More

    ರಮ್ಯಾ ಇರ್ತಾರಾ? ರಚಿತಾ ಬರ್ತಾರಾ?; ಆಗಸ್ಟ್ 15ರಂದು ಸೆಟ್ಟೇರಲಿದೆ ‘ಸಂಜು ವೆಡ್ಸ್ ಗೀತಾ 2’

    | ಹರ್ಷವರ್ಧನ್ ಬ್ಯಾಡನೂರು

    ‘ಸಂಜು ವೆಡ್ಸ್ ಗೀತಾ’, ಶ್ರೀನಗರ ಕಿಟ್ಟಿ, ರಮ್ಯಾ ನಟಿಸಿದ್ದ ನಾಗಶೇಖರ್ ನಿರ್ದೇಶಿಸಿದ್ದ 2011ರ ಹಿಟ್ ಸಿನಿಮಾ. ಇದೀಗ 12 ವರ್ಷಗಳ ನಂತರ ನಿರ್ದೇಶಕ ನಾಗಶೇಖರ್ ಅದರ ಸೀಕ್ವಲ್ ೋಷಿಸಿದ್ದಾರೆ. ಇತ್ತೀಚೆಗಷ್ಟೆ ನಾಯಕ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದಂದು ‘ಸಂಜು ವೆಡ್ಸ್ ಗೀತಾ 2’ ಅನೌನ್ಸ್ ಆಗಿದೆ. ಮೊದಲ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿದ್ದ ಕಾರಣ, ಈ ಸೀಕ್ವಲ್ ಬಗ್ಗೆ ಸಾಮಾನ್ಯವಾಗಿಯೇ ಕುತೂಹಲ, ನಿರೀಕ್ಷೆ ಹೆಚ್ಚಿದೆ. ನಿರ್ದೇಶಕ ನಾಗಶೇಖರ್, ‘ಕಥೆ ಹೊಳೆಯಿತು, ಒಂದು ಸುಂದರ ಸಿನಿಮಾ ಮಾಡಬಹುದು ಅಂತನ್ನಿಸಿ ಪ್ರಾರಂಭಿಸಿದೆ. ಇದೊಂದು ಬ್ಯೂಟಿುಲ್ ಸಿನಿಮಾ ಆಗುವುದರಲ್ಲಿ ಸಂದೇಹವಿಲ್ಲ. ಈ ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಮೊದಲು ಹಾಡುಗಳ ಕೆಲಸ ಪ್ರಾರಂಭಿಸಿದೆವು. ಸಾಂಗ್ಸ್ ಅದ್ಭುತವಾಗಿ ಮೂಡಿಬಂದಿವೆ. ಅದೇ ನನಗೆ ಸಿನಿಮಾ ಮಾಡಲು ಆತ್ಮವಿಶ್ವಾಸ ಹೆಚ್ಚಿಸಿದ್ದು. ಇಲ್ಲದಿದ್ದರೆ ಚಿತ್ರ ಪ್ರಾರಂಭಿಸುತ್ತಿರಲಿಲ್ಲ’ ಎಂದು ಹೇಳಿಕೊಳ್ಳುತ್ತಾರೆ.

    ರಮ್ಯಾ ಇರ್ತಾರಾ? ರಚಿತಾ ಬರ್ತಾರಾ?; ಆಗಸ್ಟ್ 15ರಂದು ಸೆಟ್ಟೇರಲಿದೆ ‘ಸಂಜು ವೆಡ್ಸ್ ಗೀತಾ 2’

    ರಚಿತಾ ರಾಮ್ ಜತೆ ಮಾತುಕತೆ
    ಮೊದಲ ಚಿತ್ರದಲ್ಲಿ ನಾಯಕಿಯಾಗಿದ್ದ ರಮ್ಯಾ ಅವರೇ ಈ ಚಿತ್ರದಲ್ಲೂ ಮುಂದುವರಿಯಬೇಕು ಎಂಬುದು ನಾಗಶೇಖರ್ ಅವರ ಅಭಿಲಾಷೆ. ಆದರೆ, ಅವರು ಸದ್ಯ ವಿದೇಶದಲ್ಲಿರುವ ಕಾರಣ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಆದರೆ, ಚಿತ್ರದಲ್ಲಿ ಅವರನ್ನು ವಿಶೇಷ ಪಾತ್ರದಲ್ಲಾದರೂ ಕರೆತರಬೇಕು ಎಂಬ ಆಲೋಚನೆ ಅವರದು. ‘ನಾಯಕಿ ಯಾರು ಅಂತ ಇನ್ನೂ ನಿರ್ಧರಿಸಿಲ್ಲ. ರಚಿತಾ ರಾಮ್ ಜತೆ ಒಂದು ಸುತ್ತಿನ ಮಾತುಕತೆ ಆಗಿದೆ. ಇನ್ನೊಂದು ರೌಂಡ್ ಡಿಸ್ಕಷನ್ ಆಗಬೇಕಿದೆ. ನಂತರ ಸ್ಪಷ್ಟತೆ ದೊರೆಯಲಿದೆ’ ಎನ್ನುತ್ತಾರೆ ನಾಗಶೇಖರ್.

    ಸ್ವಿಜರ್ಲೆಂಡಿನಲ್ಲಿ ಅರ್ಧ ಸಿನಿಮಾ
    ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ನಾಗಶೇಖರ್ ಅವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಇದು ಮೊದಲ ಚಿತ್ರದ ಮುಂದುವರಿಯುವ ಹೊಸ ಕಥೆ. ಆಗಸ್ಟ್ 15 ಸಿನಿಮಾ ಲಾಂಚ್ ಮಾಡಲಿದ್ದೇವೆ. ಸುಂದರ ಲೊಕೇಷನ್‌ಗಳಲ್ಲಿ ಚಿತ್ರೀಕರಿಸಲಿದ್ದೇವೆ. ಸ್ವಿಜರ್ಲೆಂಡ್‌ನಲ್ಲಿ ಅರ್ಧ ಸಿನಿಮಾ ಶೂಟಿಂಗ್ ನಡೆಯಲಿದೆ. ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮೂಡಿಬರಲಿದೆ’ ಎನ್ನುತ್ತಾರೆ ನಾಗಶೇಖರ್. ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತದ ಜತೆಗೆ ಕವಿರಾಜ್ ಸಾಹಿತ್ಯ, ಸತ್ಯ ಹೆಗಡೆ ಛಾಯಾಗ್ರಹಣ ಹಾಗೂ ಕಾಲಿವುಡ್ ಮೂಲದ ಆ್ಯಂತೋನಿ ಸಂಕಲನವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts