ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದು ಕಷ್ಟವಾಗುತ್ತಿದಿಯೇ? ಹಾಗಿದ್ದರೆ, ಈ ರೀತಿ ಮಾಡಿ..| Kitchen

Garlic
Published on

Kitchen: ಬೆಳ್ಳುಳ್ಳಿ ವೈಜ್ಞಾನಿಕವಾಗಿ ಅಲಿಯಮ್ ಸ್ಯಾಟಿವಮ್ ಎಂದು ಕರೆಯಲ್ಪಡುವ ಒಂದು ಸಾಮಾನ್ಯ ಆಹಾರ ಪದಾರ್ಥವಾಗಿದೆ. ಇದು ಔಷಧೀಯ ಮತ್ತು ಪಾಕಶಾಲೆಯ ಗುಣಗಳಿಗೆ ಪ್ರಸಿದ್ಧವಾಗಿದೆ. ಇದು ಲಿಲಿಯೇಸಿ ಕುಟುಂಬಕ್ಕೆ ಸೇರಿದೆ ಮತ್ತು ಈರುಳ್ಳಿಯಂತಹ ಗಿಡಮೂಲಿಕೆಯಾಗಿದ್ದು, ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಹಾಗೂ ಸೋಂಕುಗಳ ವಿರುದ್ಧ ಹೋರಾಡಲು ಈ ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯುವುದು ಕೆಲವು ಜನರಿಗೆ ಬಾರೀ ಕಷ್ಟಕರ ಕೆಸವಾಗಿರುತ್ತದೆ. ಇನ್ನು ಹೆಚ್ಚು ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯುವುದರಿಂದ ಬೆಳರಳುಗಳು ನೋವುಂಟಾಗಬಹುದು. ಹಾಗೆಯೇ ಕೈಗಳು ಉರಿಯುವುದು, ಜಿಗುಟಾಗುವುದು, ಬೆರಳಿಗೆ ಬೆಳ್ಳುಳ್ಲಿ ಅಂಟಿಕೊಳ್ಳುವುದು, ಕೈಗಳು ವಾಸನೆ ಬರುವುದು ಇಂತಹ ಸಮಸ್ಯೆಗಳು ಎದುರಾಗುವುದರಿಂದ ಅನೇಕರು ಬೆಳ್ಳುಳ್ಳಿಯಿಂದ ದೂರ ಸರಿಯಬಹುದು.

ಇದನ್ನೂ ಓದಿ: ವಿಷ್ಣು ಸ್ಮಾರಕ ಮರು ನಿರ್ಮಿಸುವಂತೆ ಒತ್ತಾಯಿಸಿ ಅಭಿಮಾನಿಗಳ ಪ್ರತಿಭಟನೆ ನೀವು ಅಡುಗೆ ಮಾಡುವಾಗ ಸುಲಭವಾಗಿ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಬೇಕೆ ಹಾಗಿದ್ದರೆ, ತಕ್ಷಣವೇ ಇಲ್ಲಿ ನೋಡಿ....

ನೀರಿನಲ್ಲಿ ನೆನಸಿ

ಬೆಳ್ಳುಳ್ಳಿಯಿಂದ ಸುಲಭವಾಗಿ ಸಿಪ್ಪೆ ತೆಗೆಯಲು ಪ್ರಯತ್ನಿಸುವವರು ಈ ವಿಧಾನ ಅನುಸರಿಸಿದರೆ ಬಹಳ ಸುಲಭವಾಗಿ ಸಿಪ್ಪೆಯನ್ನು ತೆಗೆಯಬಹುದು. ಮೊದಲು ಬೆಳ್ಳುಳ್ಳಿಯನ್ನು ನೀರಿನಲ್ಲಿ ನೆನಸಿ, ಕೆಲ ಸಮಯದ ನಂತರ ಹೊರ ತೆಗೆದು ಮತರ, ಸಿಪ್ಪೆ ಸುಲಿಯಿರಿ ಈಗ ನಿಮ್ಮ ಕೈಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಮೈಕ್ರೊವೇವ್​ ಬಳಕೆ

ಮೈಕ್ರೊವೇವ್ ಸಹಾಯದಿಂದ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಬಹುದು. ಇಲ್ಲಿ ಬೆಳ್ಳುಳ್ಲೀಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ 30 ಸೆಕೆಂಡುಗಳ ಕಾಲ ಬಿಸಿ ಮಾಡಲು ಬಿಡಿ, ನಂತರ ಹೊರ ತೆಗೆದು ಸಿಪ್ಪೆ ಬಿಡಿಸಿರಿ. ಬಹಳ ಸುಲಭವಾಗಿ ಸಿಪ್ಪೆಗಳು ಹೊರಬರುತ್ತವೆ.

ಚಾಕುವಿನಿಂದ ಕತ್ತರಿಸಿ

ನೀವು ಅಡುಗೆ ಮಾಡುವಾಗ ಬೇರೆ ತರಕಾರಿಗಳನ್ನು ಕತ್ತರಿಸಲು ಬಳಸುವ ಚಾಕುವನ್ನು ತೆಗೆದುಕೊಂಡು ಬೆಳ್ಳುಳ್ಳಿಯ ತುದಿಯನ್ನು ಕತ್ತರಿಸಿ, ಇದರಿಂದ ಬೇಗನೆ, ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಲು ಸುಲಭವಾಗುತ್ತದೆ.

ಬಾಣಲೆಯಲ್ಲಿ ಬಿಸಿ ಮಾಡಿ

ಬೆಳ್ಳುಳ್ಳಿಯನ್ನು ಬಾಣಲೆಗೆ ಹಾಕಿ ಸ್ವಲ್ಪ ಸಮಯ ಬಿಸಿ ಮಾಡುವ ಮೂಲಕವು ನೀವು ಸಿಪ್ಪೆಯನ್ನು ತೆಗೆಯಬಹದು. ಮೊದಲು ಬಾಣಲೆಯನ್ನು ಬಿಸಿ ಮಾಡಿ, ನಂತರ ಬೆಳ್ಳುಳ್ಳಿಗಳನ್ನು ಹಾಕಿ ಸ್ವಲ್ಪ ಹುರಿಯಿರಿ, ತಣ್ಣಗಾದ ನಂತರ ಬೆಳ್ಳುಳ್ಳಿ ಎಳೆಗಳನ್ನು ಉಜ್ಜಿ ಸಿಪ್ಪೆ ಬಿಡಿಸಿರಿ. ಈ ರೀತಿ ಮಾಡುವುದರಿಂದ ನಿಮ್ಮ ಬೆರಳುಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net