More

    ಬಾಲಿವುಡ್ ನಟ ಇರ್ಫಾನ್​ ಖಾನ್​ ಆಸ್ಪತ್ರೆಗೆ ದಾಖಲು: ಐಸಿಯುನಲ್ಲಿ ವೈದ್ಯರ ನಿಗಾದಲ್ಲಿ ಚಿಕಿತ್ಸೆ

    ನವದೆಹಲಿ: ದೊಡ್ಡ ಕರುಳಿನ ಸೋಂಕಿನಿಂದಾಗಿ ಬಾಲಿವುಡ್​ ಹಿರಿಯ ನಟ ಇರ್ಫಾನ್​ ಖಾನ್​ ಅವರು ಮುಂಬೈನ ಕೊಕಿಲಬೆನ್​ ಧೀರೂಭಾಯಿ​ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇರ್ಫಾನ್​, ವಕ್ತಾರರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ಸದ್ಯ 53 ವರ್ಷದ ಇರ್ಫಾನ್, ಐಸಿಯುನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ.

    ಕರುಳಿನ ಸೋಂಕಿನಿಂದ ಇರ್ಫಾನ್​ ಅವರು ಧೀರೂಭಾಯಿ​ ಅಂಬಾನಿ ಆಸ್ಪತ್ರೆಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಿಜ. ಮುಂದಿನ ಅವರ ಆರೋಗ್ಯ ಮಾಹಿತಿಯನ್ನು ಅಪ್ಡೇಟ್​ ಮಾಡಲಾಗುವುದು. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದಾರೆ. ಅವರ ಬಲ ಮತ್ತು ಧೈರ್ಯ ಅನಾರೋಗ್ಯ ವಿರುದ್ಧ ಹೋರಾಡಲು ನೆರವಾಗಲಿದೆ ಮತ್ತು ಅವರ ಅತ್ಯದ್ಭುತ ಮನೋಬಲ ಮತ್ತು ಹಿತೈಷಿಗಳ ಪ್ರಾರ್ಥನೆಯಿಂದ ಬೇಗ ಗುಣಮುಖರಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಎರಡು ವರ್ಷಗಳ ಹಿಂದೆ ನ್ಯೂರೋಎಂಡೋಕ್ರೈನ್ ಟ್ಯೂಮರ್​ ಚಿಕಿತ್ಸೆಗೆ ಒಳಗಾದಾಗಿನಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇರ್ಫಾನ್​ ಇತ್ತೀಚೆಗಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಆದರೆ, ಕರೊನಾ ಲಾಕ್​ಡೌನ್​ನಿಂದಾಗಿ ಅಂತ್ಯಕ್ರಿಯೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

    ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಅಂಗ್ರೇಜಿ ಮೀಡಿಯಂ ಚಿತ್ರ ಲಾಕ್​ಡೌನ್​ ಕಾರಣದಿಂದ ಜನರನ್ನು ಹೆಚ್ಚು ರಂಜಿಸಲು ಸಾಧ್ಯವಾಗಲಿಲ್ಲ. ಬಿಡುಗಡೆಯಾದ ಎರಡೇ ದಿನದಲ್ಲಿ ಕರೊನಾ ಲಾಕ್​ಡೌನ್​ ಘೋಷಣೆಯಾಯಿತು. ಚಿತ್ರದಲ್ಲಿ ಕರೀನಾ ಕಪೂರ್​ ಖಾನ್​ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಅಂಗ್ರೇಜಿ ಮೀಡಿಯಂ ಚಿತ್ರ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಲಭ್ಯವಿದೆ. (ಏಜೆನ್ಸೀಸ್​)

    ಹೆರಿಗೆಯಾದ ನಂತರ ಕಳೆದುಕೊಂಡಿದ್ದ ಸ್ವಂತ ಮಗನನ್ನು 28 ವರ್ಷಗಳ ಬಳಿಕ ಮರಳಿ ಪಡೆದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts