ಸಿನಿ ಸಿದ್ಧ ಸೂತ್ರಕ್ಕೆ ಅಂಟಿಕೊಂಡ ಸೌತ್​ ಬ್ಯೂಟಿ: ಯುವ ನಾಯಕನ ಜತೆ ಲಿಪ್​ ಲಾಕ್​ಗೆ ರೆಡಿ ಎಂದ ಕೀರ್ತಿ​? Keerthi Suresh

Keerthi Suresh
Published on

Keerthi Suresh : ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡ ಕೆಲವು ನಟಿಯರು ಬಾಲಿವುಡ್‌ಗೆ ಕಾಲಿಟ್ಟ ಬಳಿಕ ಗ್ಲಾಮರ್‌ನ ಬಾಗಿಲು ತೆರೆಯುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೀರ್ತಿ ಸುರೇಶ್.

ಹೌದು, ಶ್ರೇಷ್ಠ ನಟಿಯಾಗಿ ಕಾಲಿವುಡ್​ ಹಾಗೂ ಟಾಲಿವುಡ್ ಪ್ರೇಕ್ಷಕರ ಮೇಲೆ ಅಳಿಸಲಾಗದ ಛಾಪು ಮೂಡಿಸಿರುವ ಕೀರ್ತಿ, ತುಂಬಾ ವರ್ಷಗಳವರೆಗೆ ಸಿನಿಮಾಗಳ ಸಿದ್ಧ ಸೂತ್ರಕ್ಕೆ ಅಂಟಿಕೊಂಡಿರಲಿಲ್ಲ. ಅಂದರೆ, ಗ್ಲಾಮರ್ ಇಲ್ಲದ, ಲಿಪ್-ಕಿಸ್ ಇಲ್ಲದ ದೃಶ್ಯಗಳಲ್ಲಿ ಮಾತ್ರ ನಟಿಸುತ್ತಿದ್ದರು. ಆದರೆ, ಬಾಲಿವುಡ್​ ಹಾದಿಯನ್ನು ಹಿಡಿದ ಬಳಿಕ ಕೀರ್ತಿ ಸುರೇಶ್​ ಅವರ ವೃತ್ತಿ ಜೀವನವೇ ಬದಲಾಯಿತು.

ವರುಣ್ ಧವನ್ ನಟನೆಯ ಬೇಬಿ ಜಾನ್ ಚಿತ್ರದಲ್ಲಿ ಹಿಂದೆಂದೂ ಕಾಣದಂತಹ ಹಾಟ್​ ಅವತಾರದಲ್ಲಿ ಕೀರ್ತಿ ಸುರೇಶ್​ ಕಾಣಿಸಿಕೊಂಡರು. ಇದನ್ನು ನೋಡಿದ ದಕ್ಷಿಣ ಭಾರತ ಸಿನಿ ರಂಗದ ಪ್ರೇಕ್ಷಕರು ಒಂದು ಕ್ಷಣ ತಮ್ಮ ಹುಬ್ಬೇರಿಸಿದರು.

ಬೇಬಿ ಜಾನ್​ನಲ್ಲಿ ಮಾತ್ರವಲ್ಲದೆ, ಬಾಲಿವುಡ್ ವೆಬ್ ಸರಣಿಯಲ್ಲೂ ತಮ್ಮ ಗಂಭೀರ ಮತ್ತು ಗ್ಲಾಮರಸ್ ಲುಕ್​ನಲ್ಲಿ ಕೀರ್ತಿ ಸುರೇಶ್​ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಏಳು ತಿಂಗಳ ಹಿಂದೆಯೇ ಫಸ್ಟ್ ಲುಕ್ ಬಿಡುಗಡೆಯಾಗಿದ್ದರೂ, ಈ ವೆಬ್ ಸರಣಿಯ ಯಾವುದೇ ಅಪ್ಡೇಟ್ ಇಲ್ಲ. ಯಾವಾಗ ಸ್ಟ್ರೀಮ್ ಆಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಇನ್ನು ದಕ್ಷಿಣದಲ್ಲಿ ಮಾತ್ರ ಕೀರ್ತಿ ಅವರು ಅದೇ ಹೋಮ್ಲಿ ಲುಕ್ ಅನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆದಾಗ್ಯೂ, ಇಲ್ಲಿಯೂ ಅದು ಬದಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಜಯ್ ದೇವರಕೊಂಡ ಅವರ ರೌಡಿ ಜನಾರ್ಧನ ಚಿತ್ರದಲ್ಲಿ ಕೀರ್ತಿ ಅವರನ್ನು ಅಂತಿಮಗೊಳಿಸಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಸಿನಿಮಾಗಾಗಿ ಕೀರ್ತಿಯವರು ಕೆಲವು ನಿಯಮಗಳನ್ನು ಮುರಿಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಸಿನಿಮಾದಲ್ಲಿ ಕೀರ್ತಿ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಲಿಪ್ ಸೀನ್​ಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್​ನಲ್ಲಿ ಹರಿದಾಡುತ್ತಿದೆ. ವಾಸ್ತವವಾಗಿ, ಈ ಆಫರ್ ಮೊದಲು ರುಕ್ಮಿಣಿ ವಸಂತ್ ಅವರಿಗೆ ಸಿಕ್ಕಿತ್ತು. ಆದರೆ, ಇಲ್ಲಿಯವರೆಗೆ ಗ್ಲಾಮರ್ ಪಾತ್ರ ಮಾಡದ ರುಕ್ಮಿಣಿ, ಲಿಪ್ ಕಿಸ್ ಎಂದ ಕೂಡಲೇ ಆಫರ್ ತ್ಯಜಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಮದುವೆಯಾದ ನಂತರ ಕೀರ್ತಿ ಅವರು ಈ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ದಸರಾ ದಿನದಂದು ಅದ್ದೂರಿಯಾಗಿ ಪ್ರಾರಂಭವಾಗಲಿರುವ ರೌಡಿ ಜನಾರ್ದನದಲ್ಲಿ ಕೀರ್ತಿ ಸುರೇಶ್ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net