ಕರೊನಾದಿಂದಾಗಿ ಆನ್​ಲೈನ್​ನಲ್ಲಿ ದರ್ಶನ ನೀಡಲಾರಂಭಿಸಿದ ದೇವರು

ಇಸಚೊನ
Published on

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವು ದೇವಾಲಯಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಮಾ.18ರಿಂದ ಮುಂದಿನ ಸೂಚನೆವರೆಗೂ ಭಕ್ತರಿಗೆ ಪ್ರವೇಶ ರದ್ದು ಮಾಡಲಾಗಿದೆ. ದೇವಾಲಯದಲ್ಲಿ ಭಗವಂತನಿಗೆ ನಿತ್ಯ ಪೂಜೆ ಸೇವೆಗಳು ಆಶ್ರಮದ ಅರ್ಚಕರಿಂದ ನಡೆಯುತ್ತದೆ. ಭಕ್ತರು ಹಾಗೂ ಲೋಕ ಕಲ್ಯಾಣಾರ್ಥ ಭಜನೆ ಮತ್ತು ಕೀರ್ತನೆ ಸೇವೆಯನ್ನು ಮುಂದುವರಿಸಲಾಗುವುದು. ಎಲ್ಲ ಭಕ್ತರೂ www.iskconbangalore.org ಮತ್ತು ಇಸ್ಕಾನ್ ಬೆಂಗಳೂರಿನ ವಿವಿಧ ಆನ್​ಲೈನ್ ವೇದಿಕೆಗಳಿಂದ ನಿತ್ಯ ದರ್ಶನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ. ಈಗಾಗಲೇ ಗವಿಗಂಗಾಧರೇಶ್ವರ ಸೇರಿ ನಗರದ ಕೆಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ನಿಲ್ಲಿಸಲಾಗಿದೆ. ಇದೀಗ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿನ ಶ್ರೀ ಸಾಯಿ ಮಂಡಳಿ ಸೇರಿ ಹಲವು ದೇಗುಲಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net