ದಿಂಬು ಇಲ್ಲದೆ ಮಲಗುವುದು ನಿಮ್ಮ ಬೆನ್ನುಮೂಳೆಗೆ ಒಳ್ಳೆಯದೋ, ಕೆಟ್ಟದ್ದೋ? ಇಲ್ಲಿದೆ ಮಾಹಿತಿ.. | Pillow

dk - 2025-02-25T152706.341
Published on

Pillow:ದಿಂಬು ಇಲ್ಲದೆ ಮಲಗುವುದು ಬೆನ್ನುಮೂಳೆಗೆ ಅಪಾಯಕಾರಿಯೋ ಅಥವಾ ಸಹಕಾರಿಯೋ ಎಂದರೆ ಅನೇಕ ಜನರು ಆಶ್ಚರ್ಯಪಡುತ್ತಾರೆ. ಇದು ಹೆಚ್ಚಾಗಿ ಮಲಗುವ ಸ್ಥಾನಗಳ ಮತ್ತು ಸೌಕರ್ಯವನ್ನು ಅವಲಂಬಿಸಿರುತ್ತದೆ. ನೀವು ದಿನಾಲು ಮಲಗುವಾಗಿ ದಿಂಬು ಬಳಸುತ್ತಿದ್ದರೆ ಅದರಿಂದಾಗುವ ಪ್ರಯೋಜನ ಮತ್ತು ಅನಾನುಕೂಲಗಳನ್ನು ತಿಳಿಯಿರಿ.

Version 1.0.0
Version 1.0.0

ದಿಂಬು ಇಲ್ಲದೆ ಮಲಗುವ ಪ್ರಯೋಜನ

1.ಬೆನ್ನುಮೂಳೆಯ ನೈಸರ್ಗಿಕ ಭಂಗಿ ಕಾಪಾಡಿಕೊಳ್ಳುವುದು

ದಿಂಬು ಇಲ್ಲದೆ ಮಲಗುವುದರಿಂದ ಹೆಚ್ಚು ನೈಸರ್ಗಿಕ ಭಂಗಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ. ವಿಶೇಕ್ಷವಾಗಿ ಹೊಟ್ಟೆಯ ಮೇಲೆ ಒರಲು ಮಲಗುವವರು ದಪ್ಪದಿಂಬುನಿಂದ ಒತ್ತಡ ಅನುಭವಿಸುತ್ತಾರೆ.ಆದರೆ, ಸಮತಲ ಮಲಗುವುದರಿಂದ ಬೆನ್ನು ಮೂಳೆಯು ತಟಸ್ಥ ಸ್ಥಾನದಲ್ಲಿರುತ್ತದೆ.

2.ಕುತ್ತಿಗೆ ಮತ್ತು ಬೆನ್ನಿನ ನೋವು ಕಡಿಮೆಯಾಗುವುದು

ಸಾಮಾನ್ಯವಾಗಿ ಕುತ್ತಿಗೆ ಮತ್ತು ನೋವು ಇರುವವರು ದಪ್ಪ ದಿಂಬು ಬಳಸುವುದರಿಂದ ನೋವಿನ ಒತ್ತಡ ಕಡಿಮೆಯಾಗಲಿದೆ.

3.ಕಾಲಾನಂತರದಲ್ಲಿ ಸುಧಾರಿತ ಭಂಗಿ

ದಿಂಬು ಇಲ್ಲದೆ ಮಲಗವುದರಿಂದ ದೇಹವು ನೈಸರ್ಗಿಕ ಮಲಗುವ ಭಂಗಿಗೆ ಹೊಂದಿಕೊಳ್ಳಲು ಕಲಿಯುತ್ತದೆ. ನಿದ್ರೆಯ ಸರಿಯಾದ ಸ್ಥಾನೀಕರಣದಿಂದಾಗಿ ದೀರ್ಘಕಾಲದ ಕುತ್ತಿಗೆ ನೋವು ಅನುಭವಿಸುವವರಿಗೆ ಇದು ಪ್ರಯೋಜನವನ್ನು ನೀಡುತ್ತದೆ.

ದಿಂಬು ಇಲ್ಲದೆ ಮಲಗುವುದರಿಂದಾಗುವ ಅನಾನುಕೂಲ

1.ಕುತ್ತಿಗೆ ಮತ್ತು ಭುಜದ ಸೆಳೆತ

ಒಂದೇ ಪಕ್ಕಕ್ಕೆ ಮಲಗುವವರು ದಿಂಬು ಇಲ್ಲದೆ ಒತ್ತಡ ಅನುಭವಿಸಬಹುದು, ಏಕೆಂದರೆ ಅವರ ತಲೆ ಬೆನ್ನುಮೂಳೆಯೊಂದಿಗೆ ಹೊಂದಿಕೊಂಡಂತೆ ಉಳಿಯಲು ಆಧಾರ ಬೇಕಾಗುತ್ತದೆ. ಆಧಾರ ಕೊರತೆಯು ಕುತ್ತಿಗೆ ಮತ್ತು ಭುಜಗಳಲ್ಲಿ ಬಿಗಿತ ಅಥವಾ ನೋವನ್ನು ಉಂಟುಮಾಡಬಹುದು.

2.ಎಲ್ಲರಿಗೂ ಶಿಫಾರಸು ಮಾಡಲಾಗಿಲ್ಲ

ವರದಿಗಳ ಪ್ರಕಾರ, ಹೊಟ್ಟೆಯಲ್ಲಿ ಮಲಗುವವರು ದಿಂಬು ಇಲ್ಲದೆ ಮಲಗುವುದರಿಂದ ಪ್ರಯೋಜನ ಪಡೆಯುತ್ತಾರೆ, ಬೆನ್ನು ಮತ್ತು ಪಕ್ಕಕ್ಕೆ ಮಲಗುವವರಿಗೆ ಸರಿಯಾದ ಬೆನ್ನುಮೂಳೆಯ ಜೋಡಣೆಯನ್ನು ಕಾಪಾಡಿಕೊಳ್ಳಲು ಸ್ವಲ್ಪ ಮಟ್ಟದ ಬೆಂಬಲ ಬೇಕಾಗುತ್ತದೆ. ತಜ್ಞರೊಂದಿಗೆ ಮಾತನಾಡಿ ಅದಕ್ಕೆ ಅನುಗುಣವಾಗಿ ದಿಂಬನ್ನು ಬಳಸುವುದು ಅಥವಾ ತಪ್ಪಿಸುವುದು ಉತ್ತಮ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net