ಮೊದಲ ಬಾರಿಗೆ ಪತ್ನಿಯ ಮುಖ ಬಹಿರಂಗ ಪಡಿಸಿದ ಕ್ರಿಕೆಟಿಗ ಇರ್ಫಾನ್ ಪಠಾಣ್; ಫೋಟೋ ವೈರಲ್

Irfan Pathan
Published on

ನವದೆಹಲಿ: ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಇದೇ ಮೊದಲ ಬಾರಿಗೆ ತಮ್ಮ ಪತ್ನಿ ಸಫಾ ಬೇಗ್ ಅವರ ಮುಖವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇರ್ಫಾನ್ ಪಠಾಣ್ ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತಮ್ಮ ಪತ್ನಿ ಸಫಾ ಬೇಗ್ ಜೊತೆಗಿನ ಫೋಟೋವನ್ನು ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ಬಾರಿಯೂ ಇರ್ಫಾನ್ ಪಠಾಣ್ ಪತ್ನಿಯೊಂದಿಗಿನ ಫೋಟೋಗಳನ್ನು ಶೇರ್ ಮಾಡುವಾಗ, ಸಫಾ ಬೇಗ್ ಅವರ ಮುಖ ಕಾಣದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ ಈ ಬಾರಿ ಇನ್ಸ್​ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಪತ್ನಿ ಸಫಾ ಬೇಗ್ ಅವರ ಮುಖ ಸ್ಪಷ್ಟವಾಗಿ ಕಾಣುತ್ತಿದ್ದು, ಇದು ವೈರಲ್ ಆಗಲು ಕಾರಣವಾಗಿದೆ.

ಕಳೆದ ಕೆಲ ದಿನಗಳ ಹಿಂದೆಯೂ ಇರ್ಫಾನ್ ಪಠಾಣ್ ದಂಪತಿಯ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಫೋಟೋಗಳಲ್ಲಿ ಪತ್ನಿ ಸಫಾ ಬೇಗ್ ತಮ್ಮ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಂಡಿದ್ದರು.

ಇರ್ಫಾನ್ ಪಠಾಣ್ ನಿವೃತ್ತಿಯ ನಂತರ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಹೊರತಾಗಿ ಕೆಲ ಫ್ರ್ಯಾಂಚೈಸಿ ಟೂರ್ನಿಗಳಲ್ಲಿ ಭಾಗವಹಿಸುತ್ತಿರುತ್ತಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net