ಮೊಜಾಂಬಿಕ್​ ನಲ್ಲಿ ಫುಟ್ಬಾಲ್​ ಮೈದಾನವಾಯಿತು ಮರಣದಂಡನೆಯ ಕಣ: 50ಕ್ಕೂ ಹೆಚ್ಚು ಜನರ ತಲೆ ಕತ್ತರಿಸಿದ್ರು ಉಗ್ರರು..

is_militants Africa mozambic
Published on

ಮಾಪುತೊ: ಆಫ್ರಿಕನ್ ರಾಷ್ಟ್ರ ಮೊಜಾಂಬಿಕ್​ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಇಸ್ಲಾಮಿಕ್ ಸ್ಟೇಟ್​ (ಐಎಸ್​) ಉಗ್ರರು ಫುಟ್ಬಾಲ್ ಮೈದಾನವನ್ನೇ ಮರಣದಂಡನೆ ಕಣವನ್ನಾಗಿಸಿ 50ಕ್ಕೂ ಹೆಚ್ಚು ಜನರ ತಲೆ ಕತ್ತರಿಸಿ ಶಾಕ್ ನೀಡಿದ್ದಾರೆ. ಉತ್ತರ ಮೊಜಾಂಬಿಕ್​​ನ ನಂಜಾಬಾ ಗ್ರಾಮದಲ್ಲಿ ಶುಕ್ರವಾರ ಈ ಉಗ್ರ ದಾಳಿ ನಡೆದಿದೆ.

ನಂಜಾಬಾ ಗ್ರಾಮಕ್ಕೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಉಗ್ರರು ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತ ಗ್ರಾಮಸ್ಥರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಳಿಕ, ಗ್ರಾಮಸ್ಥರನ್ನು ಬಂಧಿಗಳನ್ನಾಗಿಸಿ ಕರೆದೊಯ್ದು ಫುಟ್ಬಾಲ್ ಮೈದಾನದಲ್ಲಿ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾರೆ.

ಸಂಘರ್ಷವೇರ್ಪಟ್ಟಿರುವ ಈ ಪ್ರಾಂತ್ಯದಲ್ಲಿ ಉಗ್ರರ ದಬ್ಬಾಳಿಕೆಗೆ ಕನಿಷ್ಠ 2,000 ಜನ ಮೃತಪಟ್ಟು 4 ಲಕ್ಷಕ್ಕೂ ಹೆಚ್ಚು ಜನ ನಿರ್ವಸಿತರಾಗಿದ್ದಾರೆ. ಆಫ್ರಿಕನ್ ರಾಷ್ಟ್ರಗಳ ಪೈಕಿ ದಕ್ಷಿಣ ಭಾಗದಲ್ಲಿರುವ ರಾಷ್ಟ್ರದಲ್ಲಿ ಐಎಸ್ ಉಗ್ರರ ಪ್ರಾಬಲ್ಯ ಹೆಚ್ಚಾಗಿದ್ದು, ಜನ ಕಂಗಾಲಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net