ಹೇಗಿದ್ದ ಸಂಜು ಸ್ಯಾಮ್ಸನ್​ ಪತ್ನಿ ಚಾರುಲತಾ ಹೇಗಾಗಿದ್ದಾರೆ ನೋಡಿ...ನಿಜಕ್ಕೂ ಇವರು ಅವರೇನಾ? Sanju Samson

Sanju Samson
Published on

Sanju Samson : ತೂಕ ಕಳೆದುಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಅಲ್ಲದೆ, ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ದೃಢಸಂಕಲ್ಪ ಇದ್ದರೆ ಮಾತ್ರ ತೂಕವನ್ನು ಇಳಿಸಿಕೊಳ್ಳಬಹುದು ಎಂಬುದಕ್ಕೆ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ಸಂಜು ಸ್ಯಾಮ್ಸನ್​ ಪತ್ನಿ ಚಾರುಲತಾ ರಮೇಶ್​ ತಾಜಾ ಉದಾಹರಣೆಯಾಗಿದ್ದಾರೆ.

ದಡೂತಿಯಾಗಿದ್ದ ಚಾರುಲತಾ ತೂಕವನ್ನು ಇಳಿಸಿಕೊಂಡು ಬಳಕುವ ಬಳ್ಳಿಯಂತಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ವಿಡಿಯೋ ವೈರಲ್​ ಆಗಿದೆ.

ಚಾರುಲತಾ ಅವರು ವಿಡಿಯೋವನ್ನು ಪೋಸ್ಟ್ ಮಾಡುವ ಮೊದಲು ಸ್ವಲ್ಪ ಹಿಂಜರಿದಿದ್ದನ್ನು ಒಪ್ಪಿಕೊಂಡರು. ಆದರೆ, ಒಮ್ಮೆ ವಿಡಿಯೋ ಹಂಚಿಕೊಂಡ ನಂತರ ಅದು ತ್ವರಿತವಾಗಿ ಅನೇಕರ ಗಮನ ಸೆಳೆದಿದೆ. ನಾನು ಈ ವಿಡಿಯೋವನ್ನು ಪೋಸ್ಟ್ ಮಾಡಲು ಎರಡು ಬಾರಿ ಯೋಚಿಸಿದೆ. ಏಕೆಂದರೆ, ಸ್ಲಿಮ್ ಆಗುವುದು ಜೀವನದಲ್ಲಿ ಉತ್ತಮ ಪರಿವರ್ತನೆ ಎಂದು ನಾನೆಂದಿಗೂ ಭಾವಿಸಲು ಬಯಸುವುದಿಲ್ಲ. ನೀವು ದಪ್ಪವಾಗಿರಿ, ಸ್ಲಿಮ್, ಸುಂದರ ಅಥವಾ ಕಪ್ಪಾಗಿರಿ ಮೊದಲು ನಿಮ್ಮನ್ನು ನೀವು ಪ್ರೀತಿಸಿ, ಸಂತೋಷವಾಗಿರಿ ಮತ್ತು ಆನಂದಿಸಿ ಎಂದು ಚಾರುಲತಾ ಬರೆದುಕೊಂಡಿದ್ದಾರೆ.

ಹೊಸ ವರ್ಷದಂದು ಶೇರ್​ ಮಾಡಿಕೊಂಡಿರುವ ವಿಡಿಯೋ ಈವರೆಗೆ 5 ಮಿಲಿಯನ್​ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋಗೆ ಲೈಕ್​ ಕೊಟ್ಟಿದ್ದಾರೆ. ವಿಡಿಯೋ ನೋಡಿದ ಸಾಕಷ್ಟು ಮಂದಿ ಚಾರುಲತಾ ಅವರ ದೃಢಸಂಕಲ್ಪವನ್ನು ಮೆಚ್ಚಿದ್ದಾರೆ. ದಪ್ಪಗಿದ್ದ ಚಾರುಲತಾ ಇದೀಗ ಬಳಕುವ ಬಳ್ಳಿಯಂತಿರುವುದನ್ನು ನೋಡಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನೀವು ಇತರರಿಗೆ ಸ್ಫೂರ್ತಿ ಎಂದು ಕೆಲವರು ಕಾಮೆಂಟ್​ ಮಾಡಿದರೆ, ನೆಟ್ಟಿಗರೊಬ್ಬರು ನಿಜವಾಗಿಯೂ ಇವರು ಸಂಜು ಸ್ಯಾಮ್ಸನ್​ ಪತ್ನಿನಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಐದು ವರ್ಷಗಳ ಡೇಟಿಂಗ್ ನಂತರ 2018ರಲ್ಲಿ ಚಾರುಲತಾ ಮತ್ತು ಸಂಜು ವಿವಾಹವಾದರು. ಚಾರುಲತಾ ಅವರು ತಿರುವನಂತಪುರದ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಸಂಜು ಅವರ ಸಹಪಾಠಿಯಾಗಿದ್ದರು. ಮದುವೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net