ಸಹಿ ಕೆಳಗೆ ಗೆರೆ ಎಳೆಯೋದು ಎಷ್ಟು ಸರಿ? ಒಂದು ಚಿಕ್ಕ ಸಹಿ ನಿಮ್ಮ ಭವಿಷ್ಯವನ್ನೇ ಬದಲಿಸಬಹುದು! Signature

Signature
Published on

Signature : ಪ್ರತಿಯೊಬ್ಬರ ಜೀವನದಲ್ಲಿಯೂ ಸಹಿ ವಿಶೇಷ ಸ್ಥಾನವನ್ನು ಪಡೆದಿದೆ. ಸಹಿ ಹಾಕೋದು ಕೇವಲ ಒಂದು ಕಲೆ ಮಾತ್ರವಲ್ಲ, ಇದು ವ್ಯಕ್ತಿಯ ಗುರುತನ್ನು ಪ್ರತಿಬಿಂಬಿಸುವುದಲ್ಲದೆ ಆಲೋಚನೆ, ವ್ಯಕ್ತಿತ್ವ ಮತ್ತು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಒಬ್ಬೊಬ್ಬರ ಸಿಗ್ನೇಚರ್​​ ಒಂದೊಂದು ರೀತಿ ಇರುತ್ತೆ. ಸುಂದರಾದ ಹಾಗೂ ಆಕರ್ಷಕವಾದ ಸಹಿ ಹಾಕಲು ಎಲ್ಲರು ಬಯಸುತ್ತಾರೆ. ಸಹಿ ನಿಮ್ಮ ಯಶಸ್ಸು, ಆತ್ಮವಿಶ್ವಾಸಕ್ಕೆ ಅಡ್ಡಿಯಾಗಬಹುದು. ಅನೇಕರು ತಮ್ಮ ಸಹಿ ಕೆಳಗೆ ಲೈನ್​ ಎಳೆಯುತ್ತಾರೆ.

ಸಹಿ ಕೆಳಗೆ ಲೈನ್​​ ಎಳೆಯೋದು ಒಬ್ಬ ವ್ಯಕ್ತಿಯ ದೃಢನಿಶ್ಚಿತತೆಯನ್ನು ಸೂಚಿಸುತ್ತದೆ. ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವ್ಯಕ್ತಿ ತನ್ನ ಕೆಲಸದಲ್ಲಿ ನಿರಂತರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನೀವು ಯಾವ ರೀತಿ ಸಹಿ ಹಾಕುತ್ತೀರಿ ಎಂಬುದರ ಆಧಾರದ ಮೇಲೆ ಇದನ್ನು ನಿರ್ಣಯಿಸಲಾಗುತ್ತದೆ.

ಗೆರೆಯ ಉದ್ದ ಮತ್ತು ದಿಕ್ಕು :

ನಿಮ್ಮ ಸಹಿ ಕೆಳಗೆ ಉದ್ದವಾದ ಹಾಗೂ ನೇರವಾದ ಗೆರೆ ಎಳೆದರೆ ಅದು ನಿಮ್ಮ ಆತ್ಮವಿಶ್ವಾಸ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸುತ್ತದೆ. ವಾಸ್ತಶಾಸ್ತ್ರದ ಪ್ರಕಾರ ಸಹಿ ಕೆಳಗೆ ಎಳೆಯುವ ಗೆರೆ, ಸಹಿಗಿಂತ ಉದ್ದವಾಗಿರಬೇಕು. ಅದು ಬಾಗದೆ ನೇರವಾಗಿರಬೇಕು.

ಒಂದಕ್ಕಿಂತ ಹೆಚ್ಚು ಗೆರೆ :

ಹೆಚ್ಚಿನ ಜನರು ತಮ್ಮ ಸಹಿ ಕೆಳಗೆ ಒಂದಕ್ಕಿಂತ ಹೆಚ್ಚು ಗೆರೆಗಳನ್ನು ಎಳೆಯುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಒಂದಕ್ಕಿಂತ ಹೆಚ್ಚು ಗೆರೆ ಎಳೆಯೋದು ಶುಭವಲ್ಲ. ಹೆಚ್ಚು ಗೆರೆ ಎಳೆಯೋದು ಮಾನಸಿಕ ತೊಂದರೆಗಳು ಹಾಗೂ ಗೊಂದಲವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವ್ಯಕ್ತಿ ಅನೇಕ ಬಾರಿ ಸರಿಯಾದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವಿದಿಲ್ಲ. ಇದು ಯಶಸ್ಸಿಗೆ ಅಡ್ಡಿಯನ್ನುಂಟು ಮಾಡುತ್ತದೆ. ಜೀವನದಲ್ಲಿ ಅನೇಕ ಬಾರಿ ಅಡೆತಡೆಗಳನ್ನು ಎದುರಿಸಲಾಗುತ್ತದೆ ಎಚ್ಚರ.

ಗೆರೆ ಹೀಗಿದ್ದರೂ ಒಳ್ಳೆಯದಲ್ಲ :

ಅನೇಕರು ಸಹಿ ಮಧ್ಯೆ ಗೆರೆ ಎಳೆಯುತ್ತಾರೆ ಇಲ್ಲವೆ ಗೆರೆಯನ್ನು ಅರ್ಧಕ್ಕೆ ನಿಲ್ಲಿಸಿ ಅದಕ್ಕೆ ಬೇರೆ ಶೇಪ್ ನೀಡ್ತಾರೆ. ಯಾವಾಗಲೂ ಗೆರೆ ನೇರವಾಗಿರಬೇಕು. ಯಾವುದೇ ಏರಿಳಿತವಿರಬಾರದು. ಇದು ನಿಮ್ಮ ಜೀವನದಲ್ಲಿ ಸಮಸ್ಯೆ ಹುಟ್ಟು ಹಾಕುತ್ತದೆ. ಸಫಲತೆಯ ಮಾರ್ಗಕ್ಕೆ ತಡೆಯಾಗುತ್ತದೆ.

ವಕ್ರ ಗೆರೆ :

ಸಹಿ ಕೆಳಗೆ ನೀವು ಎಳೆದ ಗೆರೆ ಚಿಕ್ಕದಾಗಿದ್ದರೆ ಮತ್ತು ವಕ್ರವಾಗಿದ್ದರೆ ಅದು ಶುಭವಲ್ಲ. ಅದು ನಿಮ್ಮ ಜೀವನದಲ್ಲಿ ಗೊಂದಲ ಮತ್ತು ಅಡಚಣೆಯನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಯಾವುದೇ ಕಾರಣಕ್ಕೂ ಗೆರೆಯನ್ನು ಮತ್ತೆ ಹಿಂದೆ ತರಬಾರದು. ವಾಸ್ತು ಶಾಸ್ತ್ರದ ಪ್ರಕಾರ, ನೀವು ಸಹಿಯ ಅಡಿಯಲ್ಲಿ ಒಂದು ರೇಖೆಯನ್ನು ರಚಿಸಿದರೆ, ಅದು ಆ ರೇಖೆಯ ಗಾತ್ರ ಮತ್ತು ದಿಕ್ಕನ್ನು ಅವಲಂಬಿಸಿ ನಿಮ್ಮ ಜೀವನದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ.

ಸಹಿ ಕೆಳಗೆ ಗೆರೆ ಪ್ರಯೋಜನಕಾರಿಯೇ?

ನೀವು ಸಹಿ ಕೆಳಗೆ ಗೆರೆ ಎಳೆಯುವುದರಿಂದ ಯಾವುದೇ ನಷ್ಟವಿಲ್ಲ. ಆದರೆ ನೀವು ಹೇಗೆ ಗೆರೆ ಎಳೆದಿದ್ದೀರಿ ಎಂಬುದು ಮುಖ್ಯವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಗೆರೆ ನೇರ ಹಾಗೂ ಉದ್ದವಿದ್ದರೆ ಮಾತ್ರ ಒಳ್ಳೆಯದು. ಒಂದುವೇಳೆ ನೀವು ವಕ್ರವಾದ, ತಿರುಗಿದ ಸಹಿ ಹಾಕ್ತಿದ್ದರೆ ಅದನ್ನು ಬದಲಿಸಬಹುದು. ಸಹಿ ಬದಲಿಸುವ ಮುನ್ನ ನೇರವಾದ, ದೊಡ್ಡದಾದ, ಸ್ಪಷ್ಟವಾದ ಗೆರೆಯನ್ನು ಹಾಕಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net