ಹನಿಮೂನ್​ ಕೋಣೆಯಲ್ಲಿ ಸಂಭ್ರಮಾಚರಣೆ: ವಿಡಿಯೋ ಹಂಚಿಕೊಂಡ ನವದಂಪತಿಗೆ ನೆಟ್ಟಿಗರ ತರಾಟೆ! Honeymoon

Honeymoon
Published on

ಈ ಕಣ್ಣಲ್ಲಿ ಇನ್ನೂ ಏನೇನು ನೋಡ್ಬೇಕೋ! ಎಂಬ ಡೈಲಾಗ್ ಈ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ನೆನಪಾಗುತ್ತೆ. ಈ ಸಾಮಾಜಿಕ ಜಾಲತಾಣ ಯುಗದಲ್ಲಿ ಎಲ್ಲರೂ ಫೇಮಸ್ ಆಗಬೇಕು ಎಂಬ ಉದ್ದೇಶದಿಂದ ಹುಚ್ಚುಚ್ಚಾಗಿ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಒಬ್ಬರು ತಮ್ಮ ಅಡುಗೆ ಕೋಣೆಯನ್ನು ತೋರಿಸಿದರೆ, ಕೆಲವರು ತಮ್ಮ ಬಾತ್ರೂಮ್ ತೋರಿಸುತ್ತಾರೆ. ಅದೇ ರೀತಿ ಫ್ರಿಡ್ಜ್, ವಾಷಿಂಗ್​ ಮೆಶಿನ್​ ಸಹ ತೋರಿಸುತ್ತಾರೆ.

ಕೆಲವರಂತೂ ಟ್ಯಾಲೆಂಟ್ ಹೆಸರಿನಲ್ಲಿ ಅಸಭ್ಯ ವಿಡಿಯೋ ಮಾಡಿ ಎಕ್ಸ್​ಪೋಸ್ ಮಾಡುತ್ತಿದ್ದಾರೆ. ಬೆಡ್​ರೂಮಿನಲ್ಲಿ ನಡೆಯುವ ಅತ್ಯಂತ ರಹಸ್ಯ ವಿಚಾರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಇತ್ತೀಚೆಗೆ ನವದಂಪತಿ, ಸಿಂಗರಿಸಿದ ತಮ್ಮ ಹನಿಮೂನ್ ( Honeymoon )​ ಕೋಣೆಯಲ್ಲಿ ಕುಳಿತು ಸಂಭ್ರಮಾಚರಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಆನೆ ಸೊಂಡಿಲು ಅಂತ ಕನ್ಫ್ಯೂಸ್​ ಆಗ್ಬೇಡಿ ಇದೊಂದು ಹಾವು! ಇದರ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Elephant trunk snake ವಿಡಿಯೋದಲ್ಲಿ ಏನಿದೆ? ವೈರಲ್​​ ಆಗಿರುವ ವಿಡಿಯೋದಲ್ಲಿ ನವದಂಪತಿಯ ಹನಿಮೂನ್​ ಕೋಣೆಯನ್ನು ಮೊದಲು ತೋರಿಸಲಾಗಿದೆ. ರೂಮಿನ ಒಳಗೆ ಸುಂದರವಾದ ಹೂವುಗಳಿಂದ ಅಲಂಕರಿಸಲ್ಪಟ್ಟ ಹಾಸಿಗೆ ಇದೆ. ಟೇಬಲ್​ ಮೇಲೆ ಹಣ್ಣು, ಹಾಲು, ಕೇಕ್ ಮತ್ತು ದುಬಾರಿ ಶಾಂಪೇನ್ ಕೂಡ ಇದೆ. ವಧು ತನ್ನ ಎರಡೂ ಕೈಗಳಿಂದ ಮುಖವನ್ನು ಮುಚ್ಚಿ, ನಾಚಿಕೊಳ್ಳುತ್ತಾ ನಗುತ್ತಿರುವ ದೃಶ್ಯವೂ ಇದೆ. ಬಳಿಕ ದಂಪತಿ ಕೇಕ್ ಕತ್ತರಿಸಿ, ಒಬ್ಬರಿಗೊಬ್ಬರು ತಿನ್ನಿಸುವುದನ್ನು ನೋಡಬಹುದು. ನಂತರ ಶಾಂಪೇನ್​ ಡ್ರಿಂಕ್ಸ್​ ಸವಿಯುತ್ತಾರೆ. ಕೊನೆಯಲ್ಲಿ ತಮ್ಮ ಹಾಸಿಗೆ ಪಕ್ಕದಲ್ಲಿ ನಿಂತು ಇಬ್ಬರು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಶಾನ್ಮಿತ್ರ ಎಂಬುವರು ತಮ್ಮ ಇನ್​ಸ್ಟಾಗ್ರಾಂನಲ್ಲಿ 2023ರ ಡಿಸೆಂಬರ್​ 31ರಂದು ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಮನಾಲಿಯಲ್ಲಿ ಹನಿಮೂನ್​ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಮತ್ತೆ ವೈರಲ್​ ಆಗಿದ್ದು, ಈವರೆಗೂ 1.4 ಮಿಲಿಯನ್​ ಮಂದಿ ವೀಕ್ಷಣೆ ಮಾಡಿದ್ದಾರೆ. 23 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ರೀತಿಯ ವೈಯಕ್ತಿಕ ವಿಚಾರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net