಗಿ ನೆರವೇರಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net