ಪ್ರಭಾಸ್ ಚಿತ್ರಕ್ಕೆ ಚುನಾವಣಾ ಶಾಕ್.. ಕಲ್ಕಿ ಬಿಡುಗಡೆ ಮುಂದೂಡಿಕೆ?

kalki
Published on

ಹೈದರಾಬಾದ್​: ಟಾಲಿವುಡ್​ನ ಪ್ರಮುಖ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಬ್ಯಾನರ್‌ನ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿರ್ಮಾಣವಾಗುತ್ತಿರುವ ಬಹುತಾರಾಗಣದ ಪ್ರತಿಷ್ಠಿತ ಚಿತ್ರ ಕಲ್ಕಿ 2898 ಚುನಾವಣೆ ಪ್ರಯುಕ್ತ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ.

ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರೆಬೆಲ್ ಸ್ಟಾರ್ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರ ಮೇ 9 ರಂದು ಬಿಡುಗಡೆಯಾಗಲಿದೆ. ಆದರೆ ಚಿತ್ರದ ಬಿಡುಗಡೆ ಮುಂದೂಡುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಸಾರ್ವತ್ರಿಕ ಚುನಾವಣೆಗೆ ಅಧಿಸೂಚನೆ ಪ್ರಕಟಿಸಿದೆ. ಈ ಚುನಾವಣೆಗಳು ವಿವಿಧ ರಾಜ್ಯಗಳಲ್ಲಿ ಏಳು ಹಂತಗಳಲ್ಲಿ ನಡೆಯಲಿವೆ. ಏಪ್ರಿಲ್ 19 ರಂದು ಮೊದಲ ಹಂತ, ಏಪ್ರಿಲ್ 26 ರಂದು ಎರಡನೇ ಹಂತ, ಮೇ 7 ರಂದು ಮೂರನೇ ಅವಧಿಯ ಚುನಾವಣೆ, ಮೇ 13 ರಂದು ನಾಲ್ಕನೇ ಅವಧಿಯ ಚುನಾವಣೆ, ಮೇ 210 ರಂದು ಐದನೇ ಅವಧಿಯ ಚುನಾವಣೆ, ಮೇ 25 ರಂದು ಆರನೇ ಅವಧಿಯ ಚುನಾವಣೆ ಮತ್ತು ಜೂನ್‌ನಲ್ಲಿ ಏಳನೇ ಅವಧಿಯ ಚುನಾವಣೆಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net